Headlines

ಪೆನ್ಶನ್‌ ಬರದಿದ್ದಕ್ಕೆ ಕಿವಿಚೈನ್‌ ಅಡವಿಟ್ಟು ಲೋನ್‌ ಕೇಳಿದ ಅಜ್ಜಿ,  ಹಳೆ ಸಾಲಕ್ಕೆ ಮನ್ನಾ ಎಂದ ಬ್ಯಾಂಕ್‌ , ‍ಫ್ರೀಡಂ ಫೈಟರ್‌ ಪತ್ನಿಗೆ ಹಿಂಗೆಲ್ಲಾ ಮಾಡ್ತಾರಾ?

ಪೆನ್ಶನ್‌ ಬರದಿದ್ದಕ್ಕೆ ಕಿವಿಚೈನ್‌ ಅಡವಿಟ್ಟು ಲೋನ್‌ ಕೇಳಿದ ಅಜ್ಜಿ,  ಹಳೆ ಸಾಲಕ್ಕೆ ಮನ್ನಾ ಎಂದ ಬ್ಯಾಂಕ್‌ , ‍ಫ್ರೀಡಂ ಫೈಟರ್‌ ಪತ್ನಿಗೆ ಹಿಂಗೆಲ್ಲಾ ಮಾಡ್ತಾರಾ?

ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯ ಕಿವಿಚೈನ್‌ ಮಾಯಾ ಮಾಡಿತಾ ಬ್ಯಾಂಕ್‌ | ಕೋಣಂದೂರು ಕೆನರಾ ಬ್ಯಾಂಕ್ ನಲ್ಲಿ ನಡೆದಿದ್ದೇನು..!!?

ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲು ಅನುಭವಿಸಿದ ಮಹಾನ್ ದೇಶ ಪ್ರೇಮಿಗಳಿಗೆ ಸರ್ಕಾರ ಪಿಂಚಣಿ ನೀಡುವ ಮೂಲಕ ಅವರ ಕುಟುಂಬದ ಮನೋಸ್ಥೈರ್ಯ ಹೆಚ್ಚಿಸಿ ಅವರನ್ನು ದೇಶದ ಆಸ್ತಿಯೆಂದು ಪರಿಗಣಿಸುತ್ತಿದೆ. ಅಂತಹ ಫ್ರೀಡಂ ಫೈಟರ್ ಪತ್ನಿಗೆ ಲೋನ್ ಕಟ್ಟಿಲ್ಲವೆಂದು ಕಿವಿಯಲ್ಲಿದ್ದ ಓಲೆಯನ್ನು ಬ್ಯಾಂಕ್ ನವರು ಮಂಗಮಾಯ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನಲ್ಲಿ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.

ವೀಡಿಯೋ ಇಲ್ಲಿ ವೀಕ್ಷಿಸಿ👆

ಹೌದು ಹೊಸನಗರ ತಾಲೂಕಿನ ಬಿಲ್ಲೇಶ್ವರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಎಸ್ ಚನ್ನವೀರಪ್ಪ ನವರ ಪತ್ನಿ ಹಾಲಮ್ಮನವರು ಮನೆ ದುರಸ್ಥಿಗೆ ಪಿಂಚಣಿ ಹಣದ ಆಧಾರದ ಮೇಲೆ ಮಾಡಿದ್ದ ಲೋನ್ ನ ಒಂದು ಕಂತು ಕಟ್ಟಿಲ್ಲವೆಂದು ಕಿವಿಯಲ್ಲಿದ್ದ ಓಲೆಯನ್ನು ಪಡೆದು 86ರ ವಯೋವೃದ್ದೆಗೆ ನಿಂದಿಸಿ ಹೊರದಬ್ಬಿರುವ ಬಗ್ಗೆ ಕೋಣಂದೂರು ಉಪಠಾಣೆಯಲ್ಲಿ ದೂರು ದಾಖಲಾಗಿದೆ.

