ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್

ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್ – ಸಂಚಾರ ವ್ಯತ್ಯಯ ತೀರ್ಥಹಳ್ಳಿ : ಆಗುಂಬೆ ಘಾಟಿಯಲ್ಲಿ  ಬೃಹತ್ ಮರವೊಂದು ಅಡ್ಡಲಾಗಿ ರಸ್ತೆಗೆ ಬಿದ್ದ ಪರಿಣಾಮ ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು ಅದರಲ್ಲೂ ಮಣಿಪಾಲ ಆಸ್ಪತ್ರೆಗೆ ಹೋಗುವ ಆಂಬುಲೆನ್ಸ್ ಗಳಿಗೆ ತೊಂದರೆಯಾಗಿದೆ. ಆಗುಂಬೆ ಘಾಟಿಯ ಪ್ರದೇಶದಲ್ಲಿ ಸಂಜೆ ಬಿರುಸಿನ ಗಾಳಿ ಮತ್ತು ಮಳೆಗೆ ಒಂದು ದೊಡ್ಡ ಮರ ರಸ್ತೆ ಮೇಲೆ ಬಿದ್ದ ಪರಿಣಾಮ, ರಾಷ್ಟ್ರೀಯ ಹೆದ್ದಾರಿ 169A–ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸುದೀರ್ಘ ಸಮಯದವರೆಗೆ ಉಡುಪಿ ಮತ್ತು…

Read More

ಕಾಂತಾರಾ 1 ಚಿತ್ರತಂಡದ ಕಲಾವಿದ ಹೃದಯಾಘಾತದಿಂದ ಸಾವು – ಚಿತ್ರ ತಂಡಕ್ಕೆ ಕಾಡುತಿದ್ದೆಯಾ ಕಂಟಕ.!? ಒಂದಲ್ಲ, ಎರಡಲ್ಲ ಇದು ಮೂರನೇ ಸಾವು!

ಕಾಂತಾರಾ 1 ಚಿತ್ರತಂಡದ ಕಲಾವಿದ ಹೃದಯಾಘಾತದಿಂದ ಸಾವು – ಚಿತ್ರ ತಂಡಕ್ಕೆ ಕಾಡುತಿದ್ದೆಯಾ ಕಂಟಕ.!? ಒಂದಲ್ಲ, ಎರಡಲ್ಲ ಇದು ಮೂರನೇ ಸಾವು! ತೀರ್ಥಹಳ್ಳಿ : ಕಾಂತಾರ ತಂಡಕ್ಕೆ ಶಾಕ್ ಮೇಲೆ ಶಾಕ್ ಸಿಗುತ್ತಲೇ ಇದೆ. ಪ್ರೀಕ್ವೆಲ್ ಶೂಟಿಂಗ್ ವೇಳೆ ಎಚ್ಚರಿಕೆಯಿಂದ ಇರುವಂತೆ ದೈವ ಸೂಚಿಸಿದ ಬೆನ್ನಲ್ಲೇ ಕಾಂತಾರ ತಂಡದಲ್ಲಿ ಸಾವುಗಳು ಸಂಭವಿಸುತ್ತಲೇ ಇವೆ. ಕಾಂತರ-2 ಚಿತ್ರೀಕರಣ ತೀರ್ಥಹಳ್ಳಿ ತಾಲೂಕಿನ ಸುತ್ತ ಮುತ್ತ ನಡೆಯುತ್ತಿದ್ದು ಯಡೂರು ಹಾಗೂ ಆಗುಂಬೆ ಸಮೀಪ ಚಿತ್ರತಂಡ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದೆ.ನಿನ್ನೆ ಚಿತ್ರೀಕರಣ ಮುಗಿಸಿ…

Read More

ಕೆಟ್ಟು ನಿಂತ ವಾಹನ – ಆಗುಂಬೆ ಘಾಟಿಯಲ್ಲಿ  ಟ್ರಾಫಿಕ್ ಜಾಮ್!!

ಕೆಟ್ಟು ನಿಂತ ವಾಹನ – ಆಗುಂಬೆ ಘಾಟಿಯಲ್ಲಿ  ಟ್ರಾಫಿಕ್ ಜಾಮ್!! ತೀರ್ಥಹಳ್ಳಿ : ರಾಜ್ಯ ಹೆದ್ದಾರಿ 169 ಎ ಶಿವಮೊಗ್ಗ – ತೀರ್ಥಹಳ್ಳಿ – ಆಗುಂಬೆ – ಮಂಗಳೂರು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ವಾಹನವೊಂದರ ಆಕ್ಸೆಲ್  ಕಡಿತವಾದ್ದರಿಂದ ಘಾಟಿಯ ರಸ್ತೆಯ ಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಘಾಟಿಯ ಎಂಟನೇ ತಿರುವಿನಲ್ಲಿ ವಾಹನ ಕೆಟ್ಟು ನಿಂತ ಪರಿಣಾಮ ಆಗುಂಬೆ ಘಾಟಿಯ ಎರಡು ಬದಿಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದು ನಿನ್ನೆಯಿಂದ ಸಿಕ್ಕಾಪಟ್ಟೆ ಮಳೆ…

