Headlines

Shivamogga | ಸಾಗರ ರಸ್ತೆಯಲ್ಲಿ ಸರಣಿ ಅಪಘಾತ

Shivamogga | ಸಾಗರ ರಸ್ತೆಯಲ್ಲಿ ಸರಣಿ ಅಪಘಾತ  ಶಿವಮೊಗ್ಗದ ಎಪಿಎಂಸಿ ಯಾರ್ಡ್ ಮುಂಭಾಗದಲ್ಲಿ ಸರಣಿ ಅಪಘಾತ ಸಂಭವಿಸಿದೆ. ಅದೃಷ್ಣವಶಾತ್ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿರುವುದಿಲ್ಲ ಎಂದು ತಿಳಿದುಬಂದಿದೆ. ಎಪಿಎಂಸಿಯ ದುರ್ಗಾಂಬ ಪೆಟ್ರೋಲ್ ಬಂಕ್ ಬಳಿ ಚಲಿಸುತ್ತಿದ್ದ ಬ್ರೀಜಾ ಕಾರೊಂದು ಓಮಿನಿಗೆ ಗುದ್ದಿದೆ. ಓಮಿನಿ ಕಾರು ಮುಂದಿನ ಆಟೋಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯನ್ನ ತಪ್ಪಿಸಲು ಮುಂದಾದ ಓಮಿನಿ ಕಾರು ಡಿವೈಡರ್ ಮೇಲೆ ಹತ್ತಿ ನಿಂತಿದೆ. ಘಟನಾ ಸ್ಥಳದಲ್ಲಿ ಜನ ಜಮಾವಣೆಯಾಗಿದ್ದಾರೆ. ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ…

Read More

Thirthahalli | ಕಾಣೆಯಾಗಿದ್ದ ವ್ಯಕ್ತಿ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆ

Thirthahalli | ಕಾಣೆಯಾಗಿದ್ದ ವ್ಯಕ್ತಿ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಅಕ್ಲಾಪುರದ ನಿವಾಸಿ ರವಿ ಎಲ್ ಗೌಡ (55 ) ಎಂಬುವವರ ಶವ ಹೊದಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊದಲ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದೆ. ರವಿ ಗೌಡ ಶುಕ್ರವಾರ ಸಂಜೆಯಿಂದ ಕಾಣೆಯಾಗಿದ್ದು ಕುಟುಂಬಸ್ಥರು ಎಲ್ಲಾ ಕಡೆ ಹುಡುಕಿ ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಇಂದು ಶವವಾಗಿ ಪತ್ತೆಯಾಗಿದ್ದಾರೆ. ರವಿ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು…

Read More

Sagara | ಆಕಸ್ಮಿಕ ಬೆಂಕಿ: ಕೊಟ್ಟಿಗೆ, ಕಾರು ಸಂಪೂರ್ಣ ಭಸ್ಮ

Sagara | ಆಕಸ್ಮಿಕ ಬೆಂಕಿ: ಕೊಟ್ಟಿಗೆ, ಕಾರು ಸಂಪೂರ್ಣ ಭಸ್ಮ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುದರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಸುಳ್ಳಳ್ಳಿ ಸಮೀಪದ ಕೊಡನವಳ್ಳಿಯಲ್ಲಿ ಗಣಪತಿ ಕೆಂಚ ನಾಯ್ಕ ಅವರ ದನದ ಕೊಟ್ಟಿಗೆಯಲ್ಲಿ ಕಾಣಿಸಿದ ಆಕಸ್ಮಿಕ ಬೆಂಕಿಯ ಕಾರಣದಿಂದ ಕೊಟ್ಟಿಗೆ, ಸಂಗ್ರಹಿಸಿದ ಒಣ ಹುಲ್ಲು ಹಾಗೂ ಓಮಿನಿ ಕಾರು ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ. ಪ್ರಾಥಮಿಕ ಅಂದಾಜುಗಳ ಪ್ರಕಾರ ಸುಮಾರು ಏಳರಿಂದ ಎಂಟು ಲಕ್ಷ ರೂ.ಗಳ ನಷ್ಟ ಉಂಟಾಗಿದೆ ಎಂದು ಭಾವಿಸಲಾಗಿದೆ. ಬೆಂಕಿಯನ್ನು ನಂದಿಸಲು ಗಣಪತಿ,…

Read More

Sagara | ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಿದಂಬರರಾವ್ ಜಂಬೆ ರವರನ್ನು ಅಭಿನಂದಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಿದಂಬರರಾವ್ ಜಂಬೆ ರವರನ್ನು ಅಭಿನಂದಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ ಸಾಗರ : 2023 ನೇ ಸಾಲಿನ ರಾಜ್ಯೋತ್ಸವ (ರಂಗಭೂಮಿ ಕ್ಷೇತ್ರ) ಪ್ರಶಸ್ತಿಗೆ ಭಾಜನರಾದ ನಾಡಿನ ಹೆಸರಾಂತ ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ ರವರನ್ನು ಅವರ ಸ್ವಗೃಹದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಅಭಿನಂದಿಸಿ ಸನ್ಮಾನಿಸಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕೆಳದಿ ಸಮೀಪದ ಅಡ್ಡೇರಿ ಗ್ರಾಮದವರಾದ ಜಂಬೆಯವರು. ಕೆಳದಿಯ ಭಾರತಿ ಕಲಾವಿದರು ಸಂಸ್ಥೆಯ “ಸಂಗ್ಯಾ-ಬಾಳ್ಯಾ” ನಾಟಕದ ಮೂಲಕ ರಂಗಭೂಮಿಯನ್ನು ಪ್ರವೇಶಿಸಿ,…

