Headlines

ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್

GridArt 20250617

ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್ – ಸಂಚಾರ ವ್ಯತ್ಯಯ

ತೀರ್ಥಹಳ್ಳಿ : ಆಗುಂಬೆ ಘಾಟಿಯಲ್ಲಿ  ಬೃಹತ್ ಮರವೊಂದು ಅಡ್ಡಲಾಗಿ ರಸ್ತೆಗೆ ಬಿದ್ದ ಪರಿಣಾಮ ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು ಅದರಲ್ಲೂ ಮಣಿಪಾಲ ಆಸ್ಪತ್ರೆಗೆ ಹೋಗುವ ಆಂಬುಲೆನ್ಸ್ ಗಳಿಗೆ ತೊಂದರೆಯಾಗಿದೆ.

ಆಗುಂಬೆ ಘಾಟಿಯ ಪ್ರದೇಶದಲ್ಲಿ ಸಂಜೆ ಬಿರುಸಿನ ಗಾಳಿ ಮತ್ತು ಮಳೆಗೆ ಒಂದು ದೊಡ್ಡ ಮರ ರಸ್ತೆ ಮೇಲೆ ಬಿದ್ದ ಪರಿಣಾಮ, ರಾಷ್ಟ್ರೀಯ ಹೆದ್ದಾರಿ 169A–ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸುದೀರ್ಘ ಸಮಯದವರೆಗೆ ಉಡುಪಿ ಮತ್ತು ಶಿವಮೊಗ್ಗ ನಡುವಿನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಆಗುಂಬೆಯ ಚೆಕ್ ಪೋಸ್ಟ್ ಬಳಿ ಬೃಹತ್ ಮರವೊಂದು ಧರೆಗೆ ಉರುಳಿದೆ. ಮರ ಉರುಳಿದ ಹಿನ್ನೆಲೆ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಆಗಿದೆ.

ಒಂದು ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ವಾಹನಗಳು ನಿಲ್ಲುವಂತಾಗಿದೆ. ಟ್ರಾಫಿಕ್ ಜಾಮ್ ನಲ್ಲಿ  ಆಂಬುಲೆನ್ಸ್ ಸಿಲುಕಿಕೊಂಡಿವೆ. ಮಣಿಪಾಲ್ ಮತ್ತು ವೆನ್ ಲಾಕ್ ಗೆ ತೆರಳುವ ಅಂಬ್ಯುಲೆನ್ಸ್ ಗಳು ಸಾಲುಗಟ್ಟಿ ನಿಂತಿವೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.