ಎಟಿಎಂ ಕಾರ್ಡ್ ಬದಲಿಸಿ ಹಣ ವಂಚಿಸುತಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ
ಸಾಗರ: ಅಕ್ಟೋಬರ್ ೨೦೨೪ರಲ್ಲಿ ಕಾರ್ಗಲ್ ಟೌನ್ ಕೆನರಾ ಬ್ಯಾಂಕ್ ಎಟಿಎಂ ನಲ್ಲಿ ವೃದ್ದನನ್ನು ವಂಚಿಸಿ, ಅವರಿಂದ ಎಟಿಎಂ ಕಾರ್ಡ್ ನ ಪಿನ್ ಪಡೆದು ರೂ ೧,೪೯,೯೯೯ ಹಣವನ್ನು ಡ್ರಾ ಮಾಡಿಕೊಂಡ ಪ್ರಕರಣದ ಆರೋಪಿಗಳನ್ನು ಸಾಗರ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ರಾಜ್ಯದ ರೋಹನ್ ತಲ್ ಜಿಲ್ಲೆಯ ಜೋಗಿಂದರ್ ಮತ್ತು ಮುಖೇಶ್ (೪೮) ಇವರನ್ನು ದಸ್ತಗಿರಿ ಮಾಡಿ, ಆರೋಪಿಗಳಿಂದ ಕಾರ್ಗಲ್ ಪೊಲೀಸ್ ಠಾಣೆ ಮತ್ತು ಶಿರಾಳಕೊಪ್ಪ ಪೊಲೀಸ್ ಠಾಣೆಗಳಲ್ಲಿ ವರದಿಯಾದ ಸಾರ್ವಜನಿಕರನ್ನು ವಂಚಿಸಿ ಎಟಿಎಂ ನಿಂದ ಹಣವನ್ನು ತೆಗೆದುಕೊಂಡು ಹೋದ ಎರಡು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದ ರೂ ೧ ಲಕ್ಷ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು 2ಲಕ್ಷ ಮೌಲ್ಯದ ರಾಯಲ್ ಎನ್ ಫೀಲ್ಡ್ ಹಂಟರ್ ಬೈಕ್ ಅನ್ನು ಅಮಾನತುಪಡಿಸಿಕೊಳ್ಳಲಾಗಿದೆ.
ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ನೇತೃತ್ವದಲ್ಲಿ ಸಿಪಿಐ ಗ್ರಾಮಾಂತರ ಸಂತೋಷ್ ಶೆಟ್ಟಿ, ಕಾರ್ಗಲ್ ಎಸ್ ಐ ಹೊಳೆಬಸಪ್ಪ ಹೋಳಿ ಮತ್ತು ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ಹೆಚ್.ಸಿ ಸನಾವುಲ್ಲ, ಪಿಸಿ ವಿಕಾಸ್, ವಿಶ್ವನಾಥ, ಕೃಷ್ಣಮೂರ್ತಿ, ಮೆಹಬೂಬ ಒಳಗೊಂಡ ತನಿಖಾ ತಂಡವನ್ನು ರಚಿಸಿ ಹರಿಯಾನಾಕ್ಕೆ ಕಳುಹಿಸಲಾಗಿತ್ತು.