ಕೆಂಚನಾಲ ಗ್ರಾಪಂ ಉಪಚುನಾವಣೆ – ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅವಿರೋಧ ಆಯ್ಕೆ


ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಮ ಪಂಚಾಯತ್ ನ ಕೆಂಚನಾಲ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಉಷಾ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೆಂಚನಾಲ ಕ್ಷೇತ್ರದ ಸದಸ್ಯರಾಗಿದ್ದ ಲಕ್ಷ್ಮಮ್ಮ ನಿಧನರಾದ ಹಿನ್ನಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಉಷಾ ಮಂಜುನಾಥ್ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕರಾದ ಸಚಿನ್ ಹೆಗಡೆ , ಸಹಾಯಕ ಚುನಾವಣಾಧಿಕಾರಿಯಾಗಿ ಚಂದ್ರಪ್ಪ ಕಾರ್ಯ ನಿರ್ವಹಿಸಿದ್ದರು.
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ , ಉಪಾಧ್ಯಕ್ಷರಾದ ಹೂವಮ್ಮ ರಾಮಪ್ಪ , ಸದಸ್ಯರುಗಳಾದ ಮಹಮ್ಮದ್ ಷರೀಫ್ ,ಕೃಷ್ಣೋಜಿರಾವ್ ,ಪುಟ್ಟಮ್ಮ ಭಾಸ್ಕರ್ ಕೆಂಚನಾಲ ಘಟಕದ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಮಾದಾಪುರ , ಮುಖಂಡರಾದ ಕೆ ಎಲ್ ವಿಜಯ್ ,ಮಂಜುನಾಥ್, ಪ್ರಕಾಶ್ , ಖಲೀಲ್ ಷರೀಫ್ ,ಪಿಡಿಓ ರವಿಕುಮಾರ್ ಹಾಗೂ ಇನ್ನಿತರರಿದ್ದರು.
ಶಾಸಕರಿಂದ ಶುಭಾಶಯ
ಕೆಂಚನಾಲ ಗ್ರಾಮ ಪಂಚಾಯತ್ ನ ಕೆಂಚನಾಲ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಉಷಾ ಮಂಜುನಾಥ್ ರವರಿಗೆ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರೂ ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಶುಭಾಶಯ ಕೋರಿದ್ದಾರೆ.