ಬಡವರ ಕಣ್ಣೀರು ತಾಲೂಕ್ ಆಡಳಿತಕ್ಕೆ ಕಾಣಿಸುತ್ತಿಲ್ಲವೇ .???? : ಆರ್ ಎಂ ಮಂಜುನಾಥ್ ಗೌಡ

ತೀರ್ಥಹಳ್ಳಿ : ತಾಲೂಕಿನ ತಹಶೀಲ್ದಾರರು ಬಿಬಿಎಂಪಿ ಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದವರು ಈಗ ಹಳ್ಳಿಗೆ ಬಂದಿದ್ದಾರೆ, ಮಳೆಗಾಲದಲ್ಲಿ ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಅರಿವು ಅವರಿಗೆ ಹೆಚ್ಚು ತಿಳಿದಂತೆ ಇಲ್ಲ.ಕೊನೆ ಪಕ್ಷ ಬೇರೆಯವರ ಬಳಿ ಕೇಳಿ ತಿಳಿದುಕೊಂಡು ಬಡವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಸಂಚಾಲಕರಾದ ಆರ್ ಎಂ ಮಂಜುನಾಥ್ ಗೌಡ ತಾಲೂಕು ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.


ಅವರು ಇಂದು ಬೆಟ್ಟಮಕ್ಕಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಗುಂಬೆ ಹೋಬಳಿಯ ಮೇಗರವಳ್ಳಿಯ ಸುತ್ತ ಮುತ್ತ ಮಳೆಯಿಂದ ಬಾರಿ ಹಾನಿಯಾಗಿದ್ದು ಅದರಲ್ಲಿ ಮಂಜಪ್ಪ ನಾಯಕ್ ಎಂಬುವರ ಮನೆ ಸೇರಿ ಹಲವರು ಮನೆ, ಕೊಟ್ಟಿಗೆ ಎಲ್ಲವು ಹಾನಿಯಾಗಿದೆ. ಆದರೆ ಇಲ್ಲಿಯವರೆಗೆ ತಹಸೀಲ್ದಾರ್ ಆಗಲಿ ಅಥವಾ ಯಾವುದೇ ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ. ಸರ್ಕಾರ ಹತ್ತು ಸಾವಿರದಿಂದ ಆರು ಲಕ್ಷ ದವರೆಗೂ ಮನೆ ಕುಸಿದು ಮನೆ ಕಳೆದುಕೊಂಡವರಿಗೆ ಕೊಡಬೇಕು ಎಂದು ತಿಳಿಸಿದೆ ಆದರೆ ಇಲ್ಲಿನ ತಾಲೂಕು ಆಡಳಿತ ಮಾನವೀಯತೆಯನ್ನು ಮರೆತಂತೆ ಕಾಣಿಸುತ್ತಿದೆ ಎಂದರು.

ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿ, ತಹಸೀಲ್ದಾರ್ ಗ್ರಾಮವಾಸ್ತವ್ಯ ಮಾಡಬೇಕು ಎಂದು ತಿಳಿಸುತ್ತಾರೆ ಆದರೆ ಇವರು ಮಾಡುತ್ತಿರುವುದೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.  ನಾಲೂರು, ಬಿದರಗೋಡು ಮಳೆ ಹಾನಿಯಾಗಿದೆ. ಅಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ಅದು ಕೂಡ ನಕ್ಸಲೇಟ್ ಜಾಗ, ಯಾವ ಅಧಿಕಾರಿಗಳು ಅಲ್ಲಿಗೆ ಹೋಗಿಲ್ಲ. ಅದು ಬೇಸರದ ಸಂಗತಿ ಒಂದು ವೇಳೆ ಸರ್ಕಾರದ ಬಳಿ ಹಣವಿಲ್ಲದಿದ್ದರೆ ನಾವು ಭಿಕ್ಷೆ ಭೇಡಿಯಾದರು ಕೊಡುತ್ತೇವೆ ಎಂದು ತಿಳಿಸಿದರು.

ಈ ತಿಂಗಳ ಅಂತ್ಯಕ್ಕೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ನಾವು ತಾಲೂಕು ಕಚೇರಿಯಲ್ಲೇ ಮಲಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜು 28 ಕ್ಕೆ ಪಾದಯಾತ್ರೆ 

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಈ ಸಂದರ್ಭದಲ್ಲಿ
ಸ್ವಾತಂತ್ರ್ಯಕ್ಕಾಗಿ ದುಡಿದ ಕಾಂಗ್ರೆಸ್ ಪಕ್ಷವನ್ನು ನೆನಪಿಸಿಕೊಳ್ಳುವುದು ಅಗತ್ಯವಾಗಿದೆ. ಈ ಅಮೃತ ಮಹೋತ್ಸವದ ನೆನಪಿನ ಅಂಗವಾಗಿ
ಜು. 28 ರಂದು ತೀರ್ಥಹಳ್ಳಿ ತಾಲೂಕಿನಿಂದ ಪಾದಯಾತ್ರೆ ಆರಂಭವಾಗಲಿದೆ. ಅಂದು ಬೆಳಗ್ಗೆ 8 ಗಂಟೆಗೆ ಮಾಜಿ ಮುಖ್ಯಮಂತ್ರಿ ದಿ. ಕಡಿದಾಳ್ ಮಂಜಪ್ಪನವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುವುದು. ಸುಮಾರು 14 ಕಿ.ಮೀ. ದೂರವಿರುವ ತೀರ್ಥಹಳ್ಳಿಗೆ ಪಾದಯಾತ್ರೆ ಮೂಲಕ ಬಂದು ತಾಲೂಕು ಕಚೇರಿ ಎದುರು ಸಭೆ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಡಾ. ಸುಂದರೇಶ್,ಜಿಲ್ಲಾ ಕಾರ್ಯದರ್ಶಿ ಅಮೀರ್ ಹಂಜಾ, ಹಾರೊಗೊಳಿಗೆ ಪದ್ಮನಾಭ್, ಪ ಪಂ. ಅಧ್ಯಕ್ಷೆ ಶಬನಮ್, ಜಿಲ್ಲಾ ಕಾಂಗ್ರೆಸ್ ಮುಖಂಡರು ಬಿ ಎಸ್ ಎಲ್ಲಪ್ಪ, ಪರಮೇಶ್ವರ್, ಆಸೀಫ್ ಬಾಷಾಸಾಬ್, ಮಧುಕರ್, ರಾಘವೇಂದ್ರ ಶೆಟ್ಟಿ, ಸುಶೀಲ ಶೆಟ್ಟಿ, ಬಿ ಗಣಪತಿ, ಮಂಜುಳ ನಾಗೇಂದ್ರ, ನಾಗರಾಜ್ ಪೂಜಾರಿ ಸೇರಿ ಹಲವರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *