w
Headlines
Home » ತೀರ್ಥಹಳ್ಳಿಯಲ್ಲಿ ಜೋಡಿ ಕೊಲೆ – ಓರ್ವನ ಬಂಧನ|murder

ತೀರ್ಥಹಳ್ಳಿಯಲ್ಲಿ ಜೋಡಿ ಕೊಲೆ – ಓರ್ವನ ಬಂಧನ|murder


ತೀರ್ಥಹಳ್ಳಿ ತಾಲ್ಲೂಕಿನ, ಕುರುವಳ್ಳಿ ಪುತ್ತಿಗೆ ಮಠದ ಬಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಇಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 



ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸ್ತಿದ್ಧಾರೆ.  ಮೂಲಗಳ ಪ್ರಕಾರ, ಕೊಲೆಯಾದವರು ದಾವಣಗೆರೆ ಜಿಲ್ಲೆ ಕಾರ್ಮಿಕರು ಎನ್ನಲಾಗಿದೆ.  


ನಿನ್ನೆ ರಾತ್ರಿ ನಡೆದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು,   ಕೆಲವೇ ದಿನದಲ್ಲಿ ಸಮುದಾಯ ಭವನ ಉದ್ಘಾಟನೆಯಾಗಬೇಕಿದ್ದು, ಅದರ ನಡುವೆ ಸಮುದಾಯದ ಭವನದಲ್ಲಿ ಈ ಘಟನೆ ನಡೆದಿದೆ.

ನಿನ್ನೆ ರಾತ್ರಿ  ಕುಡಿದ ಮತ್ತಿನಲ್ಲಿ ಮೂವರು ಕಾರ್ಮಿಕರ ನಡುವೆ ಜಗಳ ನಡೆದಿದೆ. ಈ ವೇಳೆ ಓರ್ವನ ಮೇಲೆ ಹಲ್ಲೆಯಾಗಿದೆ. ಆತ ಮತ್ತೆ ಹೋಗಿ ಕುಡಿದು ಬಂದು ಪಿಕಾಸಿಯಿಂದ ಮಲಗಿದ್ದ ಇನ್ನಿಬ್ಬರ ಮೇಲೆ ಹಲ್ಲೆ ಮಾಡಿದ್ಧಾನೆ ಎನ್ನಲಾಗುತ್ತಿದೆ.




 ಸದ್ಯ ಘಟನೆ ಸಂಬಂಧ ಮಾಹಿತಿ ನೀಡಿರುವ ಎಸ್​ಪಿ ಮಿಥುನ್ ಕುಮಾರ್, ವಿಶ್ವಕರ್ಮ ಸಮುದಾಯ ಭವನದಲ್ಲಿ ಕೆಲಸ ಮಾಡುತ್ತಿದ್ದ  ಮಾಡುತ್ತಿದ್ದ ಕಾರ್ಮಿಕರು ಇವಾಗಿದ್ದು, ನಿನ್ನೆಯ ಗಲಾಟೆಯಲ್ಲಿ ಇಬ್ಬರ ಕೊಲೆಯಾಗಿದೆ. ಪ್ರಕರಣ ಸಂಬಂಧ ಓರ್ವನನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.






Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.