POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಟ್ರೇಡಿಂಗ್ ಹೆಸರಲ್ಲಿ ವ್ಯಕ್ತಿಗೆ 1.06 ಕೋಟಿ ರೂ. ವಂಚನೆ – ದೂರು ದಾಖಲು

PO14 BS Market scam

ಟ್ರೇಡಿಂಗ್ ಹೆಸರಲ್ಲಿ ವ್ಯಕ್ತಿಗೆ 1.06 ಕೋಟಿ ರೂ. ವಂಚನೆ – ದೂರು ದಾಖಲು

ಟ್ರೇಡಿಂಗ್ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ 1.06 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಶಿವಮೊಗ್ಗ ಜಿಲ್ಲೆಯ ವ್ಯಕ್ತಿಗೆ ಕರೆ ಮಾಡಿದ ಅಪರಿಚಿತನೊಬ್ಬ ಟ್ರೇಡಿಂಗ್ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿ ವಾಟ್ಸ್‌ಆಪ್ ಗ್ರೂಪ್‌ಗೆ ಸೇರುವಂತೆ ಲಿಂಕ್ ಕಳುಹಿಸಿದ್ದ.

ವಾಟ್ಸ್‌ಆಪ್ ಗ್ರೂಪ್‌ನಲ್ಲಿ ತನಿಷ್ಕಾ ಸನ್ಯಾಮ್ ಎಂದು ಪರಿಚಯ ಮಾಡಿಕೊಂಡು, ಟ್ರೇಡಿಂಗ್ ಮಾಡುವ ಮೊಬೈಲ್ ಆಯಪ್ ಲಿಂಕ್ ಕಳುಹಿಸಿದ್ದರು. ಅದರಲ್ಲಿ ಪೂರ್ಣ ವಿವರ ದಾಖಲಿಸುವಂತೆ ತಿಳಿಸಿದ್ದರು. ಅಂತೆಯೇ ಶಿವಮೊಗ್ಗದ ವ್ಯಕ್ತಿ ಸಂಪೂರ್ಣ ಮಾಹಿತಿ ದಾಖಲಿಸಿದ್ದರು ಎನ್ನಲಾಗಿದೆ.

ಕೊನೆಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಶಿವಮೊಗ್ಗದ ವ್ಯಕ್ತಿಯಿಂದ ಹಂತ ಹಂತವಾಗಿ 1.06 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕೊನೆಗೆ ಲಾಭಾಂಶದ ಹಣ ಮರಳಿಸುವಂತೆ ಕೇಳಿದಾಗ ವಿವಿಧ ಟ್ಯಾಕ್ಸ್‌ಗಳ ನೆಪ ಹೇಳಿದ್ದು, ಶಿವಮೊಗ್ಗದ ವ್ಯಕ್ತಿಗೆ ಅನುಮಾನ ಬಂದಿದೆ. ಈ ಹಿನ್ನೆಲೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.