ಆನಂದಪುರ: ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಪೊಲೀಸ್ ಉಪಠಾಣೆಯ ಸಿಬ್ಬಂದಿಗಳಿಗಾಗಿ ಸುಮಾರು ನಲವತ್ತು ವರ್ಷಗಳ ಹಿಂದೆ ಸರ್ಕಾರ ನಿರ್ಮಿಸಿದಂತಹ ಪೊಲೀಸ್ ವಸತಿ ಗೃಹಗಳು ಇಂದು ಸಂಪೂರ್ಣವಾಗಿ ಶಿಥಿಲಗೊಂಡಿದೆ.
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಕಾಣುವಂತಹ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗದಲ್ಲಿ ನಿರ್ಮಿಸಿರುವಂತಹ 5 ಪೊಲೀಸ್ ವಸತಿ ಗೃಹಗಳು ಇದೀಗ ಸಂಪೂರ್ಣವಾಗಿ ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆಯ ಮುಖ್ಯ ತಾಣವಾಗಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದೆ.
ಮದ್ಯವ್ಯಸನಿ ಗಳಿಗಂತೂ ಇದು ಅಡ್ಡವಾಗಿದ್ದು ಯಾವುದೇ ಭಯವಿಲ್ಲದೆ ವಸತಿಗೃಹದ ಒಳಗಡೆನೇ ಇವರು ತಮ್ಮ ಅನೈತಿಕ ಚಟುವಟಿಕೆಯನ್ನು ರಾಜಾರೋಷವಾಗಿ ಮಾಡುತ್ತಿದ್ದಾರೆ.
ವಸತಿ ಗೃಹದ ಮುಂದೆ ಬಾನೆತ್ತರಕ್ಕೆ ಗಿಡಗಂಟಿಗಳು ಬೆಳೆದಿದ್ದು ವಾಸಕ್ಕೆ ಯೋಗ್ಯವಿಲ್ಲದಂತಾಗಿದೆ.
ಇಲ್ಲಿನ ಉಪ ಠಾಣೆಯ ಸಿಬ್ಬಂದಿಗಳು ವಸತಿಗೃಹಗಳಿಲ್ಲದೆ ಬೇರೆ ಕಡೆ ಬಾಡಿಗೆ ಮನೆಯಲ್ಲಿ ವಾಸಿಸುವ ವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸರ್ಕಾರದ ಲಕ್ಷಾಂತರ ರೂಪಾಯಿ ವಸತಿ ಗೃಹ ಪಾಳು ಬಿದ್ದಿದೆ.ಮುಖ್ಯರಸ್ತೆಯ ಪಕ್ಕದಲ್ಲೇ ವಸತಿ ಗೃಹಗಳು ಪಾಳು ಬಿದ್ದರೂ ಕೂಡ ಅಧಿಕಾರಿಗಳು ಗಮನಹರಿಸದೇ ಇರುವುದು ನಿಜವಾಗಿಯೂ ಕೂಡ ಅಧಿಕಾರಿಗಳ ಜಾಣ ಕುರುಡುತನವಾಗಿದೆ.
ಇನ್ನಾದರೂ ಅಧಿಕಾರಿಗಳು ಈ ವಸತಿಗೃಹಗಳನ್ನು ಪುನರ್ನಿರ್ಮಿಸಿ ಅನೈತಿಕ ಚಟುವಟಿಕೆ ತಾಣ ದಿಂದ ಮುಕ್ತಗೊಳಿಸಿ ವಸತಿಗೃಹವನ್ನು ಪುನರ್ನಿರ್ಮಿಸಿ ಸಿಬ್ಬಂದಿಗಳ ವಾಸಕ್ಕೆ ಯೋಗ್ಯ ಸ್ಥಳವನ್ನಾಗಿ ಮಾಡಿಕೊಡಬೇಕಾಗಿರುವುದು ಸಾರ್ವಜನಿಕರ ಆಗ್ರಹವಾಗಿದೆ.
ವರದಿ: ದೇವರಾಜ್ ರಿಪ್ಪನ್ ಪೇಟೆ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..