ವಿವಾಹಿತ ಮಹಿಳೆ ನೇಣಿಗೆ ಶರಣು – ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು
ಶಿವಮೊಗ್ಗ: ನಗರದ ಮೇದಾರಿ ಕೇರಿಯ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ವಿವಾಹಿತ ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಕುಟುಂಬ ದೂರಿದೆ.
ಗಗನಶ್ರೀ(24) ನೇಣಿಗೆ ಶರಾಣದ ವಿವಾಹಿತ ಮಹಿಳೆ ನೇಣಿಗೆ ಶರಣಾಗಿದ್ದಾಳೆ. ಗಾಂಧಿ ಬಜಾರ್ ನಲ್ಲಿದ್ದಾಗ ಗಗನಶ್ರೀಗೆ ಸಂದೀಪ್ ಎಂಬಾತನೊಂದಿಗೆ ಪ್ರೀತಿ ಹುಟ್ಟಿತ್ತು. ಪ್ರೀತಿ ಮದುವೆಯ ವರೆಗೆ ಕರೆದೊಯ್ದರೂ ಸುಖಕರ ಸಂಸಾರ ನಡೆಸಲು ಸಾಧ್ಯವಾಗಲಿಲ್ಲ ಎಂದು ಗೊತ್ತಾಗಿದೆ.
ಮದುವೆಯಾಗಿ ಮೂರು ವರ್ಷ ಸಂಸಾರ ನಡೆಸಿದ್ದ ಗಗನಶ್ರೀ ಮತ್ತು ಸಂದೀಪನಿಗೆ ಒಂದು ಹೆಣ್ಣುಮಗುವಿದೆ. ನಿನ್ನೆ ನೇಣುಬಿಗಿದುಕೊಂಡಾಗ ಪತಿಯೇ ಆಸ್ಪತ್ರೆಗೆ ತಂದು ದಾಖಲಿಸಿದ್ದಾನೆ. ಮನೆಯೆಲ್ಲ ಬಟ್ಟೆಗಳು ಹರಡಿವೆ. ಸಂದೀಪನೇ ಆಕೆಯನ್ನು ಮೆಗ್ಗಾನ್ ಗೆ ಕರೆತಂದಿದ್ದಾನೆ.
ಪತಿಯೇ ಆಕೆಯ ಆತ್ಮಹತ್ಯೆಗೆ ಕಾರಣ ಎಂದು ಮೃತ ಗಗನಶ್ರೀಯ ಕುಟುಂಬ ಆರೋಪಿಸಿದೆ. ಗಗನಶ್ರೀ ಬಿಎಸ್ಸಿ ಪದವೀಧರೆಯಾಗಿದ್ದಳು. ಪ್ರಕರಣ ವಿನೋಬ ನಗರ ಠಾಣೆಯಲ್ಲಿ ದಾಖಲಾಗಿದೆ.
Married woman hangs herself – Family members suspect murder