ರಿಪ್ಪನ್ ಪೇಟೆ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ : ಅಧ್ಯಕ್ಷರಾಗಿ ಪ್ರಮೀಳಾ ಲಕ್ಷ್ಮಣಗೌಡ ಪದವಿ ಸ್ವೀಕಾರ

ರಿಪ್ಪನ್‌ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಜೀವನ ಸಾಗಿಸುತ್ತಿರುವ ಇಂದಿನ ನಾಗರಿಕರಿಗೆ  ಮಾನಸಿಕ ನೆಮ್ಮದಿ ಅತ್ಯಂತ ಅಗತ್ಯವಾದ ಸಂಗತಿಯಾಗಿದೆ. ಮಾನವ ಸಮಾಜ ಸೇವೆಯಲ್ಲಿ ಪಡೆದುಕೊಂಡಾಗ ಮಾತ್ರ ನೆಮ್ಮದಿಯನ್ನು ಕಾಣಬಹುದು ಎಂದು ರೋಟರಿ ಸಂಸ್ಥೆಯ ಮಾಜಿ ಗವರ್ನರ್ ರೊಟೇರಿಯನ್ ಎಚ್ ಎಲ್ ರವಿ ಹೇಳಿದರು.

ಪಟ್ಟಣದ ಸಾಗರ ರಸ್ತೆಯಲ್ಲಿನ ವಿಶ್ವಮಾನವ ಸಮುದಾಯಭವನದಲ್ಲಿ ಅಯೋಜಿಸಲಾಗಿದ್ದ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ  ಅಂತರರಾಷ್ಟ್ರೀಯ ಸಂಸ್ಥೆಯಾದ ರೋಟರಿ ಸಂಸ್ಥೆ ಜಗತ್ತಿನಲ್ಲಿ ಪೊಲಿಯೋ ನಿರ್ಮೂಲನೆಗೆ ನೀಡಿದ ಕೊಡುಗೆ ಅಪಾರವಾಗಿದ್ದು ಪೋಲಿಯೋ ಮುಕ್ತ ದೇಶವನ್ನಾಗಿ ಭಾರತವನ್ನು ಮಾಡಿದ ಕೀರ್ತಿ ರೋಟರಿ ಸಂಸ್ಥೆಗೆ ಸಲ್ಲುತ್ತದೆ ಅಲ್ಲದೆ ಪ್ರಸಕ್ತ ಸಾಲಿನಲ್ಲಿ ರೋಟರಿ ಕಬ್ಲ್  ಹಲವು ದೇಯೋದ್ದೇಶಗಳನ್ನು ಇಟ್ಟುಕೊಂಡು ಸೇವಾ ಕ್ಷೇತ್ರದಲ್ಲಿ ತನ್ನದೇ ಚಾಪು ಮೂಡಿಸುತ್ತಿದ್ದು ಸುಟ್ಟ ಗಾಯದಿಂದ ಬಳಲುವರಿಗೆ ಚರ್ಮ ದಾನ,ಮಹಿಳಾ ಸಬಲೀಕರಣ,ಜಲಯಾತ್ರೆ ಹೀಗೆ ಹಲವು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನರಲ್ಲಿ ಜಾಗೃತರನ್ನಾಗಿಸುವ ಕಾರ್ಯದಲ್ಲಿ ರೋಟರಿ ಕ್ಲಬ್ ಮುಂದಾಗಿದೆ ಎಂದರು.