Read More

ಪೆಟ್ರೋಲ್ ಬಂಕ್ ನಲ್ಲಿ ಮಲಗಿದ್ದವರ ಮೇಲೆ ಹರಿದ ಟಿಪ್ಪ‌ರ್ ಲಾರಿ – ಸ್ಥಳದಲ್ಲೇ ತ್ಯಾಗರ್ತಿ ಮೂಲದ ಕಾರ್ಮಿಕ ಸಾವು | accident

ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಕೊರ್ಲಿಕೊಪ್ಪ ಮೂಲದ ಬಾಳೆಕಾಯಿ ಲೋಡ್ ಮಾಡುವ ವ್ಯಕ್ತಿಯೊಬ್ಬನ ಮೇಲೆ ಟಿಪ್ಪರ್ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಶಿವರಾಜ್(38) ಸಾಗರ ತಾಲೂಕಿನ ಕೊರ್ಲಿ ಕೊಪ್ಪದ ನಿವಾಸಿಯಾಗಿದ್ದು. ಶಿವರಾಜ್ ಹಾಗೂ ಮಹೇಂದ್ರ ಎಂಬವರು ಪೆಟ್ರೋಲ್ ಪಂಪ್ ಹತ್ತಿರ ತಮ್ಮ ವಾಹನ ಇಟ್ಟು ಮಲಗಿದ್ದರು. ಈ ಸಂದರ್ಭದಲ್ಲಿಯೇ ಟಿಪ್ಪರ್ ಹರಿದಿದೆ. ಇದರಿಂದ ಶಿವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮಹೇಂದ್ರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,…

Read More

Shivamogga | ಮಣ್ಣು ಕುಸಿದು ಕಾರ್ಮಿಕ ಸಾವು

ಶಿವಮೊಗ್ಗ : ರೈಲ್ವೆ ಮೇಲ್ಸೇತುವೆ ಕೆಳಭಾಗದ ಅಂಡರ್ ಗ್ರೌಂಡ್ ಪೈಪ್​ಲೈನ್​ ಅಳವಡಿಕೆಗಾಗಿ ಮಣ್ಣು ತೆಗೆಯುವಾಗ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಮಣ್ಣು ಕುಸಿದು ಮೃತಪಟ್ಟ ಕಾರ್ಮಿಕನನ್ನು ಶಿವಮೊಗ್ಗ ತಾಲೂಕು ಮಂಡೆನಕೊಪ್ಪದ ಸತೀಶ್ ನಾಯ್ಕ ಎಂದು ಗುರುತಿಸಲಾಗಿದೆ.  ಶಿವಮೊಗ್ಗದ ನವಲೆ ರಸ್ತೆಯ ಭಾಗದಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ಮೇಲ್ಸೇತುವೆ ಕೆಳಭಾಗದಲ್ಲಿ ಅಂಡರ್ ಗ್ರೌಂಡ್ ಪೈಪ್ ಅಳವಡಿಕೆ ಕಾರ್ಯ ನಡೆಸಲಾಗುತ್ತಿದೆ. ಜೆಸಿಬಿ ಮೂಲಕ ಮಣ್ಣು ತೆಗೆದು ಪೈಪ್ ಅಳವಡಿಸಲಾಗುತ್ತಿತ್ತು. ಪೈಪ್ ಅಳವಡಿಕೆ ಮಾಡಲು ಮಣ್ಣು…

Read More

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ – ನಿಟ್ಟುಸಿರು ಬಿಟ್ಟ ಜನತೆ| leopard

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ – ನಿಟ್ಟುಸಿರು ಬಿಟ್ಟ ಜನತೆ| leopard ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿಮ ಕಾರೆಹಳ್ಳಿ ಭಾಗದಲ್ಲಿ ಇತ್ತೀಚಿಗೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರ ಜನರ ನಿದ್ದೆಗೆಡಿಸಿತ್ತು. ನಾಯಿಯ ಮೇಲೂ ದಾಳಿ ಮಾಡಿತ್ತು. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು. ಕಾರೆಹಳ್ಳಿಯಲ್ಲಿ ಮನೆ ಮಾದರಿಯ ಬೋನಿ ನಲ್ಲಿ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಅದಕ್ಕೆ ವಿಶಾಲವಾದ ಬಯಲು ಅನಿಸಿಕೊಂಡೇ ಅದು ಬೇಟೆಯನ್ನು ಅರಸಿಕೊಂಡು ಬೋನಿನ ಒಳಗೆ ಮದ್ಯರಾತ್ರಿ ಪ್ರವೇಶಿಸಿತ್ತು.  ಇಂದು ಬೆಳಿಗ್ಗೆ ವನ್ಯಜೀವಿ ವೈದ್ಯ…

