Headlines

Hosanagara | ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿ ವಶಕ್ಕೆ – ಅಕ್ರಮ ಮರಳು ಮಾಫ಼ಿಯಾಕ್ಕೆ ಸಿಂಹಸ್ವಪ್ನವಾದ ಪಿಎಸ್‌ಐ ಶಿವಾನಂದ್

Hosanagara | ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿ ವಶಕ್ಕೆ – ಮರಳು ಮಾಫ಼ಿಯಾಕ್ಕೆ ಸಿಂಹಸ್ವಪ್ನವಾದ ಪಿಎಸ್‌ಐ ಶಿವಾನಂದ್
ಹೊಸನಗರ : ಅಕ್ರಮವಾಗಿ ಮರಳು ಸಾಗಾಟ ನಡೆಸುತಿದ್ದ ಟಿಪ್ಪರ್ ವಾಹನವನ್ನು ಪಟ್ಟಣದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೋಮವಾರ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ಶಿವಾನಂದ್ ವೈ ಕೆ ರವರ ನೇತೃತ್ವ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಟಿಪ್ಪರ್ (KA 17 F 2543) ಲಾರಿಯನ್ನು ವಶಕ್ಕೆ ಪಡೆದಿದ್ದಾರೆ

ಅಕ್ರಮ ಮರಳು ದಂಧೆಕೋರರಿಗೆ ಸಿಂಹಸ್ವಪ್ನವಾಗಿರುವ ಪಟ್ಟಣದ ಪಿಎಸ್‌ಐ ಶಿವಾನಂದ್ ವೈ ಕೆ ಕಳೆದ 15 ದಿನಗಳಲ್ಲಿ ಒಟ್ಟು 6 ಅಕ್ರಮ ಮರಳು ಸಾಗಾಣಿಕೆ ವಾಹನಗಳನ್ನು ವಶಕ್ಕೆ ಪಡೆದು ಒಟ್ಟು 1,23,278 ರೂ ದಂಡ ವಸೂಲಿ ಮಾಡುವ ಮೂಲಕ ಮರಳು ಮಾಫ಼ಿಯಾ ದೊರೆಗಳಿಗೆ ಎಚ್ಚರಿಕೆಯ ಗಂಟೆ ರವಾನಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಅವಿನಾಶ್ ,ಗಂಗಾಧರ್ ಮತ್ತು ಸುನೀಲ್ ಇದ್ದರು.

Leave a Reply

Your email address will not be published. Required fields are marked *