ವೇಶ್ಯೆಯರೊಂದಿಗೆ ಸರಸ ಸಲ್ಲಾಪಕ್ಕೆ ಕಳ್ಳತನಕ್ಕಿಳಿದ ಕಿರಾತಕ – ಬಲೆಗೆ ಬಿದ್ದ ಜಾಲಿ ಜಾಲಿ ಕಿಲಾಡಿಯ ಕಥೆ ಕೇಳಿ ಪೊಲೀಸರೇ ಶಾಕ್!
ಹಾವೇರಿ : ಜೀವನ ನಡೆಸೋಕೆ ಕೆಲವರು ಕಳ್ಳತನದ ಕೆಟ್ಟ ದಾರಿ ತುಳಿದಿರೋದನ್ನ ನೋಡಿರುತ್ತೇವೆ. ಆದ್ರೆ ಇಲ್ಲೊಬ್ಬ ಕಳ್ಳ, ವೇಶ್ಯೆಯರೊಂದಿಗೆ ಸರಸ ಸಲ್ಲಾಪ ನಡೆಸಲು ದುಡ್ಡು ಬೇಕು ಅಂತ ಕಳ್ಳತನದ ಹಾದಿ ತುಳಿದಿರುವ ವಿಚಿತ್ರ ಘಟನೆ ನಡೆದಿದೆ. ಸಧ್ಯ ಈ ಕಿಲಾಡಿ ಕಳ್ಳ ಪೊಲೀಸರ ಕೈಗೆ ತಗಲಾಕೊಂಡಿದ್ದಾರೆ.
ಹೌದು, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೇಲೆ ನಿವಾಸಿ ಆರೋಪಿ ಚಾಂದಬಾಷ್ ಬಂಧಿತ ಆರೋಪಿ. ಈ ಕಳ್ಳತನ ಆರೋಪಿಯನ್ನು ಹಾವೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಕಳ್ಳತನದ ಉದ್ದೇಶವನ್ನು ಬಾಯಿಬಿಟ್ಟಿದ್ದಾನೆ. ಆತನ ಮಾತು ಕೇಳಿ ಸ್ವತಃ ಪೊಲೀಸರೂ ಶಾಕ್ ಆಗಿದ್ದಾರೆ.
ವೇಶ್ಯೆಯರ ಜತೆ ಸರಸ ಸಲ್ಲಾಪಕ್ಕಾಗಿ ಚಾಂದಬಾಷ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿದ್ದನು. ಅದರಿಂದ ಬಂದ ಹಣದಲ್ಲೇ ವೇಶ್ಯೆಯರ ಜೊತೆ ಸರಸಸಲ್ಲಾಪ ನಡೆಸುತ್ತಿದ್ದನಂತೆ! ಈಗಾಗಲೇ ಈತ ಒಟ್ಟು 1 ಲಕ್ಷ 40 ಸಾವಿರ ಮೌಲ್ಯದ 6 ಬೈಕ್ ಕದ್ದು ಮಾರಾಟ ಮಾಡಿದ್ದಾನಂತೆ.
ಪೊಲೀಸರ ವಿಚಾರಣೆ ವೇಳೆ ಎಲ್ಲ ವಿಚಾರವನ್ನು ಬಾಯಿಬಿಟ್ಟ ಬಳಿಕ ಪೊಲೀಸರು ಮಾರಾಟವಾಗಿದ್ದ 6 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.