ರಿಪ್ಪನ್ ಪೇಟೆ ಶ್ರೀ ನಂದಿ ಹಾಸ್ಪಿಟಲ್ ನಲ್ಲಿ ಉಚಿತ ವೈದ್ಯರ ಸೇವಾ ತಪಾಸಣೆಗೆ ಚಾಲನೆ.
ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಹೊಂದಿರಬೇಕು : ಅಭಿನವ ಚನ್ನಬಸವ ಸ್ವಾಮೀಜಿ
ರಿಪ್ಪನ್ ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಒತ್ತಡದ ಜೀವನವನ್ನು ನಡೆಸುತ್ತಿರುವ ಪ್ರತಿಯೊಬ್ಬರು. ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎಂದು ಶ್ರೀ ಸದಾನಂದ ಶಿವಯೋಗಾಶ್ರಮ ಮೂಲೆ ಗೆದ್ದೆ ಮಠದ ಶ್ರೀ ಅಭಿನವ ಚೆನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ನಂದಿ ಹಾಸ್ಪಿಟಲ್ ನಲ್ಲಿ ಉಚಿತ ವೈದ್ಯರ ಸೇವಾ ತಪಾಸಣೆ ಗೆ ಚಾಲನೆ ನೀಡಿ ಆ ಶ್ರೀ ವಚನ ನೀಡಿದ ಅವರು ಮಾನವ ಜೀವಿತದಲ್ಲಿ ಸಮಾಜ ಸೇವೆಯು ನೆಮ್ಮದಿಯ ಬದುಕಿಗೆ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಜಗತ್ತಿನಲ್ಲಿ ಅತ್ಯುತ್ತಮ ಸೇವೆಗಳಲ್ಲಿ ಒಂದಾದ ಆರೋಗ್ಯ ಸೇವೆಯನ್ನು ಮಾಡುವುದರ ಮೂಲಕ ಮಲೆನಾಡಿನಲ್ಲಿ ಅದರಲ್ಲೂ ಹೊಸನಗರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿನ ಜನತೆಗೆ ಸದುಪಯೋಗವಾಗಲೆಂದು ಸದುದ್ದೇಶದಿಂದ ದಿನದ 24 ಗಂಟೆ ಉಚಿತ ವೈದ್ಯರ ಸೇವಾ ತಪಾಸಣೆ ಯನ್ನು ಶ್ರೀ ನಂದಿ ಹಾಸ್ಪಿಟಲ್ ನಲ್ಲಿ ಅನುಷ್ಠಾನಗೊಳಿಸಲಾಗಿದೆ ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವುದರ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ಹೇಳಿದರು.
ಶ್ರೀ ನಂದಿ ಹಾಸ್ಪಿಟಲ್ ಮಾಲೀಕರಾದ ಎಸ್. ವಚನ ಮಾತನಾಡಿ ಪ್ರತಿಯೊಬ್ಬ ನಾಗರಿಕರು ಆರೋಗ್ಯದ ಬಗ್ಗೆ ಗಮನಹರಿಸುವುದರ ಮೂಲಕ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬೇಕು ಎಂಬ ಕಾರಣದಿಂದ ದಿನದ 24 ಗಂಟೆ ನಮ್ಮ ಹಾಸ್ಪಿಟಲ್ ನಲ್ಲಿ ಉಚಿತ ವೈದ್ಯರ ಸೇವಾ ತಪಾಸಣೆಯನ್ನು ಏರ್ಪಡಿಸಲಾಗಿದೆ, ಈ ತಪಾಸಣಾ ಶಿಬಿರವು ನಿರಂತರವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಅಮಿತ್, ಆಸ್ಪತ್ರೆಯ ಸಿಬ್ಬಂದಿಗಳಾದ ಅರುಣ್ ಕುಮಾರ್, ಶ್ವೇತಾ,ಕವನ, ಪ್ರಫುಲ್, ರಮ್ಯಾ,ಇನ್ನಿತರರಿದ್ದರು.