Sagara | ಆಕಸ್ಮಿಕ ಬೆಂಕಿ: ಕೊಟ್ಟಿಗೆ, ಕಾರು ಸಂಪೂರ್ಣ ಭಸ್ಮ

Sagara | ಆಕಸ್ಮಿಕ ಬೆಂಕಿ: ಕೊಟ್ಟಿಗೆ, ಕಾರು ಸಂಪೂರ್ಣ ಭಸ್ಮ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುದರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಸುಳ್ಳಳ್ಳಿ ಸಮೀಪದ ಕೊಡನವಳ್ಳಿಯಲ್ಲಿ ಗಣಪತಿ ಕೆಂಚ ನಾಯ್ಕ ಅವರ ದನದ ಕೊಟ್ಟಿಗೆಯಲ್ಲಿ ಕಾಣಿಸಿದ ಆಕಸ್ಮಿಕ ಬೆಂಕಿಯ ಕಾರಣದಿಂದ ಕೊಟ್ಟಿಗೆ, ಸಂಗ್ರಹಿಸಿದ ಒಣ ಹುಲ್ಲು ಹಾಗೂ ಓಮಿನಿ ಕಾರು ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ.

ಪ್ರಾಥಮಿಕ ಅಂದಾಜುಗಳ ಪ್ರಕಾರ ಸುಮಾರು ಏಳರಿಂದ ಎಂಟು ಲಕ್ಷ ರೂ.ಗಳ ನಷ್ಟ ಉಂಟಾಗಿದೆ ಎಂದು ಭಾವಿಸಲಾಗಿದೆ. ಬೆಂಕಿಯನ್ನು ನಂದಿಸಲು ಗಣಪತಿ, ಅವರ ಹೆಂಡತಿ ಜಯಮ್ಮ, ರುಕ್ಮಿಣಿ ಯಮ್ಮ ಎನ್ನುವವರು ಪ್ರಯತ್ನಿಸಿದರು. ಈ ವೇಳೆ ಗಣಪತಿಯವರಿಗೂ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. 

ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಂದಿಸಿ ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ಬೆಂಕಿಯಿಂದ ಪಾರು ಮಾಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು. 

ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

Leave a Reply

Your email address will not be published. Required fields are marked *