Headlines

ರಿಪ್ಪನ್ ಪೇಟೆ ಕಸ್ತೂರಿ ಕನ್ನಡ ಸಂಘದ ವತಿಯಿಂದ ಪುನೀತ್ ರಾಜಕುಮಾರ್ ಅವರಿಗೆ ನುಡಿನಮನ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ.

ರಿಪ್ಪನ್‌ಪೇಟೆ: ಪಟ್ಟಣದ ಕಸ್ತೂರಿ ಕನ್ನಡ ಸಂಘ, ಪುನೀತ್‌ರಾಜ್ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆಸಲಾಯಿತು.

ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್‌ರಾಜ್ ನುಡಿ ನಮನ ಕಾರ್ಯಕ್ರಮವು ಅಂಗವಾಗಿ  ಏರ್ಪಡಿಸಿದ್ದ  ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ ಪುಟಾಣಿ ಮಕ್ಕಳ ವಿವಿಧ ವೇಷ ಭೂಷಣಗಳೊಂದಿಗೆ ಚಂಡೆ ನೃತ್ಯವು ಮೆರವಣಿಗೆಗೆ ಜನ ಆಕರ್ಷಣೆಗೊಂಡಿತ್ತು.
ಬೆಳಿಗ್ಗೆ ತಾಯಿ ಭುವನೇಶ್ವರಿ ಭಾವಚಿತ್ರದ ರಾಜಬೀದಿ ಉತ್ಸವಕ್ಕೆ  ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಚಾಲನೆ ನೀಡಿದರು.
ಕನ್ನಡ ಧ್ವಜಾರೋಹಣವನ್ನು ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್‌ರಾಜ್ ಅಭಿಮಾನಿ ಬಳಗದ ಅಧ್ಯಕ್ಷ ಆರ್.ಎ.ಚಾಬುಸಾಬ್ ನೆರವೆರಿಸಿದರು.


ವಿನಾಯಕ ವೃತ್ತದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ರವರಿಗೆ ಸ್ವಾಗತಿಸಿದ ಗಣ್ಯರು :

ಕಸ್ತೂರಿ ಕನ್ನಡ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಲು ಆಗಮಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರನ್ನು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷರು ಮತ್ತು ಪದಾದಿಕಾರಿಗಳು,ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಮತ್ತು ರಿಪ್ಪನ್ ಪೇಟೆ ಪಿಎಸ್ಐ ಶಿವಾನಂದ ಕೋಳಿ ರವರು ವಿನಾಯಕ ವೃತ್ತದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಕನ್ನಡ ಹೃದಯದ ಭಾಷೆ ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗರೆಲ್ಲಾರೂ ಕಂಕಣಬದ್ದರಾಗಬೇಕಿದೆ ಹಾಗೇಯೆ ಹರೇಕಳ ಹಾಜಬ್ಬ ರವರನ್ನು ಮಾದರಿಯಾಗಿ ತೆಗೆದುಕೊಂಡು ಅವರಂತೆಯೇ ಸಮಾಜದ ಒಳಿತಿಗಾಗಿ ಶ್ರಮಿಸಬೇಕಾಗಿದೆ ಎಂದರು.

ಅನವಟ್ಟಿ ಯುವ ವಾಗ್ಮಿ ಕುಮಾರಿ ಭಾವನಾ ಆರ್.ಗೌಡ ರವರು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿಪುರಸ್ಕೃತ ಹರೇಕಳ ಹಾಜಬ್ಬ, ಮಂಗಳೂರು ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೋಪೆಸರ್ ಡಾ.ಮಂಜುನಾಥ ಜಂಬಳ್ಳಿ, ಆನವಟ್ಟಿ ಯುವವಾಗ್ಮಿ ಕುಮಾರಿ ಭಾವನ ಆರ್.ಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬನವರು ರಿಪ್ಪನ್‌ಪೇಟೆ ನಾಗರೀಕರ ಮತ್ತು ವಿವಿಧ ಸಂಘ ಸಂಸ್ಥೆಯವರ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ನನಗೆ ಮೊದಲು ದೇಶ ದೊಡ್ಡದು ನಾನೊಬ್ಬ ಸಾಮಾನ್ಯ ಮನುಷ್ಯ ನನಗೇಕ್ಕೆ ಜೈಕಾರ ಹಾಕುತ್ತಿರ ದೇಶಕ್ಕೆ ಜೈಕಾರ ಹಾಕಿ ನನ್ನಲ್ಲಿ ಅಂತಹ ವಿಶೇಷತೆ ಏನಿಲ್ಲ’ ಎಂದ ಅವರು ‘ನಾವುಗಳಿರುವ ರಾಷ್ಟ್ರಕ್ಕೆ ಜೈಕಾರ ಹಾಕಿ ಅದು ಶಾಶ್ವತ ನಾವು ಕ್ಷಣಿಕರಿದ್ದು ನಮಗೆ ದೇಶವೇ ಸರ್ವಸ್ವ’ ಎಂದರು.ಪದ್ಮಶ್ರೀ ಪ್ರಶಸ್ತಿ ಘೋಷಣೆಯ ಸಂಧರ್ಭದಲ್ಲಿ ನಾನು ರೇಶನ್ ಅಂಗಡಿಯ ಕ್ಯೂ ನಲ್ಲಿ ನಿಂತಿದ್ದೆ ಅಲ್ಲಿದ್ದವರು ಯಾರೋ ನನಗೆ ಈ ಬಗ್ಗೆ ಮಾಹಿತಿ ನೀಡಿದ್ದರು ಎಂದು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ಅಭಿಮಾನಿ ಬಳಗದ ಅಧ್ಯಕ್ಷರಾದ ಅರ್ ಎ ಚಾಬುಸಾಬ್ ವಹಿಸಿದ್ದರು.


