ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲುಸಾಲೆ ಮಳವಳ್ಳಿ ಗ್ರಾಮ ವಾಸಿ ಸದಾನಂದ ಎಂ.ಎಂ. ಎಂಬುವವರ ಪತ್ನಿ ಗೀತಾ (30) ಎಂಬ ಮಹಿಳೆಯು ತನ್ನ 11 ವರ್ಷದ ಮಗಳು ಪ್ರಿಯಾಂಕ ಹಾಗೂ 9 ವರ್ಷದ ಮಗ ಪ್ರಸಾದ್ ಇವರುಗಳನ್ನು ಕರೆದುಕೊಂಡು ಏ.11 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಈಕೆಯ ಚಹರೆ ದುಂಡುಮುಖ, ಸಾಧಾರಣ ಮೈಕಟ್ಟು, 5 ಅಡಿ ಎತ್ತರ, ಎಡಕೆನ್ನೆಯ ಮೇಲೆ ಹಳೆ ಗಾಯದ ಗುರುತು ಇರುತ್ತದೆ. ಕೆಂಪು ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಈ ತಾಯಿ ಮಕ್ಕಳ ಸುಳಿವು ದೊರತಲ್ಲಿ ಕೂಡಲೇ ಹೊಸನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.