
ಎಟಿಎಮ್ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು
ಎಟಿಎಮ್ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು ಶಿವಮೊಗ್ಗ | ಕಳ್ಳನೋರ್ವ ಎಟಿಎಂನಲ್ಲಿ ಹಣ ಕದಿಯಲು ಯತ್ನಿಸಿದ ಘಟನೆ ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ ನೆಹರು ರಸ್ತೆಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಸಮೀಪದಲ್ಲಿರುವ ಬ್ಯಾಂಕ್ ಒಂದರ ಎಟಿಎಂನಲ್ಲಿ ಕಳವು ಯತ್ನ ನಡೆದಿದೆ. ಎಟಿಎಂ ಬಾಕ್ಸ್ ಒಡೆಯಲು ಕಳ್ಳ ಯತ್ನಿಸಿದ್ದಾನೆ. ಎಟಿಎಂನಲ್ಲಿ ಸೈರನ್ ಶಬ್ದ ಹಾಗೂ 112 ಸಿಬ್ಬಂದಿಯನ್ನು ನೋಡಿ ಕಳ್ಳ ಪರಾರಿಯಾಗಿದ್ದಾನೆ. ಈ ಸಂಬಂಧ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ…