w
Headlines

ರಿಪ್ಪನ್ ಪೇಟೆ: ಪ್ರಬುದ್ದ ಸ್ವಸಹಾಯ ಸಂಘದ ಮಹಿಳೆಯರಿಗೆ ಗಾದಿ ವಿನ್ಯಾಸ ತರಬೇತಿ ಕಾರ್ಯಗಾರ

ರಿಪ್ಪನ್‌ಪೇಟೆ: ನಬಾರ್ಡ್ ಮತ್ತು ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಶಿವಮೊಗ್ಗ ಇವರ ಸಂಯುಕ್ತ ಅಶ್ರಯದಲ್ಲಿ ಕೆಂಚನಾಲ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಬುದ್ಧ ಸ್ವಸಹಾಯ ಸಂಘದ ಮಹಿಳೆಯರಿಗಾಗಿ ಗಾದಿ ವಿನ್ಯಾಸ ಕುರಿತಾದ 15 ದಿನಗಳ ತರಬೇತಿ ಕಾರ್ಯಗಾರ ನಡೆಯಿತು. ಈ ತರಬೇತಿ ಕಾರ್ಯಗಾರದಲ್ಲಿ ಪ್ರಬುದ್ದ ಸ್ವಸಹಾಯ ಸಂಘದ 35 ಮಹಿಳೆಯರಿಗೆ 15 ದಿನಗಳ ಕಾಲ ಗಾದಿ ವಿನ್ಯಾಸದ ಕುರಿತು ತರಬೇತಿ ನೀಡಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಶಿವಮೊಗ್ಗ ನಬಾರ್ಡ್ ಮುಖ್ಯಸ್ಥರಾದ ಬಿ ರವಿ ಯವರು ಗ್ರಾಮೀಣ ಪ್ರದೇಶದ…

Read Full News

ಮಂಡಗದ್ದೆ : ಅನಾಥ ಶವವಾಗಿ ಸಿಕ್ಕ ಎರಡು ದಿನದ ನವಜಾತ ಶಿಶು

ತೀರ್ಥಹಳ್ಳಿ : ತಾಲೂಕಿನ ಮಂಡಗದ್ದೆಯಲ್ಲಿ ಹುಟ್ಟಿದ ಎರಡು ದಿನದ ಮಗು ಕರಳು ಬಳ್ಳಿ ಸಹ ಹಾಗೆ ಇರುವ ಗಂಡು ಮಗುವೊಂದು ಮಂಡಗದ್ದೆಯ ಕೆರೆಯ ಬಳಿ ಯಾರೋ ಇಟ್ಟು ಅಥವಾ ಬಿಸಾಕಿ ಹೋಗಿರುವ ದಾರುಣ ಘಟನೆ ನೆಡೆದಿದೆ. ಮಂಡಗದ್ದೆಯ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಬೆಸ್ತರಿಗೆ ಈ ಶಿಶು ಸಿಕ್ಕಿದ್ದು ತಕ್ಷಣವೇ ಅಲ್ಲಿನ ಗ್ರಾಮಪಂಚಾಯಿತಿ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಮಗುವಿನ ಜನನವನ್ನು ಮುಚ್ಚಿಡುವ ಸಲುವಾಗಿ ಯಾರೋ ಈ ರೀತಿ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಕೃತ್ಯಕ್ಕೆ ಕಾರಣರಾದ ಪಾಪಿ…

Read Full News

ಶಿವಮೊಗ್ಗ : ಬುಡಮೇಲಾಗಿ ಮರ ಬಿದ್ದು ಕಾರು ಜಖಂ

ಶಿವಮೊಗ್ಗ : ಇಲ್ಲಿನ ತಿಲಕ್ ನಗರದ ಮುಖ್ಯ ರಸ್ತೆಯಲ್ಲಿ ಬೃಹತ್ ಮರವೊಂದು ಬುಡಮೇಲಾಗಿ ಕಾರಿನ ಮೇಲೆ ಉರುಳಿದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿಯಾಗಿಲ್ಲ. ತಿಲಕನಗರ ಮುಖ್ಯ ರಸ್ತೆಯ ಡಯಾನ ಬುಕ್ ಹೌಸ್ ಸಮೀಪ ಇದ್ದ ಬೃಹತ್ ಮರ ಬುಡಮೇಲಾಗಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿದೆ‌.ಮರ ಉರುಳಿದ್ದರಿಂದ ಕಾರು ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗುತ್ತಿದೆ.  ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅರಣ್ಯ…

