Headlines

ರಿಪ್ಪನ್‌ಪೇಟೆಯಲ್ಲಿ ಶಿವಾಜಿ ಜಯಂತಿ ಅಂಗವಾಗಿ ಮರಾಠ ಸಮಾಜದವರಿಂದ ಅದ್ದೂರಿ ಬೈಕ್ ರ‍್ಯಾಲಿ|shivaji jayanthi

ರಿಪ್ಪನ್‌ಪೇಟೆಯಲ್ಲಿ  ಮರಾಠ ಸಮಾಜದವರಿಂದ ಅದ್ದೂರಿ ಬೈಕ್ ರ‍್ಯಾಲಿ


ರಿಪ್ಪನ್‌ಪೇಟೆ;- ಛತ್ರಪತಿ ಶಿವಾಜಿ 393 ನೇ ಜಯಂತೋತ್ಸವ  ಅಂಗವಾಗಿ  ರಿಪ್ಪನ್‌ಪೇಟೆ ಮರಾಠ ಸಮಾಜದವರು ಸಾಗರ ರಸ್ತೆಯಲ್ಲಿನ ಮರಾಠ ಸಮಾಜದ ಭವನದಿಂದ ಬೈಕ್ ರ‍್ಯಾಲಿ ನಡೆಸಿದರು.




ಶಿವಮೊಗ್ಗ ರಸ್ತೆಯಿಂದ ವಿನಾಯಕ ವೃತ್ತ – ತೀರ್ಥಹಳ್ಳಿ ರಸ್ತೆ- ಹೊಸನಗರ ರಸ್ತೆ  ರಸ್ತೆಯ ಮೂಲಕ ಸಾಗರ ರಸ್ತೆಯಲ್ಲಿನ ಮರಾಠ ಸಮಾಜದವರೆಗೆ ಬೈಕ್ ರ‍್ಯಾಲಿ ನಡೆಸಿದರು.

ಬೈಕ್ ರ‍್ಯಾಲಿಯಲ್ಲಿ ಛತ್ರಪತಿ ವೀರ ಶಿವಾಜಿಯ ಪರವಾದ ಘೋಷಣೆ ಕೂಗುತ್ತಾ ಭಗವಾಧ್ವಜವನ್ನು ಹಿಡಿದು ನೂರಾರು ಬೈಕ್‌ಗಳೊಂದಿಗೆ ರ‍್ಯಾಲಿ ನಡೆಸಿ ಸಾರ್ವಜನಿಕರ ಗಮನ ಸೆಳೆದರು.




ಈ ದಿನ ಸಂಜೆ ಶಿವಾಜಿ ಜಯಂತಿ ಅಂಗವಾಗಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ,ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

Leave a Reply

Your email address will not be published. Required fields are marked *