Headlines

Ripponpete | ಕನಕದಾಸರು ಜಾತ್ಯತೀತ ದಾರ್ಶನಿಕರಾಗಿದ್ದರು – ಜನಾರ್ಧನ್ ಬಿ ನಾಯಕ್

ಕನಕದಾಸರು ಜಾತ್ಯತೀತ ದಾರ್ಶನಿಕರಾಗಿದ್ದರು – ಜನಾರ್ಧನ್ ಬಿ ನಾಯಕ್ ರಿಪ್ಪನ್ ಪೇಟೆ : ಜಗತ್ತು ಕಂಡ ಸರ್ವ ಶ್ರೇಷ್ಠ ಮಾನವತಾವಾದಿ ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದ ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂದು ಹಾಡಿ ಜಾತ್ಯತೀತ ದಾರ್ಶನಿಕರಾಗಿ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಉಪನ್ಯಾಸಕ  ಜನಾರ್ಧನ್.ಬಿ.ನಾಯಕ್ ಹೇಳಿದರು.  ಗುರುವಾರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಹಮ್ಮಿಕೊಂಡ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.  ಸಮಾಜದಲ್ಲಿ ಸಮಾನತೆ ಪ್ರತಿಪಾದಿಸಿದ ದಾಸ…

Read More

Ripponpete | ಸರ್ವ ಧರ್ಮದ ಸಾರವೂ ಒಂದೇ – ಪ್ರೋ ಹೆಚ್ ವಿ ರಾಮಪ್ಪಗೌಡ

ಸಂತೃಪ್ತಿಯ ಬದುಕಿಗೆ ಧರ್ಮ ಧಾರ್ಮಿಕ ಕಾರ್ಯಗಳು ಪೂರಕ ರಿಪ್ಪನ್‌ಪೇಟೆ;-ಆಘೋಚರ ಶಕ್ತಿಯೇ ದೇವರು.ಸರ್ವಾ ಧರ್ಮದ ಸಾರವೂ ಒಂದೇ ಅಗಿದ್ದು ಏಕಾಗ್ರತೆಯಿಂದ ಭಗವಂತನಲ್ಲಿ ಪ್ರಾರ್ಥಿಸಿದಲ್ಲಿ ಪುಣ್ಯ ಪ್ರಾಪ್ತಿಯೊಂದಿಗೆ ಸಂತೃಪ್ತಿ ದೊರೆಯುವುದೆಂದು  ಶಿವಮೊಗ್ಗ ಹೆರೆಗೊಡಿಗೆ ನಿವೃತ್ತ  ಪ್ರೋ.ಹೆಚ್.ವಿ.ರಾಮಪ್ಪಗೌಡ ಹೇಳಿದರು. ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾದ ಹೊಸನಗರದ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಮಿತಿ ಆಯೋಜಿಸಿದ್ದ ಗ್ರಾಮ ಸುಭಿಕ್ಷೆಗಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ೪೫೮ ನೇ ನಮ್ಮೂರ ನಮ್ಮ ಕೆರೆ ಹಸ್ತಾಂತರ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ದೇಶದಲ್ಲಿ ಭ್ರಷ್ಟಾಚಾರ…

Read More

ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 40 ಶಾಸಕರಿಗೆ ನಿಗಮ ಭಾಗ್ಯ..! | ಚಳಿಗಾಲ ಅಧಿವೇಶನದೊಳಗೆ ಆದೇಶ..!!

ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 40 ಶಾಸಕರಿಗೆ ನಿಗಮ ಭಾಗ್ಯ..! | ಚಳಿಗಾಲ ಅಧಿವೇಶನದೊಳಗೆ ಆದೇಶ..!! ಶಾಸಕರು, ವಿಧಾನಪರಿಷತ್ ಸದಸ್ಯರೂ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸೇರಿದಂತೆ 40 ಮಂದಿಯನ್ನು ಮೊದಲ ಹಂತದಲ್ಲಿ ನಿಗಮ ಮಂಡಳಿಗೆ ನೇಮಿಸಲು ನಿರ್ಧರಿಸಲಾಗಿದ್ದು ಒಂದೆರಡು ದಿನಗಳಲ್ಲಿ ಅಂತಿಮ ಪಟ್ಟಿ ಹೊರಬಿಳಲಿದೆ.ತಪ್ಪಿದಲ್ಲಿ ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ ಅಂತಿಮ ಪಟ್ಟಿ ಹೊರ ಬೀಳುವುದು ಗ್ಯಾರಂಟಿಯಾಗಿದೆ. ಮೂರು ಬಾರಿ ಶಾಸಕರಾಗಿರುವ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ರವರಿಗೆ ನಿಗಮ ಮಂಡಳಿ ಸ್ಥಾನಮಾನ ದೊರೆಯುವ…