ಪುನೀತ್ ರಾಜ್‍ಕುಮಾರ್ ನುಡಿನಮನ ಹಾಗೂ  ಸಮಾರೋಪ ಸಮಾರಂಭ :

ಸಂಜೆ ನಡೆದ ಪುನೀತ್ ನುಡಿನಮನ ಹಾಗೂ ಸಮಾರೋಪ ಸಮಾರಂಭದಲ್ಲಿ ಶಾಸಕರಾದ ಹರತಾಳು ಹಾಲಪ್ಪ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ಕೊಟ್ಟರು.

ನಂತರ ಸುಮಾರು ಒಂಬತ್ತು ನಿಮಿಷದ ಪುನೀತ್ ರವರ ಜೀವನ ಚರಿತ್ರೆಯ ಧ್ವನಿಮುದ್ರಣವನ್ನು ಹಾಕಲಾಯಿತು.ಎಲ್ಲಾ ಗಣ್ಯರು ಒಂಬತ್ತು ನಿಮಿಷ ಎದ್ದು ನಿಂತು ಪುನೀತ್ ರಾಜ್ ಕುಮಾರ್ ರವರಿಗೆ ಗೌರವ ಸೂಚಿಸಿದರು.

ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ರವರು ಮಾತನಾಡಿ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ ಅದರೆ ಕನ್ನಡ ಉಳಿಯಬೇಕಿದರೆ ಪ್ರತಿಮನೆಗಳಲ್ಲಿ ಕನ್ನಡವನ್ನು ಮಾತನಾಡುವುದರ ಮೂಲಕ ಮನೆಗಳಿಂದಲೇ ಕನ್ನಡದ ಸಾರ್ವಭೌಮತ್ವವನ್ನು ಉಳಿಸಲು ಸರ್ವರು ಸಂಕಲ್ಪ ಮಾಡಬೇಕು ಎಂದರು. ಕನ್ನಡ ನಾಡಿನಲ್ಲಿ ಕನ್ನಡಕ್ಕಾಗಿ ದುಡಿಯುತ್ತಿರುವ ಮಹನೀಯರನ್ನು ನಾವು ಇತ್ತೀಚಿನ ದಿನಗಳಲ್ಲಿ ಕಳೆದುಕೊಳ್ಳುತ್ತಿರುವುದು ದುರಂತ ಯಾರು ನಿರೀಕ್ಷೆ ಮಾಡಿರದ ರೀತಿಯಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡು ಕನ್ನಡಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
 ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ ರಾಜ್ಯೋತ್ಸವ ನವೆಂಬರ್‌ಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಕನ್ನಡ ನಾಡಿನಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ಕನ್ನಡ ಭಾಷೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಕಳವಳ ವ್ಯಕ್ತಪಡಿಸಿ, ಮಕ್ಕಳಲ್ಲಿ ಭಾಷೆ ನಾಡು ನುಡಿಯ ಬಗ್ಗೆ ಅರಿವು ಮೂಡಿಸುವ ಬಗ್ಗೆ ಸಂಘ ಸಂಸ್ಥೆಗಳ ಪಾತ್ರ ಅವಿಸ್ಮರಣೀಯ ಎಂದರು.
