Headlines

ಹೊಸನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನಾಗೋಡಿ ವಿಶ್ವನಾಥ್ ಹಾಗೂ ಉಬೇದುಲ್ಲಾ ಷರೀಫ್ ನೇಮಕ

ಶಿವಮೊಗ್ಗ: ಜಿಲ್ಲೆಯ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರನ್ನಾಗಿ ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯ, ಯುವ ಮುಖಂಡ ನಾಗೋಡಿ ವಿಶ್ವನಾಥ್ ಹಾಗೂ ಕೆಂಚನಾಲ ಗ್ರಾಪಂ ಮಾಜಿ ಅಧ್ಯಕ್ಷ ಉಬೇದುಲ್ಲಾ ಷರೀಫ್ ಅವರನ್ನು ನೇಮಕ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ( KPCC) ಆದೇಶಿಸಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಶಿಫಾರಸ್ಸಿನ ಮೇರೆಗೆ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರನ್ನಾಗಿ ನಾಗೋಡಿ ವಿಶ್ವನಾಥ್ ಹಾಗೂ ಉಬೇದುಲ್ಲಾ ಷರೀಫ್ ಅವರನ್ನು ನೇಮಿಸಿ ಅಧಿಕೃತ ಆದೇಶ ಮಾಡಲಾಗಿದೆ.

ಹೊಸನಗರ ಯುವ ಸಂಘಟಕನಿಗೆ ಒಲಿದ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ

ವಿದ್ಯಾರ್ಥಿ ದೆಸೆಯಿಂದಲೂ ನಿಟ್ಟೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದವರು ನಾಗೋಡಿ ವಿಶ್ವನಾಥ್. ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತಮ್ಮ ಕಾಲೇಜು ದಿನಗಳಿಂದಲೇ ತೊಡಗಿಸಿಕೊಂಡಿದ್ದರು.

ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಅನುಯಾಯಿಯಾಗಿ, ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಅಭಿಮಾನಿಯಾಗಿ, ಕಲಗೋಡು ರತ್ನಾಕರ್ ಹಾಗೂ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಅವರ ನಿಕಟವರ್ತಿಯಾಗಿ ನಿಟ್ಟೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ನಾಗೋಡಿ ವಿಶ್ವನಾಥ್ ತೊಡಗಿಸಿಕೊಂಡಿದ್ದಾರೆ.

ಸುಮಾರು 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ ನಾಗೋಡಿ ವಿಶ್ವನಾಥ್ ನಿಟ್ಟೂರು ಭಾಗದಲ್ಲಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಡಿಗ್ರಿ ವೇಳೆಯಲ್ಲೇ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಕರ್ಷಿಸಿ, ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಕಟ್ಟೋದಕ್ಕೆ ಶ್ರಮಿಸಿದ್ದರು. ಇಂತಹ ನಾಗೋಡಿ ವಿಶ್ವನಾಥ್ ಅವರ ಪಕ್ಷನಿಷ್ಠೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಗುರುತಿಸಿ ಪ್ರೋತ್ಸಾಹಿಸಿದ್ದರು.

ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯರಾಗಿರುವಂತ ನಾಗೋಡಿ ವಿಶ್ವನಾಥ್ ಗೆ, ಹೊಸನಗರ ಬ್ಲಾಕ್ ಕಾಂಗ್ರೆಸ್ ನಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನವನ್ನೂ ನೀಡಲಾಗಿತ್ತು. ಇದೀಗ ಯುವ ಮುಖಂಡ ನಾಗೋಡಿ ವಿಶ್ವನಾಥ್ ಗೆ ಇದೀಗ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿದೆ. ಇಂತಹ ನಾಗೋಡಿ ವಿಶ್ವನಾಥ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಮತ್ತಷ್ಟು ಅವಕಾಶ ಸಿಗಲಿ, ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂಬುದಾಗಿ ಅವರ ಅಭಿಮಾನಿಗಳು, ಹಿತೈಶಿಗಳು ಶುಭ ಹಾರೈಸಿದ್ದಾರೆ.