Read More

Ripponpete | ಬ್ರಾಹ್ಮಣ ವಿದ್ಯಾರ್ಥಿನಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸಿದ ಪ್ರಕರಣ – ಶಿಕ್ಷಣ ಸಚಿವರಿಗೆ ಪತ್ರ ಬರೆದ ಬ್ರಾಹ್ಮಣ ಮಹಾಸಭಾ

ಶಿವಮೊಗ್ಗ : ಇತ್ತೀಚೆಗೆ ಹೊಸನಗರ ತಾಲೂಕಿನ ಅಮೃತ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಮೊಟ್ಟೆ ಬಲವಂತವಾಗಿ ಮೊಟ್ಟೆ ತಿನ್ನಿಸುತ್ತಿರುವ ಆರೋಪ ಕೇಳಿ ಬಂದಿತ್ತು.ನಂತರ ಈ ಬಗ್ಗೆ ಪೋಷಕರು ದೂರು ದಾಖಲಿಸಿದ್ದರು ಆ ನಂತರ ಹಿರಿಯ ಅಧಿಕಾರಿಗಳೆಲ್ಲಾ ಶಾಲೆಗೆ ಭೇಟಿ ನೀಡಿ ಶಿಕ್ಷಕನ ಬಳಿ ಕ್ಷಮೆ ಕೇಳಿಸಿ ಪ್ರಕರಣಕ್ಕೆ ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದರು ಈ ಬಗ್ಗೆ ಈಗ ರಾಜ್ಯ ಸರ್ಕಾರದ ವಿರುದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಿಡಿ ಕಾರುತ್ತಿದೆ. ಸಚಿವ ಮಧುಬಂಗಾರಪ್ಪಗೆ ಪತ್ರ ಬರೆದ ಬ್ರಾಹ್ಮಣ…

Read More

Shivamogga | ಗದ್ದೆಯಲ್ಲಿ ಕೆಲಸ ಮಾಡುತಿದ್ದಾಗ ಸಿಡಿಲು ಬಡಿದು ಸಹೋದರರಿಬ್ಬರು ಸಾವು

ಶಿವಮೊಗ್ಗ – ಸಿಡಿಲು ಬಡಿದು ಇಬ್ಬರು ಸಹೋದರರು ಮೃತಪಟ್ಟಿರುವ ದಾರುಣ ಘಟನೆ ಭದ್ರಾವತಿ ನಗರದ ಹುಣಸಕಟ್ಟೆ ಜಂಕ್ಷನ್ ನಲ್ಲಿ ನಡೆದಿದೆ. ಮೃತರನ್ನು ಎಸ್ ಬೀರೇಶ್(33) ಮತ್ತು ಎಸ್ ಸುರೇಶ್ (30) ಎಂದು ಗುರುತಿಸಲಾಗಿದೆ. ಇಬ್ಬರೂ ತಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಕಟಾವಿಗೆ ಸಿದ್ಧವಾಗಿದ್ದ ಭತ್ತದ ಬೆಳೆಗೆ ಕಾವಲು ಕಾಯಲು ಸಹೋದರರಿಬ್ಬರು ಹೋಗಿದ್ದರು. ರಾತ್ರಿ ಗದ್ದೆಗೆ ಕಾವಲಿಗೆಂದು ಹೋಗಿದ್ದವರು ಬೆಳಗ್ಗೆ ಮನೆಗೆ ಬಾರದ ಕಾರಣ ಆತಂಕಗೊಂಡಿದ್ದ ಕುಟುಬಸ್ಥರು ಗದ್ದೆಗೆ ತೆರಳಿ ನೋಡಿದಾಗ, ಸಹೋದರರಿಬ್ಬರೂ ಅಲ್ಲೇ…

