POSTMANNEWS

ನೈಜ ಸುದ್ದಿ ನೇರ ಬಿತ್ತರ..

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ವೃದ್ದೆಯ ಮಾಂಗಲ್ಯ ಸರ ಅಪಹರಿಸಿದ್ದ ಆರೋಪಿಯ ಬಂಧನ

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ವೃದ್ದೆಯ ಮಾಂಗಲ್ಯ ಸರ ಅಪಹರಿಸಿದ್ದ ಆರೋಪಿಯ ಬಂಧನ

ಸಾಗರ : ಸಂಜೆ ವೇಳೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ವೃದ್ದೆಯ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿದ್ದ ಆರೋಪಿಯನ್ನು, ಘಟನೆ ನಡೆದ 24 ಗಂಟೆಯೊಳಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸಫಲರಾಗಿದ್ದಾರೆ.

ಸಾಗರ ತಾಲೂಕು ಶೆಡ್ತಿಕೆರೆ ಗ್ರಾಮದ ನಿವಾಸಿ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ರವಿಕುಮಾರ್ ಸಿ (39) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿಯಿಂದ ಕಳವು ಮಾಡಿದ್ದ ಅಂದಾಜು 2. 26 ಲಕ್ಷ ರೂ. ಮೌಲ್ಯದ 26 ಗ್ರಾಂ 400 ಮಿಲಿ ತೂಕದ ಮಾಂಗಲ್ಯ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಟಿ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಮಹಾಬಲೇಶ್ವರ ಎಸ್ ಎನ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಸಿದ್ದರಾಮಪ್ಪ, ಸಿಬ್ಬಂದಿಗಳಾದ ಶೇಖ್ ಫೈರೋಜ್ ಅಹಮದ್, ರವಿಕುಮಾರ್,ಹನುಮಂತ ಜಂಬೂರ್, ನಂದೀಶ್, ಪ್ರವೀಣ್ ಕುಮಾರ್, ವಿಶ್ವನಾಥ್, ಚಾಲಕ ಗಿರೀಶ್ ಬಾಬು, ತಾಂತ್ರಿಕ ಘಟಕದ ಹೆಚ್ ಸಿ ಇಂದ್ರೇಶ್, ಗುರುರಾಜ್, ವಿಜಯಕುಮಾರ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಘಟನೆ ಹಿನ್ನೆಲೆ :

28-2-2025 ರಂದು ಸಂಜೆ ಶೆಡ್ತಿಕೆರೆ ಗ್ರಾಮದಲ್ಲಿ ವೃದ್ದ
ಮನೆಯ ವಿದ್ಯುತ್ ಸಂಪರ್ಕವನ್ನು ಆರೋಪಿ ಕಡಿತಗೊಳಿಸಿದ್ದ. ನಂತರ ಮನೆಯೊಳಗೆ ನುಗ್ಗಿ, ವೃದ್ದೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿದ್ದ. ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆ ಕಲಂ 309 (4), 332 (ಬಿ) ಅಡಿ ಪ್ರಕರಣ ದಾಖಲಾಗಿತ್ತು.

About The Author

Leave a Reply

Your email address will not be published. Required fields are marked *