ಕೆಂಚನಾಲ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಪಕ್ಷ ಸಂಘಟಕ ಉಬೇದುಲ್ಲಾ ಗೆ ಒಲಿದ ಉಪಾಧ್ಯಕ್ಷ ಸ್ಥಾನ

ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ಉಬೇದುಲ್ಲಾ ಷರೀಫ್, ಪಕ್ಷದ ನಿಷ್ಠೆಯ ಪ್ರತೀಕವಾಗಿ ಹೆಸರಾಗಿದ್ದಾರೆ. ಸಂಘಟಿತ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹಾಗೂ ಜನಸಂಪರ್ಕದ ನೈಪುಣ್ಯದಿಂದ ಅವರು ಸದಾ ಪಕ್ಷದ ಹಿತಕ್ಕಾಗಿ ದುಡಿಯುತ್ತ ಬಂದಿದ್ದಾರೆ. ಕೆಂಚನಾಲ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅವರು ಎರಡು ಬಾರಿ ಅಧಿಕಾರ ವಹಿಸಿ, ಗ್ರಾಮೀಣ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆ ಹಾಗೂ ಜನಜೀವನ ಸುಧಾರಣೆಗೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಪರಿಣಾಮವಾಗಿ ಅವರು ಜನಮನ್ನಣೆಗೆ ಪಾತ್ರರಾಗಿದ್ದಾರೆ.

ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ, ಸಮಾನತೆ ಹಾಗೂ ಪಾರದರ್ಶಕ ಆಡಳಿತದ ಮೂಲಕ ಜನರ ವಿಶ್ವಾಸವನ್ನು ಗಳಿಸಿದ ಉಬೇದುಲ್ಲಾ ಷರೀಫ್, ಕಾಂಗ್ರೆಸ್ ಪಕ್ಷದ ತತ್ವ-ಮೌಲ್ಯಗಳನ್ನು ನೆಲಸಮೃದ್ಧಿಯಲ್ಲಿ ಅಳವಡಿಸುವ ಕಾರ್ಯವನ್ನು ಮಾಡಿದ್ದಾರೆ. ಗ್ರಾಮಾಂತರದಲ್ಲಿ ಯುವಕರನ್ನು ರಾಜಕೀಯ ಚಟುವಟಿಕೆಗಳತ್ತ ಸೆಳೆಯಲು ಹಾಗೂ ಪಕ್ಷದ ಭವಿಷ್ಯ ಬಲಪಡಿಸಲು ಅವರು ಮಹತ್ವದ ಸೇತುವೆಯಾಗಿದ್ದಾರೆ.

ಇದೀಗ ಉಬೇದುಲ್ಲಾ ಷರೀಫ್ ಅವರಿಗೆ ಒಲಿದ ಹೊಸ ಹುದ್ದೆಯ ಮೂಲಕ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತಷ್ಟು ಬಲವರ್ಧನೆ ಹೊಂದಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಪಕ್ಷದ ಹಿತಕ್ಕಾಗಿ ತಮ್ಮ ಶ್ರಮವನ್ನು ಮೀಸಲಿಟ್ಟಿರುವ ಅವರಂತಹ ನಾಯಕರು ಸಕ್ರಿಯವಾಗಿ ಮುಂದಾಗಿರುವುದರಿಂದ ಕಾಂಗ್ರೆಸ್ ಪಕ್ಷವು ಜನಆಕರ್ಷಣೆಯ ಕೇಂದ್ರವಾಗುವ ನಿರೀಕ್ಷೆ ಮೂಡಿದೆ. ಈ ನೇಮಕಾತಿ ಸ್ಥಳೀಯ ಮಟ್ಟದಲ್ಲಿ ಹೊಸ ಚೈತನ್ಯವನ್ನು ತುಂಬಿ, ಪಕ್ಷದ ಭವಿಷ್ಯ ದೃಢಪಡಿಸುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ.