Read More

Ripponpete| ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಹೊಂದಿರಬೇಕು : ಮೂಲೆಗದ್ದೇ ಶ್ರೀಗಳು

ರಿಪ್ಪನ್ ಪೇಟೆ ಶ್ರೀ ನಂದಿ ಹಾಸ್ಪಿಟಲ್ ನಲ್ಲಿ  ಉಚಿತ ವೈದ್ಯರ ಸೇವಾ ತಪಾಸಣೆಗೆ ಚಾಲನೆ. ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಹೊಂದಿರಬೇಕು : ಅಭಿನವ ಚನ್ನಬಸವ ಸ್ವಾಮೀಜಿ ರಿಪ್ಪನ್ ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಒತ್ತಡದ ಜೀವನವನ್ನು ನಡೆಸುತ್ತಿರುವ ಪ್ರತಿಯೊಬ್ಬರು. ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎಂದು ಶ್ರೀ ಸದಾನಂದ ಶಿವಯೋಗಾಶ್ರಮ ಮೂಲೆ ಗೆದ್ದೆ ಮಠದ ಶ್ರೀ ಅಭಿನವ ಚೆನ್ನಬಸವ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀ ನಂದಿ ಹಾಸ್ಪಿಟಲ್ ನಲ್ಲಿ ಉಚಿತ ವೈದ್ಯರ…

Read More

Ripponpete | ತೋಟ ಕಾಯಲು ಮಳವಳ್ಳಿಗೆ ಬಂದ ಸುಂದರಿಯರು..!!

Ripponpete | ತೋಟ ಕಾಯಲು ಮಳವಳ್ಳಿಗೆ ಬಂದ ಸುಂದರಿಯರು..!! ಆಹಾ ಈ ಬೆದರು ಗೊಂಬೆಗೆ ಜೀವ ಬಂದಂತಾಗಿದೆ ಎಂಬ ಗಾಳಿಪಟ ಚಿತ್ರದ ಭಟ್ಟರ ಹಾಡಿನ್ನು ನೆನಪಿಸುತ್ತದೆ ಈ ಸ್ಟೋರಿ,ನಾವುಗಳು ಇಷ್ಟು ದಿನ ತೋಟ ಹೊಲಗಳಿಗೆ ದೃಷ್ಟಿ ಆಗಬಾರದೆಂದು ದೇವರ ಹರಕೆ ಹಾಗೂ ಬೆದರು ಗೊಂಬೆಗಳನ್ನ ಇಟ್ಟಿದ್ದನ್ನ ಕಂಡಿದ್ದೇವೆ. ಇದೀಗ ವಿಭಿನ್ನವಾದ ಪ್ರಯೋಗಕ್ಕೆ ಶಿವಮೊಗ್ಗದ ರೈತ ಮುಂದಾಗಿದ್ದಾರೆ. ರಸ್ತೆ ಬದಿಯಲ್ಲಿರೋ ತಮ್ಮ ಬಾಳೆತೋಟಕ್ಕೆ ನಟಿಯರ ಫೋಟೋ ಹಾಕಿಸಿದ್ದಾರೆ.ದೃಷ್ಟಿಯ ತಲೆ ನೋವನ್ನು ಭಿನ್ನ ಪ್ರಯತ್ನದಿಂದ ಬೇರೆಡೆಗೆ ಸೆಳೆಯಲು ಮಳವಳ್ಳಿ ಗ್ರಾಮದ…

Read More

Accident | ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ – ಕಾರು ಚಾಲಕ ಗಂಭೀರ

