POSTMAN NEWS

ನೈಜ ಸುದ್ದಿ ನೇರ ಬಿತ್ತರ..

ನನ್ನ ಪತ್ನಿಗೆ ಯಾಕೆ ಮೆಸೇಜ್ ಮಾಡ್ತೀಯಾ? ಎಂದು ಪ್ರಶ್ನಿಸಿದ್ದಕ್ಕೆ ಖಾರದ ಪುಡಿ ಎರಚಿ ಚಾಕು ಚುಚ್ಚಿದ ಸ್ನೇಹಿತ!

N6508722961738857598901b37c96e4c3f4395fed72fc5b6c531d2b8e36b3d6ada6855da69a2628b904cf04.jpg

ನನ್ನ ಪತ್ನಿಗೆ ಯಾಕೆ ಮೆಸೇಜ್ ಮಾಡ್ತೀಯಾ? ಎಂದು ಪ್ರಶ್ನಿಸಿದ್ದಕ್ಕೆ ಖಾರದ ಪುಡಿ ಎರಚಿ ಚಾಕು ಚುಚ್ಚಿದ ಸ್ನೇಹಿತ!

ಹಾಡಹಗಲೇ ಗೆಳೆಯನೊಬ್ಬ ತನ್ನ ಸ್ನೇಹಿತನ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದ ಶರಾವತಿ ನಗರದ ಪಾಂಡುರಂಗ ದೇಗುಲದ ಬಳಿ ನಡೆದಿದೆ.

ಅರುಣ್ ಎಂಬಾತ ತನ್ನ ಸ್ನೇಹಿತ ಅರುಣ್ ಎಂಬಾತನಿಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ರವಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗ ತಾಲೂಕಿನ ಕೋಟೆಗಂಗೂರಿನಲ್ಲಿ ಡ್ರೈವರ್ ಕೆಲಸ ಮಾಡುವ ರವಿ (34) ಚಾಕು ಇರಿತಕ್ಕೊಳಗಾದವ. ಈತನ ಸ್ನೇಹಿತ ಅಡುಗೆ ಕೆಲಸ ಮಾಡುವ ಅರುಣ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ರವಿಯ ಹೆಂಡತಿಗೆ ಅರುಣ್ ನಿರಂತರವಾಗಿ ಫೋನ್ ಮಾಡುವುದು, ಮೆಸೇಜ್ ಮಾಡುವುದನ್ನು ಮಾಡುತ್ತಿದ್ದನು. ಆಗ ನಿನ್ನ ಹತ್ತಿರ ಮಾತನಾಡಬೇಕು ಬಾ ಎಂದು ರವಿ, ಅರುಣನನ್ನು ಕರೆದಿದ್ದಾನೆ.

ಹೊಸಮನೆ ಬಡಾವಣೆಯ ತಿಥಿ ಊಟದ ಅಡುಗೆಗೆ ಎಂದು ಬಂದಿದ್ದ ಅರುಣ್, ತಾನಿರುವಲ್ಲಿಗೆ ಬರುವಂತೆ ರವಿಯನ್ನು ಕರೆದಿದ್ದಾನೆ. ಇಲ್ಲಿಗೆ ಬೈಕ್‌ನಲ್ಲಿ ಬಂದ ರವಿ ಮತ್ತು ಅರುಣ್‌ ನಡುವೆ ಮಾತಿನ ಜಟಾಪಟಿ ನಡೆಯುತ್ತದೆ. ಆದರೆ, ಅರುಣ್ ಅಡುಗೆ ಸ್ಥಳದಿಂದ ಹೊರಗೆ ಬರುವಾಗಲೇ ಖಾರದಪುಡಿ, ಚಾಕು, ತೆಗೆದುಕೊಂಡು ಬಂದಿದ್ದನು. ರವಿ ಮತ್ತು ಅರುಣ್ ನಡುವೆ ಮಾತಿನ ಚಕಮಕಿ ಅತಿಯಾಗಿ ಬೈಕಿನಲ್ಲಿ ಕುಳಿತಿದ್ದ ರವಿ ಮೇಲೆ ಅಡುಗೆ ಭಟ್ಟ ಅರುಣ್ ಖಾರದಪುಡಿ ಎರಚಿ ಚಾಕು ಚುಚ್ಚಿದ್ದಾನೆ.

ರವಿ ಬೈಕ್‌ನಿಂದ ಇಳಿಯುವ ಮುನ್ನವೇ ಭುಜ, ಪಕ್ಕೆ ಎಲುಬುಗಳಿಗೆ ಚಾಕುನಿಂದ ಚುಚ್ಚಿ ಪರಾರಿಯಾಗಿದ್ದಾನೆ. ಅಲ್ಲಿಗೆ ಬಂದ ರವಿಯ ಸ್ನೇಹಿತರು ರವಿಯನ್ನು ಕೂಡಲೇ ಶಿವಮಿಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ರವಿ ಸ್ನೇಹಿತರು ಮಾಹಿತಿ ನೀಡಿದ್ದು, ಪೊಲೀಸರು ಅರುಗೆಭಟ್ಟ ಅರುಣ್‌ನನ್ನು ಹುಡುಕುತ್ತಿದ್ದಾರೆ. ಆದರೆ, ಅರುಣ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.