ಪ್ರೆಸ್ ಟ್ರಸ್ಟ್ ವಿರುದ್ದ ಸುಳ್ಳು ಆರೋಪ – ಕಾನೂನುಕ್ರಮಕ್ಕೆ ನಿರ್ಧಾರ : ಎನ್ ಮಂಜುನಾಥ್
ಶಿವಮೊಗ್ಗ: ಸಾಮಾಜಿಕ ಜಾಲತಾಣಗಳಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಅದರ ಅಧ್ಯಕ್ಷರ ವಿರುದ್ಧ ಕಾರ್ಯನಿರತ ಪತ್ರಕರ್ತರ ಧ್ವನಿ ಎಂಬ ಸಂಘಟನೆಯು ಸುಳ್ಳು ಮತ್ತು ಅಪಪ್ರಚಾರದ ಸುದ್ದಿಗಳನ್ನು ಹರಡುತ್ತಿದ್ದು ಯಾರೂ ಇದನ್ನು ನಂಬಬಾರದು ಎಂದು ಟಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಅವರು, ಇಲ್ಲಸಲ್ಲದ ಆರೋಪವನ್ನು ಮಾಡುತ್ತಿರುವವರ ವಿರುದ್ಧ ಕಾನೂನು ಹೋರಾಟವನ್ನು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕೈಗೆತ್ತಿಕೊಳ್ಳಲಿದೆ. ನಗರದ ಪತ್ರಕರ್ತರ ವೃತ್ತಿಪರ ಚಟುವಟಿಕೆಗಳಿಗೆ ಭವನ ಬಳಕೆಯಾಗುತ್ತಿದೆ. ಯಾವುದೇ ಭ್ರಷ್ಟಾಚಾರ ಅಥವಾ ಹಣದ ಅಪವ್ಯಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು .
ಕೆಲವರು ಉದ್ದೇಶ ಪೂರ್ವಕವಾಗಿ ಮಾಡುತ್ತಿರುವ ಆರೋಪಗಳನ್ನು ಟ್ರಸ್ಟ್ ತಿರಸ್ಕರಿಸುತ್ತದೆ.
ಜಿಲ್ಲಾಧಿಕಾರಿಗಳಿಗೆ ಈ ಸುಳ್ಳು ಆರೋಪಗಳ ಮನವಿ ಪತ್ರವನ್ನು ಸಹ ಮೇಲಿನ ಸಂಘಟನೆಯವರು ನೀಡಿದ್ದಾರೆ. ಸಾರ್ವಜನಿಕರಲ್ಲಿ ಗೊಂದಲ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ಈ ಮಾಹಿತಿ ನೀಡುತ್ತಿರುವುದಾಗಿ ಅವರು ವಿವರಿಸಿದರು.
ಟ್ರಸ್ಟ್ ಬೈಲಾಪ್ರಕಾರ ಕೆಲಸ ನಿರ್ವಹಿಸುತ್ತಿದೆ ಪತ್ರಿಕಾಗೋಷ್ಠಿಯಿಂದ ಬಂದ ಹಣವನ್ನು ಪತ್ರಕರ್ತರಿಗೆ ಊಟ , ತಿಂಡಿ , ಕಾಫಿ , ವಿದ್ಯುತ್ ಬಿಲ್ , ಇಂಟರ್ನೆಟ್, ಸಿಬ್ಬಂದಿ ವೇತನ, ಪತ್ರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ , ಉಪನ್ಯಾಸ , ಕ್ರೀಡೆ ಇತ್ಯಾದಿಗಳಿಗೆ ಬಳಸಲಾಗುತ್ತಿದೆ . ಬ್ಯಾಂಕ್ ಖಾತೆಯ ಮೂಲಕವೇ ನಿರ್ವಹಿಸಲಾಗುತ್ತಿದೆ. ಯಾವುದೇ ವ್ಯಕ್ತಿ ಅಥವಾ ಅನ್ಯ ಸಂಸ್ಥೆ ಹೆಸರಲ್ಲಿ ಪತ್ರಿಕಾ ಭವನದ ಹಣ ಅಪವ್ಯಯವಾಗುತ್ತಿಲ್ಲ . ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದ್ದು ಅನುಮಾನಕ್ಕೆ ಆಸ್ಪದವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆದರೂ ಕೆಲವರು ಅಪಪ್ರಚಾರ ಮಾಡುತ್ತಿದ್ದು ಈ ಬಗ್ಗೆ ಟ್ರಸ್ಟ್ ವತಿಯಿಂದ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.