ಆರ್ ಎಂ ಮಂಜುನಾಥ್ ಗೌಡರಿಗೆ ಒಕ್ಕಲಿಗರ ಸಂಘದಿಂದ ಸನ್ಮಾನ |RMM
ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾಗಿ ಸತತ 07 ನೇ ಬಾರಿಗೆ ಆಯ್ಕೆಯಾಗಿ 12 ಬಾರಿ ಅಧ್ಯಕ್ಷರಾಗಿರುವ ಸಹಕಾರಿ ಧುರೀಣ, ಮಲೆನಾಡು ಪ್ರದೇಶಾಭಿವೃದ್ಧಿ ಅಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ರವರಿಗೆ ರಿಪ್ಪನಪೇಟೆ ಒಕ್ಕಲಿಗರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕರಗುಚ್ಚಿಯಲ್ಲಿರುವ ಆರ್ ಎಂ ಮಂಜುನಾಥ್ ಗೌಡರವರ ಮನೆಗೆ ತೆರಳಿದ ರಿಪ್ಪನ್‌ಪೇಟೆ ಒಕ್ಕಲಿಗ ಸಂಘದ ಅಧ್ಯಕ್ಷ ಎಂ ಬಿ ಲಕ್ಷ್ಮಣಗೌಡ ಹಾಗೂ ಸದಸ್ಯರು 12 ಬಾರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದ ಸಹಕಾರಿ ಧುರೀಣ ಆರ್ ಎಂ ಮಂಜುನಾಥ್ ಗೌಡರವರನ್ನು ಸನ್ಮಾನಿಸಿ ಗೌರವಿಸಿದರು.
ಇದೇ ಸಂಧರ್ಭದಲ್ಲಿ ಸಂಘದ ಅಧೀನದಲ್ಲಿರುವ ರಿಪ್ಪನ್‌ಪೇಟೆಯ ವಿಶ್ವ ಮಾನವ ಸಭಾ ಭವನದ ಕಾಮಗಾರಿಗೆ ಮಲೆನಾಡು ಪ್ರದೇಶಾಭಿವೃದ್ಧಿ ನಿಗಮದಿಂದ ಹೆಚ್ಚಿನ ಅನುದಾನವನ್ನು ಕೊಡಿಸುವಂತೆ ಬೇಡಿಕೆ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಒಕ್ಕಲಿಗ ಸಂಘದ ಉಪಾಧ್ಯಕ್ಷ ಎಂ ಎಂ ಪರಮೇಶ್ವರ್, ಕಾರ್ಯಧ್ಯಕ್ಷ ಹೆಎಚ್ ವಿ ಹರೀಶ್, ಸಹಕಾರ್ಯದರ್ಶಿ ಎಚ್ ವೈ ಸಂತೋಷ್ ಕುಮಾರ್, ನಿರ್ದೇಶಕರುಗಳಾದ ಹೆಚ್ ಆರ್ ಅಶೋಕ್ , ಸುಮಹರೀಶ್ , ಶಿಲ್ಪಾರಾಜೇಶ್ , ವ್ಯವಸ್ಥಾಪಕರಾದ ಜಯಪ್ರಕಾಶ್ ಇದ್ದರು.