Headlines

ಪೆಟ್ರೋಲ್ ಟ್ಯಾಂಕರ್ ಪಲ್ಟಿ : ಜೀವ ಭಯ ಬಿಟ್ಟು ಪೆಟ್ರೋಲ್ ತುಂಬಿಸಿಕೊಳ್ಳಲು ಜನರಿಂದ ನೂಕು‌ನುಗ್ಗಲು

ಶಿವಮೊಗ್ಗ: ಜಾವಳ್ಳಿ ಸಮೀಪದಲ್ಲಿ ಇಂದು ಮದ್ಯಾಹ್ನ ಪೆಟ್ರೋಲ್ ತುಂಬಿದ ಟ್ಯಾಂಕರ್‌ವೊಂದು ಪಲ್ಟಿಯಾಗಿರುವ ಘಟನೆ ವರದಿಯಾಗಿದೆ.

ಜಾವಳ್ಳಿ ಅರಬಿಂದೂ ಶಾಲೆಯ ಸಮೀಪ ಸೊಲ್ಲಾಪುರ ಮತ್ತು ಮಂಗಳೂರು ಹೈವೆ ರಸ್ತೆಯಲ್ಲಿ ಸಾಗುತ್ತಿದ್ದ ಪೆಟ್ರೋಲ್ ತುಂಬಿದ ಲಾರಿಯೊದು ಪಕ್ಕಕ್ಕೆ ಉರುಳಿ ಬಿದ್ದಿದೆ.

ಮಂಗಳೂರಿನಿಂದ 12½ ಸಾವಿರ ಲೀಟರ್ ಪೆಟ್ರೋಲ್ ನ್ನ ಹೊತ್ತು ಹೋಗುತ್ತಿದ್ದ ಲಾರಿ ರಸ್ತೆಗೆ ಉರುಳಿದೆ. ಅಕ್ಕಪಕ್ಕದ ಜನ ಕೊಡಪಾನ ಬಕೆಟ್ ನಲ್ಲಿ ತುಂಬಿಸಿಕೊಂಡು ಹೋಗಿರುವ‌ಮಾಹಿತಿ ಲಭ್ಯವಾಗಿದ್ದು ಸ್ಥಳಕ್ಕೆ ಪೊಲೀಸರು ಬಂದು ಸಾರ್ವಜನಿಕರನ್ನ ಚದುರಿಸಿದ್ದಾರೆ.

ಟ್ಯಾಂಕರ್ ಪಲ್ಟಿಯಾದ ಸಮಯದಲ್ಲಿ ಜನರು ಜೀವದ ಭಯಬಿಟ್ಟು ಪೆಟ್ರೋಲ್ ತುಂಬಿಕೊಂಡ ಘಟನೆ ನಡೆದಿದೆ. ಟ್ಯಾಂಕರ್ ಶಿವಮೊಗ್ಗದಿಂದ ಚೆನ್ನಗಿರಿ ಭಾಗಕ್ಕೆ ತೆರಳುತ್ತಿದ್ದ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾದ ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಕ್ರೇನ್‌ನಿಂದ ವಾಹನವನ್ನು ಮೇಲೆತ್ತಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *