Headlines

8 ತಿಂಗಳ ಗರ್ಭಿಣಿ ಪತ್ನಿಯನ್ನು ಮಗನ ಕಣ್ಣೆದುರೇ ಹತ್ಯೆಗೈದು ಠಾಣೆಗೆ ಶರಣಾದ ಪಾಪಿ ಪತಿ!

8 ತಿಂಗಳ ಗರ್ಭಿಣಿ ಪತ್ನಿಯನ್ನು ಮಗನ ಕಣ್ಣೆದುರೇ ಹತ್ಯೆಗೈದು ಠಾಣೆಗೆ ಶರಣಾದ ಪಾಪಿ ಪತಿ!

ತುಮಕೂರು : ಎಂಟು ತಿಂಗಳ ಗರ್ಭಿಣಿ ಹೆಣ್ಣು 8 ವರ್ಷದ ಮಗನ ಕಣ್ಣೆದುರುಗಡೆನೇ ನೇಣು ಬಿಗಿದು ಕೊಲೆ ಮಾಡಿ ಬಳಿಕ ಪತಿ ಠಾಣೆಗೆ ಹೋಗಿ ಶರಣಾಗಿರುವ ಘಟನೆ ತುಮಕೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ನಿನ್ನೆ ನಡೆದಿದೆ.

ಕೊಲೆಯಾದ ಗರ್ಭಿಣಿಯ ಹೆಸರು ನಗ್ಮಾ ಎಂದು ತಿಳಿದು ಬಂದಿದ್ದು ಇನ್ನೂ ಪಾಪಿ ಪತಿಯ ಹೆಸರು ಸೈಯದ್ ಎಂದು ತಿಳಿದುಬಂದಿದೆ.

ಹೌದು ತುಮಕೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿಯಾದ ನಗ್ಮಾಗೆ 8 ವರ್ಷದ ಮಗನಿದ್ದಾನೆ. ಒಂದು ವರ್ಷದ ಹಿಂದೆ ನಗ್ಮಾ ಮೊದಲ ಗಂಡನನ್ನು ಬಿಟ್ಟಿದ್ದಳು. ಬಳಿಕ ಸೈಯದ್ ನನ್ನು ಪ್ರೀತಿಸಿ ಎರಡನೇ ಮದುವೆ ಆಗಿದ್ದಾಳೆ. ಆದರೆ ಈಗ ಈ ಪಾಪಿ ಪತಿ ಪತ್ನಿಯ ಜೀವ ತೆಗೆದಿರುವ ಆರೋಪ ಕೇಳಿ ಬಂದಿದೆ.ಎಂಟು ತಿಂಗಳ ಗರ್ಭಿಣಿ ಆಗಿರುವ ನಗ್ಮಾಳನ್ನು ನೇಣು ಬಿಗಿದು 8 ವರ್ಷದ ಮಗನ ಕಣ್ಣೆದುರೇ ಹತ್ಯೆಗೈದಿದ್ದಾನೆ.

ಈತ ನಶೆಮುಕ್ತ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ಗರ್ಭಿಣಿಯಾದ ಪತ್ನಿಯನ್ನು ನೋಡಿ ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ ಹಣ ತೆಗೆದುಕೊಂಡು ಬಾ ಎಂದು ಪೀಡಿಸಿ ಹಲ್ಲೆ ನಡೆಸಿದ್ದ. ನಿನ್ನೆ ಇದೆ ವಿಚಾರಕ್ಕೆ ಗಲಾಟೆ ನಡೆದು 8 ವರ್ಷದ ಮಗನ ಕಣ್ಣೆದುರೇ ನಗ್ಮಾ ಬಾಯಿಗೆ ಬಟ್ಟೆ ತುರುಕಿ ನೇಣು ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

Sinful husband who killed his 8 months pregnant wife in front of his son and surrendered to the police!

Leave a Reply

Your email address will not be published. Required fields are marked *