w
Headlines
Home » RIPPONPETE | ಪಾನಮತ್ತನಾಗಿ ಮಲಗಿದ ಪೊಲೀಸ್ ಪೇದೆ

RIPPONPETE | ಪಾನಮತ್ತನಾಗಿ ಮಲಗಿದ ಪೊಲೀಸ್ ಪೇದೆ

JPEG 20250617 121213 1562315879810902299 wm

RIPONPETE | ಪಾನಮತ್ತನಾಗಿ ಮಲಗಿದ ಪೊಲೀಸ್ ಪೇದೆ

ಗಮನಿಸುತಿದ್ದ ಸಾರ್ವಜನಿಕರು ಪೊಲೀಸಪ್ಪನ ಪರಿಯನ್ನು ಕಂಡು ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಇಂತಹವರೂ ಇದ್ದಾರಾ?ಎನ್ನುತ್ತಲೇ ಮುಂದೆ ಸಾಗುತಿದ್ದರು ಕಳೆದ ಕೆಲವು ತಿಂಗಳ ಹಿಂದೆ ಪಟ್ಟಣದ ಪೊಲೀಸ್ ಠಾಣೆಗೆ ನಿಯುಕ್ತಿಗೊಂಡ ಈ ಪೇದೆ ಅಂದಿನಿಂದಲೂ ಪಾನಮತ್ತನಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದು ಕೆಲವೊಮ್ಮೆ ಸಾರ್ವಜನಿಕ ರೊಂದಿಗೆ

ರಿಪ್ಪನ್ ಪೇಟೆ: ಕರ್ತವ್ಯದಲ್ಲಿರುವಾಗಲೇ ಪಾನಮತ್ತ ನಾಗಿರುವ ಪಟ್ಟಣದ ಪೊಲೀಸ್ ಪೇದೆಯೋರ್ವರು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿಯೇ ಮಲಗಿ ಅಪಹಾಸ್ಯಕ್ಕೀಡಾಗಿರುವ ಘಟನೆ ಸೋಮವಾರ ನಡೆದಿದೆ.

ಪೊಲೀಸ್ ಠಾಣೆಯ ಪಕ್ಕದ ರಸ್ತೆಯ ಅಂಚಿನಲ್ಲಿ ಕೆಲಕಾಲ ಮಲಗಿದ್ದ ಪೇದೆ ಶಿವಕುಮಾರ್, ಅರೆಗಣ್ಣು ತೆರೆದು ಮಂಪರಿನಲ್ಲಿ ಏನನ್ನೋ ಗೊಣಗುತ್ತಾ ರಸ್ತೆ ಸಂಚಾರಿಗಳ ಗಮನ ಸೆಳೆಯುತ್ತಿದ್ದರು.

ಗಮನಿಸುತಿದ್ದ ಸಾರ್ವಜನಿಕರು ಪೊಲೀಸಪ್ಪನ ಪರಿಯನ್ನು ಕಂಡು ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಇಂತಹವರೂ ಇದ್ದಾರಾ?ಎನ್ನುತ್ತಲೇ ಮುಂದೆ ಸಾಗುತಿದ್ದರು ಕಳೆದ ಕೆಲವು ತಿಂಗಳ ಹಿಂದೆ ಪಟ್ಟಣದ ಪೊಲೀಸ್ ಠಾಣೆಗೆ ನಿಯುಕ್ತಿಗೊಂಡ ಈ ಪೇದೆ ಅಂದಿನಿಂದಲೂ ಪಾನಮತ್ತನಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದು ಕೆಲವೊಮ್ಮೆ ಸಾರ್ವಜನಿಕ ರೊಂದಿಗೆ ಅಸಭ್ಯ ವರ್ತನೆ ತೋರುತಿದ್ದರು ಎಂದು ತಿಳಿದು ಬಂದಿದೆ.

ಇಲಾಖೆಯ ಮೇಲಾಧಿಕಾರಿಗಳು ಎಚ್ಚರಿಕೆ ನೀಡಿದರು ನಿರ್ಲಕ್ಷಿಸಿ ತನ್ನ ಹಳೆಯ ಚಾಳಿ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.