ಹೀಗಿದೆ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪಟ್ಟಿ

ಅಧ್ಯಕ್ಷರು

ಜಿ. ಚಂದ್ರಮೌಳಗೌಡ, ಕೋಡೂರು

ಉಪಾಧ್ಯಕ್ಷರು

ನಾಗೋಡಿ ವಿಶ್ವನಾಥ್, ನಿಟ್ಟೂರು

ಓಬೆದ್ದುಲ್ಲಾ ಶರೀಫ್, ಕೆಂಚನಾಲ

ಚನ್ನಬಸವ, ಜಯನಗರ

ಲೀಲಾವತಿ, ಬಾಳೂರು

ಪ್ರಧಾನ ಕಾರ್ಯದರ್ಶಿಗಳು

ಎಂ.ಪಿ ಸುರೇಶ್, ಹೊಸನಗರ ಟೌನ್

ಸದಾಶಿವ ಶ್ರೇಷ್ಠಿ, ಹೊಸನಗರ ಟೌನ್

ಖಜಾಂಚಿ – ವಿನಯ್ ಕುಮಾರ್, ದುಮ್ಮ

ಕಾರ್ಯದರ್ಶಿಗಳು

ಉಮೇಶ್ ಹೂವಿನಕೋಣೆ

ಶುಭಕರ ರಾಮ್ ಪೂಜಾರಿ, ಜಯನಗರ

ಸುರೇಶ್ ಎಸ್ ಪಿ, ಕೋಡೂರು

ಚಂದ್ರಯ್ಯ ಜೈನ್, ನಾಗೋಡಿ

ಶಿವಪ್ಪ ಬೆಳ್ಳೂರು, ಗುಬ್ಬಿಗ

ಸಂಘಟನಾ ಕಾರ್ಯದರ್ಶಿಗಳು

ಇಂದ್ರೇಶ್, ಮಾರುತಿ ನಗರ

ಪಿಯುಸ್ ರೋಡ್ರಿಗಸ್, ಅರಸಾಳು

ರಾಮಪ್ಪ, ಮುತ್ತಲ

ಸಂತೋಷ್, ಹರಿದ್ರಾವತಿ

ಚಂದ್ರಶೇಖರ್, ನವಲೋಡಿ

ಕಾರ್ಯಕಾರಿ ಸಮಿತಿ ಸದಸ್ಯರು

ಉಮೇಶ್, ಬಾಳೂರು

ಗಣಪತಿ, ಮಾರನಕಟ್ಟೆ

ಸುಬ್ಬಣ್ಣ, ಕಾರಕ್ಕಿ

ಮಾಧವ ಶೆಟ್ಟಿ, ಜೇನಿ

ಪ್ರಶಾಂತ್ ಕುಮಾರ್ ಹೆಚ್, ಹುಂಚಾರೋಡ್

ನಾಸಿರ್, ಕಚ್ಚಿಗೆಬೈಲ್

ನಾಗರಾಜ್, ಅರಸಾಳು

ಇಕ್ಬಾಲ್, ಬಟ್ಟೆಮಲ್ಲಪ್ಪ

ಲೋಕೇಶ್, ಗುಡ್ಡೆಕೊಪ್ಪ

ಮೃತ್ಯುಂಜಯ, ಪುರಪ್ಪೆಮನೆ

ನಿರ್ಮಲ, ನವಟೂರು

ದೀಪಿಕಾ ಕೃಷ್ಣ, ಮಾರುತಿನಗರ

ನೇಮಪ್ಪ ಬಂಡಿ, ರಿಪ್ಪನ್ ಪೇಟೆ

ಧನಲಕ್ಷ್ಮೀ, ರಿಪ್ಪನ್ ಪೇಟೆ

ಕೃಷ್ಣಮೂರ್ತಿ, ಕಳೂರು

ಪ್ರಶಾಂತ್ ಪಾಲೇಕರ್, ರಿಪ್ಪನ್ ಪೇಟೆ

ಕೃಷ್ಣೋಜಿ, ಕೆಂಚನಾಲ