Read Full News

ರಿಪ್ಪನ್ ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ರಿಪ್ಪನ್‌ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪುನರ್ ನಾಮಕರಣಗೊಳಿಸುವಂತೆ ಆಗ್ರಹಿಸಿ 30 ಗ್ರಾಮಗಳಲ್ಲಿ ಸಾರ್ವಜನಿಕ ಸಹಿ ಸಂಗ್ರಹಣ ಅಭಿಯಾನಕ್ಕೆ ರಿಪ್ಪನ್‌ಪೇಟೆಯಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಮತ್ತು ರಾಜ್ಯ ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಇಂದು ಸಾರ್ವಜನಿಕರ ಸಹಿ ಸಂಗ್ರಹಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಹೊಸನಗರ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆಯಿಂದ ತಾಲೂಕಿನ ಅಭಿವೃದ್ದಿ ಮಾಡಲು ಸಾಧ್ಯವಾಗುತ್ತದೆ.ಒಂದು ತಾಲೂಕ್ಕಿಗೆ ಇಬ್ಬಿಬ್ಬರು ಶಾಸಕರಾಗಿ ಅಭಿವೃದ್ಧಿ ಕಾರ್ಯಗಳು ಕನಸಿನ ಮಾತಾಗಿದೆ.ನಮ್ಮ ತಾಲೂಕ್ಕಿಗೆ ವಿಧಾನಸಭಾ ಕ್ಷೇತ್ರ ಕೇಳುವುದು ನಮ್ಮ ಹಕ್ಕು…

Read Full News

ರಿಪ್ಪನ್ ಪೇಟೆ : ಕಳಪೆ ಚರಂಡಿ ಕಾಮಗಾರಿ,ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬರುವೆ ಶಾಲೆಯ ಮುಂಭಾಗದ ರಸ್ತೆ

ರಿಪ್ಪನ್ ಪೇಟೆ: ಇಲ್ಲಿನ ಚೌಡೇಶ್ವರಿ ಬೀದಿಯ ಬರುವೆ ಶಾಲೆಯ ಮುಂಭಾಗ 2018 ರಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ಮಿಸಿದ್ದ ಪ್ರವಾಹ ನಿಯಂತ್ರಣ ಕಾಲುವೆಯ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ನಿರ್ಮಿಸಿದ್ದ ಅಷ್ಟು ಚರಂಡಿಯು ಕುಸಿದು ಮುಚ್ಚಿ ಹೋಗಿದ್ದು ಈ ರಸ್ತೆಯು ಅಪಾಯಕ್ಕೆ ಆಹ್ವಾನ ಕೊಡುತ್ತಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅನುದಾನದದಡಿ  ಲಕ್ಷಾಂತರ ವೆಚ್ಚದಲ್ಲಿ ಕೈಗೊಂಡ ಪ್ರವಾಹ ನಿಯಂತ್ರಣ ಚರಂಡಿ ನಿರ್ಮಾಣ ಕಾಮಗಾರಿ ಕಳಪೆಯಾಗಿ ಮುಚ್ಚಿ ಹೋಗಿದೆ.ಈ…

Read Full News

ಪ್ರೀತಿಸಿ ವಂಚನೆ : ಗರ್ಭವತಿಯಾಗಿದ್ದ ಯುವತಿ ಹಾಗೂ ಗರ್ಭದಲ್ಲಿದ್ದ ಏಳು ತಿಂಗಳ ಮಗು ಸಾವು

ಶಿವಮೊಗ್ಗ:ಯುವಕನೊಬ್ಬ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ ಕಾರಣ ಮುಗ್ಧ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಬದುಕಿ ಬಾಳಬೇಕಾಗಿದ್ದ ಯುವತಿಯು ಮದುವೆಗೆ ಮೊದಲೇ ಗರ್ಭವತಿಯಾಗಿ ಮಗುವಿನೊಂದಿಗೆ ತಾಯಿಯೂ ಅಸುನೀಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಕುಂಸಿಯ ಅಶ್ವಿನಿಗೆ ಭದ್ರಾವತಿ ಮೂಲದ ಬಸವರಾಜ್ ಎಂಬ ಯುವಕನೊಂದಿಗೆ ಪರಿಚಯವಾಗಿ ಇಬ್ಬರಲ್ಲೂ ಪ್ರೇಮಾಂಕುರವಾಗುತ್ತದೆ.ನಂತರ ಬಸವರಾಜ್ ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿದ್ದನು. ಮನೆಯಲ್ಲಿ ತಾನು ಗರ್ಭವತಿ ಎಂದು ಹೇಳಿಕೊಳ್ಳದ ಅಶ್ವಿನಿ ಹೊಟ್ಟೆ ಮುಂದೆ ಬಂದಿರುವುದು ಗ್ಯಾಸ್ಟ್ರಿಕ್ ನಿಂದ ಎಂದು ಸಾಗು ಹಾಕಿದ್ದಳು. ಏಳು…