 ನಟ ದಿವಂಗತ ಪುನೀತ್ ರಾಜಕುಮಾರ್ ಬಗ್ಗೆ ಪ್ರಾಸ್ತವಿಕ ನುಡಿ ನುಡಿದ ರಿಪ್ಪನ್ ಪೇಟೆ ಸರಕಾರಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ರತ್ನಾಕರ್ ಕುನು ಗೋಡು. ಕನ್ನಡ ಸಿನಿಮಾರಂಗದಲ್ಲಿ ಹಾಗೂ ಸಮಾಜ ಸೇವೆಯಲ್ಲಿ  ಜನಮಾನಸದಲ್ಲಿ ಉಳಿಯುವಂತಹ ಅತ್ಯುತ್ತಮವಾದ ನಟನೆ ಮತ್ತು ಸೇವೆಯನ್ನು ಮಾಡಿ ಕನ್ನಡ ನಾಡಿನ ಜನತೆ ಮರೆಯಲಾಗದ ಕಣ್ಮಣಿಯಾಗಿ ಮರೆಯಾದೆ ನಟ ಪುನೀತ್ ರಾಜಕುಮಾರ್ ಒಬ್ಬ ಚಲನಚಿತ್ರನಟ ಸಮಾಜಸೇವೆಯಲ್ಲಿ ಹೇಗೆ ತೊಡಗಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟು ಹೋಗಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಅವರ ಹೆಸರು ಚಿರಸ್ಮರಣೀಯ ವಾಗಿ ಉಳಿಯಲಿದೆ ಎಂದರು.
ಸಮಾರಂಭದಲ್ಲಿ ಗುರುಕುಲ ಕಲಾಕೀರ್ತಿ ರಾಜ್ಯ ಪ್ರಶಸ್ತಿ ಪುರಸ್ಕೃತ  ಹಾಗೂ  ಪತ್ರ ಕರ್ತ ರಫ಼ಿ ರಿಪ್ಪನ್ ಪೇಟೆ ಹಾಗೂ ಜಿಕೆವಿಕೆ.ವಿಶ್ವವಿದ್ಯಾಲಯದ ಮೂರು ಪ್ರಶಸ್ತಿ ಪುರಸ್ಕೃತ ಮಧುಸೂಧನ್ ಕೆದಲುಗುಡ್ಡೆ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಸಭೆಯಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್,, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ.ಜಯರಾಂ, ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಉಧ್ಯಮಿ ಎಲ್.ನಾಗರಾಜ್‌ಶೆಟ್ಟಿ,  ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಅರಸಾಳು ಗ್ರಾ.ಪಂ. ಅಧ್ಯಕ್ಷ ಉಮಾಕರ್ ಕೆ. ಗ್ರಾ.ಪಂ.ಅಧ್ಯಕ್ಷ ಉಬೇದುಲ್ಲಾ ಷರೀಫ್, ಪದ್ಮಾ ಸುರೇಶ್, ನಾಗರತ್ನ ದೇವರಾಜ್, ಮಹಾಲಕ್ಷ್ಮಿ, ಧನಲಕ್ಷ್ಮೀ . ಎನ್.ಚಂದ್ರೇಶ್, ಡಿ.ಈ.ಮಧುಸೂದನ್, ಅಸಿಫ್, ಗಣಪತಿ, ಪ್ರಕಾಶ್‌ಪಾಲೇಕರ್, ವೇದಾವತಿ, ಪರಮೇಶ್,ಅಮೀರ್ ಹಂಜಾ, ಸಾರಾಭಿ, ದಾನಮ್ಮ, ದೀಪಾ ಸುಧೀರ್, ಸುಧೀಂದ್ರ ಪೂಜಾರಿ, ಆ ರ್.ಎನ್.ಮಂಜುನಾಥ,ತ ಮ ನರಸಿಂಹ, ಶ್ರೀಧರ್, ಜಿ.ಆರ್.ಗೋಪಾಲಕೃಷ್ಣ, ಹೆಚ್.ಎನ್.ಉಮೇಶ್,ರಮೇಶ್ ಫ಼್ಯಾನ್ಸಿ.ಡಿ.ಶೀಲಾ,ಎನ್.ವರ್ತೇಶ್. ಪಿಯುಸಿ ರೋಡ್ರಿಗಸ್ ಇನ್ನಿತರರು ಹಾಜರಿದ್ದರು.


ಸಭೆಯ ನಂತರ ರೂಪಕಲಾ ಕುಂದಾಪುರ ತಂಡದ ಮೂರು ಮುತ್ತು ಖ್ಯಾತಿಯ ಕಲಾವಿದರಿಂದ ಮಧುಮಗ-3 ನಾಟಕ ಕಾರ್ಯಕ್ರಮವು ಜನಜಂಗುಳಿಯಿಂದ ಕೂಡಿತ್ತು.

Leave a Reply

Your email address will not be published. Required fields are marked *