ರೋಟರಿ  ಜಿಲ್ಲಾ 31 82ರ  ಸಹಾಯಕ ಜಿಲ್ಲಾ ಗವರ್ನರ್ ಡಾ. ಗುಡದಪ್ಪ ಕಸಬಿ  ಮಾತನಾಡಿ ರೋಟರಿ ಸಂಸ್ಥೆ ಜಗತ್ತಿನಲ್ಲಿಯೇ  ಆರೋಗ್ಯ,ಶಿಕ್ಷಣ ಮತ್ತು ಸಮಾಜ ಸೇವೆಯ  ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಸೇವೆ ಇದರ ಮುಖ್ಯ ಉದ್ದೇಶವಾಗಿದೆ. ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾವನೆಯಿಂದ ಎಲ್ಲರಲ್ಲೂ ಬೆರೆತು ಉತ್ತಮ ಸಮಾಜದ ನಿರ್ಮಾಣದಲ್ಲಿ ತೊಡಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ನೂತನ ಅಧ್ಯಕ್ಷೆ ಪ್ರಮೀಳಾ ಲಕ್ಷ್ಮಣ ಗೌಡ,ಕಾರ್ಯದರ್ಶಿ ಸವಿತಾ ರಾಧಾಕೃಷ್ಣ ಹಾಗೂ ಪದಾಧಿಕಾರಿಗಳಿಗೆ ಮಾಜಿ ಗವರ್ನರ್ ರೊಟೇರಿಯನ್ ಎಚ್ ಎಲ್ ರವಿ ಪ್ರತಿಜ್ಞಾ ವಿಧಿ ಬೋಧಿಸಿದರು.


ಇದೇ ಸಂದರ್ಭದಲ್ಲಿ ರಿಪ್ಪನ್‌ಪೇಟೆ ವ್ಯಾಪ್ತಿಯ ಶಾಲಾ ಹಾಗೂ ಕಾಲೇಜುಗಳಲ್ಲಿ ವಾರ್ಷೀಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣಾರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಯೋಗಾಸನದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿ ಕು|| ಕಾವ್ಯಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ಗೆ ರೋಟರಿ ಕ್ಲಬ್ ಸಹಯೋಗದಲ್ಲಿ ೩೦ ಗಣಕಯಂತ್ರಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಪ್ರಾಚಾರ್ಯ ಪ್ರೋ.ಚಂದ್ರಶೇಖರ್‌ರವರಿಗೆ ಹಸ್ತಾತರಿಸಿದರು.


ಈ ಸಂಧರ್ಭದಲ್ಲಿ ಝೋನಲ್ ಲೆಪ್ಟಿನೆಂಟ್ ವಲಯದ ಪಿ.ಹೆಚ್.ಎಫ್.ಕಿರಣ್  ಜೆ.ಪಿ.ಮಾಜಿ ಅಧ್ಯಕ್ಷ ನಾಗಭೂಷಣ,ಕಾರ್ಯದರ್ಶಿ ಡಾಕಪ್ಪ,ರಿಪ್ಪನ್‌ಪೇಟೆ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ಲಕ್ಷ್ಮಣ ಗೌಡ,ಜೆ.ರಾಧಾಕೃಷ್ಣ,ಗಣೇಶ್‌ಕಾಮತ್,
ಎಂ.ಬಿ.ಮಂಜುನಾಥ್, ಸಬಾಸ್ಟಿನ್ ಮ್ಯಾಥ್ಯೂಸ್‌, ಪ್ರವೀಣ್ ಮಂಜುನಾಥ,ರಮೇಶ್ ಹೆಚ್.ಎಸ್ ಹೆಬ್ಬಾರ್,
ಹೆಚ್.ಎಂ.ವರ್ತೇಶ್.ವರ್ಗೀಸ್,ಟಿ.ಆರ್.ಪ್ರಸನ್ನನಾರಾಯಣ,ಹೆಚ್.ಎಸ್ ಸುಧೀಂದ್ರ ಹೆಬ್ಬಾರ್,ದೀಪಾಹೆಬ್ಬಾರ್,
ಸಂದ್ಯಾ ಗಣೇಶ್ ಕಾಮತ್,ಗಣೇಶ್,ಲತಾ ನಾಗಭೂಷಣ,ವಸುಪ್ರೀಯಾ ವರ್ತೇಶ್,ಇನ್ನಿತರ ರೋಟರಿ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *