ತೀರ್ಥಹಳ್ಳಿ ತಾಲ್ಲೂಕಿನ ದರಲಗೋಡು “ನೆಸ್ಟ್ ಹೋಂ ಸ್ಟೇ” ಮೇಲೆ ದಾಳಿ : 9 ಜನರ ವಿರುದ್ಧ ಎಫ್ಐಆರ್‌ ದಾಖಲು !

ತೀರ್ಥಹಳ್ಳಿ : ತಾಲೂಕಿನ ದರಲಗೋಡಿನಲ್ಲಿರುವ  ನೆಸ್ಟ್ ಹೋಮ್ ಸ್ಟೇ‌ಯಲ್ಲಿ ಜೂಜಾಡುತ್ತಿದ್ದವರ ಮೇಲೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ‌ಯಲ್ಲಿ 9 ಜನರಿದ್ದು ಅವರ ಮೊಬೈಲ್ ಮತ್ತು ಇಸ್ಪೀಟ್ ಆಟಕ್ಕೆ ಪಣವಾಗಿಟ್ಟಿದ್ದ 30,270 ರೂ. ಹಣವನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ. 

ದರಲಗೋಡಿನ ನೆಸ್ಟ್ ಹೋಮ್ ಸ್ಟೇಯಲ್ಲಿ ಇಸ್ಪೀಟ್ ಆಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ  ತೀರ್ಥಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುಷ್ಮ ಅವರ ನೇತೃತ್ವದಲ್ಲಿ ಭಾನುವಾರ ಸಂಜೆ ದಾಳಿ ನಡೆಸಲಾಗಿದೆ. ಪರವಾನಗಿ ಇಲ್ಲದೆ ಇಸ್ಪೀಟ್ ಆಟವಾಡಲು ಅವಕಾಶ ಮಾಡಿಕೊಟ್ಟ ಕಾರಣ 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

1) ಸುಧಾಕರ ಬಿನ್ ವಿನಯ್‌ ಶೆಟ್ಟಿ,  2) ರಾಘವೇಂದ್ರ ಬಿನ್ ಶೇಖರಪ್ಪ 3) ಪ್ರಕಾಶ ಎಸ್ ಬಿನ್ ಶಿವರಾಮ ಶೆಟ್ಟಿ, 4) ನಜೀರ್ ಬಿನ್ ಮುನೀರ್ ಸಾಜ್ 5) ಅಣಪ್ಪ ಬಿನ್ ಹಂಬಿರಾಜ್ 6) ಆನಂದ ಬಿನ್ ಕರಿಯಣ ಶೆಟ್ಟಿ, 7) ನಾಗರಾಜ ಬಿನ್ ಗುಂಡಪ್ಪ , 8)bಹರೀಶ ಬಿನ್ ಮಂಜಪ್ಪ, 9) ಶ್ರೀಧರ ಬಿನ್ ಮಡುರಣ, ಒಟ್ಟು 9 ಜನರನ್ನು  ವಶಕ್ಕೆ ಪಡೆದು ಎಫ್ಐಆರ್‌ ದಾಖಲಿಸಲಾಗಿದೆ.

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *