Headlines

ಶಿವಮೊಗ್ಗದಲ್ಲಿ ಮುಸ್ಲಿಂ ಸಂಘಟನೆಗಳು ಕರೆಕೊಟ್ಟಿದ್ದ ಒಕ್ಕೂಟ ಬಂದ್ ಬಹುತೇಕ ಯಶಸ್ವಿ :

ಮುಸ್ಲಿಂ ಸಂಘಟನೆಗಳ ಒಕ್ಕೂಟ ಇಂದು ಬಂದ್ ಗೆ ಕರೆಕೊಟ್ಟ ಹಿನ್ನಲೆಯಲ್ಲಿ ಮುಸ್ಲಿಂ ಅಂಗಡಿ ಮತ್ತು ಮಳಿಗೆಗಳು ಬಹುತೇಕ ಬಂದ್ ಮಾಡಲಾಗಿದೆ. ಹಿಜಬ್ ಬೆಂಬಲಿಸಿ ಕರೆಯಲಾದ ಬಂದ್ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಲಾಗಿತ್ತು.

ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಲಾಗಿತ್ತು. ಶಿವಮೊಗ್ಗದಲ್ಲಿಯೂ ಸಹ‌ 19 ಮುಸ್ಲಿಂ ಸಂಘನೆಗಳು ಬಂದ್ ನಡೆಸಲು ತೀರ್ಮಾನಿಸಿತ್ತು‌. ತೀರ್ಮಾನದಂತೆ ಹಲವಾರು ಉದ್ಯಮಗಳ ಅಂಗಡಿಗಳನ್ನ ಬಂದ್ ಮಾಡಲಾಗಿದೆ. ಶಾಲಾ ಕಾಲೇಜುಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಗೈರು ಹಾಜರಿದ್ದರು.


ಅಮೀರ್ ಅಹ್ಮದ್ ವೃತ್ತ, ಓಟಿ ರಸ್ತೆ ಕೆ.ಆರ್ ಪುರಂ, ಗಾಂಧಿ ಬಜಾರ್ ನ‌ ಮುಂಭಾಗದ ಚಪ್ಪಲಿ ಅಂಗಡಿಗಳು ಹಣ್ಣಿನ ಅಂಗಡಿಗಳು, ತರಕಾರಿ ಅಂಗಡಿಗಳು ಇಂದು ರಸ್ತೆಗೆ ಇಳಿದಿರಲಿಲ್ಲ. ಎನ್.ಟಿ ರಸ್ತೆಯಲ್ಲಿನ ಅಂಗಡಿಗಳು ಬಂದ್ ಆಗಿವೆ. ಆದರೆ ಕೆಲ ಬಡ ಬೀದಿ ವ್ಯಾಪಾರಸ್ಥರನ್ನು ಹೊರತುಪಡಿಸಿ ಬಂದ್ ಯಶಸ್ವಿಯಾಗಿದೆ.

ಚಳುವಳಿ ರೂಪದಲ್ಲಿ ಮುಸ್ಲಿಂ ಒಕ್ಕೂಟವು ಬಂದ್ ಆಚರಿಸುವ ನಿರ್ಧಾರ ಕೈಬಿಟ್ಟಿದ್ದರಿಂದ ಅಲ್ಲದೆ ನಗರದಲ್ಲಿ 144 ಸೆಕ್ಷನ್ ಇರುವ ಕಾರಣ ಬೀದಿಗಿಳಿದು ಪ್ರತಿಭಟನೆ ನಡೆಸಲಿಲ್ಲ. ಬಂದ್ ವೇಳೆ ಅಂಗಡಿ ಮುಂಗಟ್ಟುಗಳನ್ನ ಒತ್ತಾಯಪೂರ್ವಕವಾಗಿ ಮುಚ್ಚಿಸುವ ಪ್ರಯತ್ನಗಳು ಎಲ್ಲೂ ನಡೆದಿರುವುದು ಕಂಡು ಬಂದಿಲ್ಲ

ಬಂದ್ ನ ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇


Leave a Reply

Your email address will not be published. Required fields are marked *