ತೀರ್ಥಹಳ್ಳಿ : ಅಡ್ಡ ಬಂದ ಹಸುವನ್ನ ತಪ್ಪಿಸಲು ಹೋಗಿ ಬೈಕ್ ಅಪಘಾತಕ್ಕೀಡಾಗಿದ್ದು ಗಾಯಗೊಂಡಿದ್ದ ಬೈಕ್ ಸವಾರನನ್ನು ಗೃಹ ಸಚಿವರ ಬೆಂಗಾವಲು ವಾಹನದಲ್ಲಿ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 169 ರ ಶಿವಮೊಗ್ಗ ಮತ್ತು ತೀರ್ಥಹಳ್ಳಿ ನಡುವಿನ ತೂದುರು ಸಮೀಪದ ಜಂಬಳ್ಳಿ ತಿರುವಿನಲ್ಲಿ ಹಸುವೊಂದು ಅಡ್ಡ ಬಂದಿದ್ದರ ಪರಿಣಾಮ ಮಂಡಗದ್ದೆ ಸಮೀಪದ ಸಿಂಗನಬಿದರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳಗ ಗ್ರಾಮದ ಬೈಕ್ ಸವಾರ ಮನೋಜ್ ಹಸುವನ್ನು ತಪ್ಪಿಸಲು ಹೋಗಿ ಅಪಘಾತಕ್ಕಿಡಾಗಿದ್ದಾರೆ.
ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ ಗಾಯಾಳುವನ್ನ ಉಪಚರಿಸಿದ್ದಾರೆ.
ನಂತರ ಇದೆ ಮಾರ್ಗದಲ್ಲಿ ಗುಡ್ಡೆಕೊಪ್ಪದಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದ ಗೃಹಸಚಿವ ಆರಗ ಜ್ಞಾನೇಂದ್ರ ಸೊಪ್ಪುಗುಡ್ಡೆ ರಾಘವೇಂದ್ರ ಅವರ ಜೊತೆ ಸೇರಿ ಬೈಕ್ ಸವಾರನಿಗೆ ಧೈರ್ಯ ತುಂಬಿ ತಕ್ಷಣವೇ ತಮ್ಮ ಎಸ್ಕಾರ್ಟ್ ವಾಹನದಲ್ಲಿ ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಿ ಮತ್ತೊಮ್ಮೆ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.