
ಕೋಣಂದೂರು – ಕಾಳುಮೆಣಸು ವ್ಯಾಪಾರಿಗೆ ೫ ಲಕ್ಷ ರೂ. ವಂಚನೆ – ಪ್ರಕರಣ ದಾಖಲು
ಕೋಣಂದೂರಿನ ಕಾಳುಮೆಣಸು ವ್ಯಾಪಾರಿಗೆ ೫ ಲಕ್ಷ ರೂ. ವಂಚನೆ ಶಿವಮೊಗ್ಗ: ಕಾಳುಮೆಣಸು ಪೂರೈಸುವುದಾಗಿ ನಂಬಿಸಿ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಅಡಿಕೆ ಮಂಡಿಯ ಮಾಲೀಕರೊಬ್ಬರಿಗೆ ₹5 ಲಕ್ಷ ವಂಚನೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ವ್ಯಕ್ತಿಗಳ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಣಂದೂರಿನ ಬಸವನ ಬೀದಿಯಲ್ಲಿ ಅಡಿಕೆ ಮಂಡಿ ನಡೆಸುತ್ತಿರುವ ವ್ಯಕ್ತಿಯು ಕಳೆದ ಒಂದು ವರ್ಷದಿಂದ ಈ ಇಬ್ಬರು ಆರೋಪಿಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದವರು. ಜುಲೈ 8 ರಂದು ಆರೋಪಿಗಳು ಕಾಳುಮೆಣಸು…