ರಿಪ್ಪನ್‌ಪೇಟೆ – ಒತ್ತುವರಿಯಾಗಿದ್ದ ಸ್ಮಶಾನದ ಜಾಗ ತೆರವುಗೊಳಿಸಿದ ತಹಶೀಲ್ದಾರ್ ರಶ್ಮಿ ಹಾಲೇಶ್ | Ripponpet
ರಿಪ್ಪನ್‌ಪೇಟೆ : ಬಾಳೂರು ಗ್ರಾಪಂ ಪಂಚಾಯತಿಗೆ ಒಳಪಡುವ ಮಾವಿನಸರ ಗ್ರಾಮದ ಸರ್ವೆ ನಂ 13 ರಲ್ಲಿ ಹಲವಾರು ವರ್ಷಗಳಿಂದ ಒತ್ತುವರಿಯಾಗಿದ್ದ ಸ್ಮಶಾನದ ಜಾಗವನ್ನು ಹೈಡ್ರಾಮಗಳ ನಡುವೆ ಹೊಸನಗರ ತಹಶೀಲ್ದಾರ್ ರಶ್ಮಿ ಒಳಗೊಂಡ ಅಧಿಕಾರಿಗಳ ತಂಡ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ.
ತಾಲ್ಲೂಕು ಆಡಳಿತ ಈ ಹಿಂದೆಯೇ ಒತ್ತುವರಿಯಾಗಿದ್ದ ಜಾಗವನ್ನು ಗ್ರಾಮಸ್ಥರ ಮನವಿ ಮೇರೆಗೆ ಜಾಗದ ಅಳತೆ ಮಾಡಿಸಿ ಒತ್ತುವರಿ ಮಾಡಿದ್ದ ಜಮೀನುಗಳ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದ್ದರೂ ಸ್ಮಶಾನದ ಜಾಗವನ್ನು ತೆರವುಗೊಳಿಸದೇ, ಯಾರೇನು ಮಾಡಿಯಾರು ಎಂಬ ಧೋರಣೆಯಲ್ಲಿ ತೆರವುಗೊಳಿಸದೇ ಇತ್ತೀಚೆಗೆ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು.
ಈ ಹಿನ್ನಲೆಯಲ್ಲಿ ಇಂದು ಹೊಸನಗರ ತಹಶೀಲ್ದಾರ್ ರಶ್ಮಿ ಹಾಗೂ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಿದ್ದಾರೆ.
ಕಾರ್ಯಾಚರಣೆ ವೇಳೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ಮಹಿಳೆಯೊಬ್ಬರು ವಿಷ ತೆಗೆದುಕೊಳ್ಳುವುದಾಗಿ ಬೆದರಿಸಿ ಹೈಡ್ರಾಮ ನಡೆಸಿದ್ದಾರೆ.ಈ ವೇಳೆಯಲ್ಲಿ ತಹಶೀಲ್ದಾರ್ ರಶ್ಮಿ ಹಾಗೂ ಪಿಎಸ್‌ಐ ಮಧ್ಯ ಪ್ರವೇಶಿಸಿ ಮಹಿಳೆಯೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮಾವಿನಸರ ಭಾಗದಲ್ಲಿ ಇತ್ತೀಚೆಗೆ ಅಕ್ರಮ ಭೂ ಮಾಫಿಯಾ ಹೆಚ್ಚಾಗಿದ್ದು ನೂರಾರು ಎಕರೆಯಷ್ಟು ಸರ್ಕಾರಿ ಭೂಮಿ ಉಳ್ಳವರ ಪಾಲಾಗುತ್ತಿದೆ. ಈ ಬಗ್ಗೆ ಮುಂದಿನಗಳಲ್ಲಿ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಭರವಸೆ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆಯ ಶಿರಸ್ತೆದಾರರು ಮಂಜುನಾಥ್ , ಸೈಯದ್ ಅಫ಼್ರೋಜ್ , ಕೌಶಿಕ್ , ನವೀನ್ , ಅಮ್ಜದ್ ಖಾನ್ , ಅಂಬಿಕಾ , ಭೂಮಿಕಾ ,ದರ್ಶನ್ , ಸುಬ್ರಹ್ಮಣ್ಯ , ಸುರೇಶ್ ಜಿ ಹಾಗೂ ಆರಕ್ಷಕ ಇಲಾಖೆಯ ಮಧುಸೂಧನ್ , ಕುಮಾರಿ ಪವಿತ್ರ ಇದ್ದರು.