ಪಿಂಚಣಿ ಹಣದ ಆಧಾರದ ಮೇಲೆ ಮನೆ ದುರಸ್ಥಿಗೆ ಕೋಣಂದೂರು ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದ ವೃದ್ದೆ ಕಳೆದ ನಾಲ್ಕು ತಿಂಗಳುಗಳಿಂದ ಪಿಂಚಣಿ ಹಣ ಬಂದಿಲ್ಲ ಈ ಹಿನ್ನಲೆಯಲ್ಲಿ ಲೋನ್ ತೀರುವಳಿ ಮಾಡಿರಲಿಲ್ಲ ಹಾಗೇಯೇ ಫೆಬ್ರವರಿ10 ರಂದು ಮನೆಯಲ್ಲಿ ರೇಷನ್ ಕೊರತೆಯ ಕಾರಣ ಕಿವಿಯಲ್ಲಿದ್ದ ಓಲೆ ಚೈನ್ ನ್ನು ಅಡವಿಟ್ಟು ಹೊಟ್ಟೆಚೀಲ ತುಂಬಿಸಿಕೊಳ್ಳಲು ಬ್ಯಾಂಕ್ ಗೆ ಬಂದರೇ ಕಲ್ಲು ಮನಸ್ಸಿನ ಬ್ಯಾಂಕ್ ಅಧಿಕಾರಿಗಳು ಚೈನ್ ನ್ನು ಪಡೆದು ಹಣ ನೀಡದೇ ಅವಾಚ್ಯವಾಗಿ ಏಕವಚನದಲ್ಲಿ ನಿಂದಿಸಿ ಹೊರದಬ್ಬಿದ್ದಾರೆ ಎಂದು ಆರೋಪಿಸುತ್ತಾರೆ ವೃದ್ದೆಯ ಮಗಳು ಶಕುಂತಳಾ…

ಬಿಲ್ಲೇಶ್ವರ ಗ್ರಾಮದ ಎಸ್ ಚನ್ನವೀರಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿ ದೇಶಸೇವೆ ಮಾಡುವ ಮೂಲಕ ಅಪ್ರತಿಮ ಸಾಧನೆಗೈದಿದ್ದಾರೆ ಅವರ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ ಆದರೆ ನಮ್ಮನ್ನು ಸರ್ಕಾರಗಳು ಹಾಗೂ ವ್ಯವಸ್ಥೆ ಇಷ್ಟು ನಿಕೃಷ್ಟವಾಗಿ ಕಾಣುತ್ತಿರುವು ಬೇದರದ ಸಂಗತಿ ಎಂದು 87ರ ಹರೆಯದ ವೃದ್ದೆ ಹಾಲಮ್ಮ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ…

ಸ್ವಾತಂತ್ರ್ಯ ಹೋರಾಟಗಾರರ ಪತ್ನಿಗೆ ಕಳೆದ ನಾಲ್ಕು ತಿಂಗಳುಗಳಿಂದ ಪಿಂಚಣಿ ಹಣ ನೀಡದೇ ಇರುವುದು ಸರ್ಕಾರದ ವೈಫಲ್ಯವೇ ಹೊರತು ಆ ಬಡ ವೃದ್ದೆಯದಲ್ಲ.. ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸರ್ಕಾರ ನೂತನ ಕಾನೂನಿನ ಸುಗ್ರೀವಾಜ್ಞೆಯನ್ನು ಹೊರಡಿಸಿದೆ ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಫೈನಾನ್ಸ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಿದರೆ ಬಡವರ ಪಾಡೇನು..

ಒಟ್ಟಾರೆಯಾಗಿ ಪ್ರಕರಣದ ಬಗ್ಗೆ ತೀರ್ಥಹಳ್ಳಿಯ ಪ್ರಾಮಾಣಿಕ ಪಿಎಸ್‌ಐ ಶಿವಣ್ಣಗೌಡ ಪಾಟೀಲ್ ತನಿಖೆ ನಡೆಸಿ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ಇದೆ……

Leave a Reply

Your email address will not be published. Required fields are marked *