Read More

ಕೊಟ್ಟಿಗೆಯಲ್ಲಿ ಅವಿತು ಕುಳಿತಿದ್ದ  12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಕೊಟ್ಟಿಗೆಯಲ್ಲಿ ಅವಿತು ಕುಳಿತಿದ್ದ  12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ ಹೊಸನಗರ : ರಾಮಚಂದ್ರಾಪುರ ಮತ್ತು ವಾರಂಬಳ್ಳಿ ಗ್ರಾಮದ ನಗರ ಅರಣ್ಯ ವ್ಯಾಪ್ತಿಯಲ್ಲಿ ಕೊಟ್ಟಿಗೆಯಲ್ಲಿ ಅಡಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯವರು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಎರಡು ದಿನಗಳಿಂದ ವಾರಂಬಳ್ಳಿ ಗ್ರಾಮದ  ಈಶ್ವರಪ್ಪ ಎಂಬುವವರ ಮನೆಯಲ್ಲಿ ಕಾಳಿಂಗ ಸರ್ಪ ಇತ್ತು.  ಈ ಹಿನ್ನೆಲೆ ಈಶ್ವರಪ್ಪ ಕಾಳಿಂಗ ಸರ್ಪವನ್ನು ಹಿಡಿಯಲು ಉರಗ ತಜ್ಞ ಅಜಯ್​ಗಿರಿಯವರಿಗೆ ಕರೆ ಮಾಡಿದ್ದಾರೆ. ನಂತರ  ಅವರ ನೇತೃತ್ವದಲ್ಲಿ…

Read More

ಆಗುಂಬೆಯಲ್ಲಿ 184 ಮಿ‌ಮೀ‌ ಮಳೆ : ತುಂಗಾ ಜಲಾಶಯ ಭರ್ತಿ

ಆಗುಂಬೆಯಲ್ಲಿ 184 ಮಿ‌ಮೀ‌ ಮಳೆ : ತುಂಗಾ ಜಲಾಶಯ ಭರ್ತಿ ಶಿವಮೊಗ್ಗ : ಮಲೆನಾಡಿನಲ್ಲಿ ಮುಂಗಾರು ಚುರುಕಾಗಿದೆ. ನದಿ, ಹಳ್ಳ, ಕೆರೆಗಳು ತುಂಬಲಾರಂಭಿಸಿದೆ. ಈಗಾಗಲೇ ತುಂಗ ನದಿ ಜಲಾಶಯ ಭರ್ತಿಯಾಗಿದೆ. ಅದರಂತೆ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ತೀವ್ರಗೊಂಡಿದೆ. ಕಳೆದ 24 ಗಂಟೆಯಲ್ಲಿ ಆಗುಂಬೆಯಲ್ಲಿ ಅತಿಹೆಚ್ಚಿನ ಮಳೆಯಾಗಿರುವುದು ದಾಖಲಾಗಿದೆ. ಆಗುಂಬೆಯಲ್ಲಿ 184.5 ಮಿಮಿ ಮಳೆಯಾದರೆ, ಶೃಂಗೇರಿಯಲ್ಲಿ 102.02 ಮಿಮಿ, ಹುಂಚದಕಟ್ಟೆ 67 ಮಿಮಿ, ತ್ಯಾಗರ್ತಿ 18.4 ಮಿಮಿ, ಭದ್ರಾವತಿಯಲ್ಲಿ 15.8  ಮಳೆಯಾಗಿದೆ. ಆಗುಂಬೆನೇ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದೆ….

Read More

ಬಸ್ ನಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು | ಆಗುಂಬೆ ಘಾಟ್ ನಲ್ಲಿ ನಡೆದ ಘಟನೆ

ಬಸ್ ನಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು | ಆಗುಂಬೆ ಘಾಟ್ ನಲ್ಲಿ ನಡೆದ ಘಟನೆ ತೀರ್ಥಹಳ್ಳಿ: ಪರ್ಕಳದಿಂದ ತೀರ್ಥಹಳ್ಳಿ ಮಾರ್ಗವಾಗಿ ಕೊಪ್ಪಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ನಲ್ಲೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಇಂದು ನಡೆದಿದೆ. ಬಸ್ ನಲ್ಲಿ ಆಗಮಿಸುತ್ತಿದ್ದ ಕೊಪ್ಪದ ಹರೀಶ್ ಬಳ್ಳಾಲ್ ಎನ್ನುವವರಿಗೆ ತೀವ್ರ ಹೃದಯಘಾತ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಬಸ್ ಡ್ರೈವರ್ ಪ್ರಾಥಮಿಕ ಕೇಂದ್ರಕ್ಕೆ ಕರೆ ತಂದಿದ್ದಾರೆ. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಹರೀಶ್ ಪ್ರಾಣ ಬಿಟ್ಟಿದ್ದಾರೆ. ಆಗುಂಬೆ ವೈದ್ಯಾಧಿಕಾರಿಯಾದ ಅನಿಕೇತನ್ ಪರೀಕ್ಷಿಸಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ….

Read More

ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪದವಿ ವಿದ್ಯಾರ್ಥಿ !

ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪದವಿ ವಿದ್ಯಾರ್ಥಿ ! ತೀರ್ಥಹಳ್ಳಿ : ತುಂಗಾ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದಯುವಕನೋರ್ವ ವಾರಳಿ ಬಳಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಂಪಂ ವ್ಯಾಪ್ತಿಯ ವಾರಳ್ಳಿಯ ಧ್ರುವ (20) ವಾರಳ್ಳಿ ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತನು ವಾರಳ್ಳಿ ದಿನೇಶ್ ರವರ ಮಗ ಎಂದು ತಿಳಿದು ಬಂದಿದೆ.ಕುರುವಳ್ಳಿ ಪ್ರಮೋದ್ ಪೂಜಾರಿ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಆಗುಂಬೆ ಪೊಲೀಸ್…

Read More