
ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಶಿವಮೊಗ್ಗ:ಬೊಮ್ಮನಕಟ್ಟೆಯ ಗರಡಿ ಮನೆ ಬಳಿಯಿರುವ ತೋಟದಲ್ಲಿನ ಮಾವಿನ ಮರಕ್ಕೆ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಪ್ರಕರಣವೆಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳವಾರ ಬೆಳಿಗ್ಗೆ ೬-೩೦ ಕ್ಕೆ ವಾಕಿಂಗ್ಗೆ ತೆರಳಿದ್ದ ಮಹಿಳೆ ಹೇಮಾವತಿ (೫೦) ತಮ್ಮ ತೋಟದಲ್ಲಿಯೇ ಮಾವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಬೊಮ್ಮನಕಟ್ಟೆಯಲ್ಲಿ ಪತಿ ದೇವೇಂದ್ರಪ್ಪ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಹೇಮಾವತಿ ಪ್ರತಿನಿತ್ಯ…