ತುಂಗಾ ಕಾಲೇಜ್ ಸಮೀಪ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ – ಚಾಲಕನ ಸ್ಥಿತಿ ಗಂಭೀರ  ತೀರ್ಥಹಳ್ಳಿ : ಪಟ್ಟಣದ ತುಡಕಿ ಸಮೀಪದ ತುಂಗಾ ಕಾಲೇಜ್ ಸಮೀಪದಲ್ಲಿ ಶಿವಮೊಗ್ಗದಿಂದ ಬರುವ ಖಾಸಗಿ ಬಸ್ ಮತ್ತು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಫಾರ್ಚುನರ್ ವಾಹನ ಮುಖಾಮುಖಿ ಡಿಕ್ಕಿಯಾಗಿದ ಘಟನೆ ನಡೆದಿದೆ. ಈ ಭೀಕರ ಅಪಘಾತದಲ್ಲಿ ಟೊಯೋಟಾ ಫಾರ್ಚುನರ್ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಚಾಲಕನಿಗೆ ಗಂಭೀರವಾಗಿ ಗಾಯವಾಗಿದೆ. ಫಾರ್ಚುನರ್ ವಾಹನದಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ಅಡಿಗೆ ಗುತ್ತಿಗೆದಾರರಾದ ಬಳಗಟ್ಟೆ ಶಾಂತಪ್ಪ ಮತ್ತು ಕುಟುಂಬದವರಿದ್ದರು…

Read More

Hosanagara | ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿ ವಶಕ್ಕೆ – ಅಕ್ರಮ ಮರಳು ಮಾಫ಼ಿಯಾಕ್ಕೆ ಸಿಂಹಸ್ವಪ್ನವಾದ ಪಿಎಸ್‌ಐ ಶಿವಾನಂದ್

Hosanagara | ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿ ವಶಕ್ಕೆ – ಮರಳು ಮಾಫ಼ಿಯಾಕ್ಕೆ ಸಿಂಹಸ್ವಪ್ನವಾದ ಪಿಎಸ್‌ಐ ಶಿವಾನಂದ್ ಹೊಸನಗರ : ಅಕ್ರಮವಾಗಿ ಮರಳು ಸಾಗಾಟ ನಡೆಸುತಿದ್ದ ಟಿಪ್ಪರ್ ವಾಹನವನ್ನು ಪಟ್ಟಣದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ಶಿವಾನಂದ್ ವೈ ಕೆ ರವರ ನೇತೃತ್ವ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಟಿಪ್ಪರ್ (KA 17 F 2543) ಲಾರಿಯನ್ನು ವಶಕ್ಕೆ ಪಡೆದಿದ್ದಾರೆ ಅಕ್ರಮ ಮರಳು ದಂಧೆಕೋರರಿಗೆ ಸಿಂಹಸ್ವಪ್ನವಾಗಿರುವ…

Read More

Sagara | ನಿವೃತ್ತ ಮೆಸ್ಕಾಂ ಇಂಜಿನಿಯರ್ ಮನೆಗೆ ನುಗ್ಗಿ 9ಲಕ್ಷ ರೂ. ಮೌಲ್ಯದ ನಗನಗದು ದೋಚಿದ ಕಳ್ಳರು

Sagara | ನಿವೃತ್ತ ಮೆಸ್ಕಾಂ ಇಂಜಿನಿಯರ್ ಮನೆಗೆ ನುಗ್ಗಿ 9ಲಕ್ಷ ರೂ. ಮೌಲ್ಯದ ನಗನಗದು ದೋಚಿದ ಕಳ್ಳರು ಸಾಗರ : ಪಟ್ಟಣದ ವಿಜಯನಗರದ ಬಾಪಟ್ ಕಲ್ಯಾಣ ಮಂಟಪ ಹಿಂಭಾಗದ ರಸ್ತೆಯ ನಿವೃತ್ತ ಮೆಸ್ಕಾಂ ಇಂಜಿನಿಯರ್ ನಾಗರಾಜ್ ಎಂಬುವವರ ಮನೆಗೆ ನುಗ್ಗಿರುವ ಕಳ್ಳರು ಸುಮಾರು 9 ಲಕ್ಷ ರೂ. ಮೌಲ್ಯದ ನಗನಾಣ್ಯ ದೋಚಿರುವ ಘಟನೆಗೆ ಸಂಬಂಧಪಟ್ಟಂತೆ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿವೃತ್ತ ಮೆಸ್ಕಾಂ ಇಂಜಿನೀಯರ್ ನಾಗರಾಜ್ ಮತ್ತವರ ಕುಟುಂಬ ಕಾರ್ಯಕ್ರಮ ನಿಮಿತ್ತ ನ. 24ರಂದು ಸಿದ್ದಾಪುರ ಸಮೀಪದ…

Read More