Read More

Ripponpet | ನಾಯಕ್ ಜನರಲ್ ಸ್ಟೋರ್ಸ್ ಮಾಲೀಕ ಮಾಧವ ನಾಯಕ್‌ ನಿಧನ

ರಿಪ್ಪನ್ ಪೇಟೆ : ಪಟ್ಟಣದ ಜಿ.ಎಸ್‌.ಬಿ ಸಮಾಜದ ಮಾಜಿ ಅಧ್ಯಕ್ಷರು ಹಾಗೂ ನಾಯಕ್ ಜನರಲ್ ಸ್ಟೋರ್ಸ್ ಇದರ ಮಾಲೀಕರಾದ ಮಾಧವ ನಾಯಕ್ (85) ಇಂದು ಬೆಳಿಗ್ಗೆ ವಯೋಸಹಜ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರಿಯರು,ಓರ್ವ ಪುತ್ರನನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ ಪಟ್ಟಣದ ಗಾಂಧಿನಗರದ ಹಿಂದೂ ರುದ್ರ ಭೂಮಿಯಲ್ಲಿ ಜರುಗಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ .

Read More

ಅಪ್ರಾಪ್ತ ಬಾಲಕಿಯ ಮೇಲೆ 70 ವರ್ಷದ ವೃದ್ದನಿಂದ ಅತ್ಯಾಚಾರ – ಆರೋಪಿ ಬಂಧನ

ಅಪ್ರಾಪ್ತ ಬಾಲಕಿಯ ಮೇಲೆ 70 ವರ್ಷದ ವೃದ್ದನಿಂದ ಅತ್ಯಾಚಾರ – ಆರೋಪಿ ಬಂಧನ ಅಪ್ರಾಪ್ತ ಬಾಲಕಿಯ ಮೇಲೆ ವೃದ್ದನೊಬ್ಬ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಳೆಹೊನ್ನೂರು ವ್ಯಾಪ್ತಿಯ ಕೂಡ್ಲಿ ಗ್ರಾಮದ 76 ವರ್ಷ ವಯಸ್ಸಿನ ವ್ಯಕ್ತಿಯೋರ್ವ ,10 ವರ್ಷ ವಯಸ್ಸಿನ ಬಾಲಕಿಯನ್ನು ಚಾಕಲೇಟ್ ಕೊಡಿಸುವುದಾಗಿ ಹೇಳಿ ಕರೆದಿದ್ದಾನೆ. ಬಳಿಕ ಹೊಳೆ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.   ಇನ್ನೂ ಈ ಘಟನೆ ನಂತರ ಮನೆಗೆ…

Read More

Shivamogga |ಕಾಲೇಜು ವಿದ್ಯಾರ್ಥಿ ಮೇಲೆ ಬಿಸಿ ಎಣ್ಣೆ ಎರಚಿ ಕುಡುಕನ ರಾದ್ದಾಂತ

Shivamogga |ಕಾಲೇಜು ವಿದ್ಯಾರ್ಥಿ ಮೇಲೆ ಬಿಸಿ ಎಣ್ಣೆ ಎರಚಿ ಕುಡುಕನ ರಾದ್ದಾಂತ ಕಬಾಬ್ ಅಂಗಡಿ ಮಾಲೀಕನ ಜೊತೆ ಜಗಳವಾಡುತ್ತಿದ್ದ ವೇಳೆ ಪಾನಮತ್ತ ಗ್ರಾಹಕನೊಬ್ಬ ಕಾಲೇಜು ವಿದ್ಯಾರ್ಥಿ ಮೇಲೆ ಎಣ್ಣೆ ಸುರಿದಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಕಬಾಬ್ ಮಾಲೀಕನ ಜೊತೆಗೆ ಪಾನಮತ್ತನಾಗಿದ್ದ ಗ್ರಾಹಕನೊಬ್ಬ ಜಗಳವಾಡುತಿದ್ದು ಅದು ವಿಕೋಪಕ್ಕೆ ತಿರುಗಿದಾಗ ಸಿಟ್ಟಿಗೆದ್ದು ವಿದ್ಯಾರ್ಥಿ ಒಬ್ಬನ ಮೇಲೆ ಪಾನಮತ್ತ ಗ್ರಾಹಕ ಬಿಸಿ ಎಣ್ಣೆ ಎರಚಿದ್ದಾನೆ. ಮಾಲೀಕನ ಮೇಲೆ ಪಾನಮತ್ತ ಗ್ರಾಹಕ ಎಣ್ಣೆ ಎರಚಲು ಯತ್ನಿಸಿದ್ದಾನೆ. ಆದರೆ ಜರಡಿಯಿಂದ ವಿದ್ಯಾರ್ಥಿ ಮೇಲೆ…

Read More