Read Full News

ಕ್ಷುಲ್ಲಕ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ : ಕೊಲೆಯಲ್ಲಿ ಅಂತ್ಯ

ಶಿವಮೊಗ್ಗ: ಕ್ಷುಲ್ಲಕ ವಿಚಾರಕ್ಕೆ ತಂದೆಯೊಂದಿಗೆ ಜಗಳವಾಡಿದ ಮಗ, ಕೋಪದಲ್ಲಿ ಕೋಲಿನಿಂದ  ಹೊಡೆದು ತಂದೆಯನ್ನು ಕೊಲೆ ಮಾಡಿದ್ದಾನೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿದ್ದ ದಿನಸಿ ವಸ್ತುಗಳನ್ನು ಮಾರಾಟ ಮಾಡಿ,ಕುಡಿದು ಬರುತ್ತಿದ್ದ ತಂದೆಯನ್ನು ಮಗ ಪ್ರಶ್ನಿಸಿದಾಗ ತಂದೆ ಮತ್ತು ಮಗನ ಮಧ್ಯ ಗಲಾಟೆಯಾಗಿದೆ. ಕೋಪದಲ್ಲಿ ಕೋಲಿನಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತಲೆಗೆ ಗಂಭೀರ ಗಾಯವಾಗಿದ್ದ ಆರೋಪಿಯ ತಂದೆ ಮೃತಪಟ್ಟಿದ್ದಾರೆ. ಮಂಡೇನಕೊಪ್ಪದ ಕುಮಾರ ನಾಯ್ಕ (55) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ತನ್ನ ಮಗ ಮಧು ಜೊತೆ…

Read Full News

ರಿಪ್ಪನ್ ಪೇಟೆ : 54 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಕೊರೋನಾ ಲಸಿಕಾ ಶಿಬಿರ

ರಿಪ್ಪನ್ ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿ ರಿಪ್ಪನ್ ಪೇಟೆ ವತಿಯಿಂದ  54 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಕೊರೋನಾ ಲಸಿಕಾ ಶಿಬಿರವನ್ನು  ನಡೆಸಲಾಯಿತು. ಇಂದು ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಭಾಭವನದ ಆವರಣ ದಲ್ಲಿ 18 ವರ್ಷ ಮೇಲ್ಪಟ್ಟವರಿಗೆ 250 ಲಸಿಕೆ  ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಶ್ರೀ ಸುರೇಶ್, ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ದ ಆರೋಗ್ಯಾಧಿಕಾರಿ ಶ್ರೀ ಅನಿಲ್ ಕುಮಾರ್, ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ…

Read Full News

ಹೊಸ ಶಿಕ್ಷಣ ನೀತಿಯನ್ನು ಸಾರ್ವಜನಿಕ ಚರ್ಚೆಗೆ ತಂದು ಜಾರಿಗೊಳಿಸಲಿ : ಕಿಮ್ಮನೆ ರತ್ನಾಕರ್

ಶಿವಮೊಗ್ಗ : ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಹೊಸ ಶಿಕ್ಷಣ ನೀತಿಯನ್ನ ಸಾರ್ವಜನಿಕವಾಗಿ ಚರ್ಚಿಸಿ ನಂತರ ಜಾರಿಗೆ ತರಬೇಕೆಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ. ಅವರು ಇಂದು ಶಿವಮೊಗ್ಗದ ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ಶಿಕ್ಷಣ ನೀತಿಯನ್ನ ಸಾರ್ವಜನಿಕವಾಗಿ ಚರ್ಚೆಗೆ ಬಿಟ್ಟು ಜಾರಿಗೊಳಿಸಬೇಕು ಇಲ್ಲವಾದಲ್ಲಿ ಇದು ಪ್ರಜಾಪ್ರಭುತ್ವ ವಿರೋಧಿ ನೀತಿ ಆಗಲಿದೆ ಎಂದರು. ಒಂದು ವರ್ಷ ತಡವಾಗಿಯಾದರೂ ಜಾರಿಗೆ ತಂದರೂ ಪರವಾಗಿಲ್ಲ. ಆದರೆ ಶಿಕ್ಷಣ ನೀತಿಯನ್ನ ಸಾರ್ವಜನಿಕ ಚರ್ಚೆಗೆ ತಂದು ಜಾರಿಗೊಳಿಸಬೇಕೆಂದು…

Read Full News

ಯಶಸ್ವಿನಿ ಯೋಜನೆಯನ್ನು ಮುಂದುವರಿಸುವಂತೆ ಮುಖ್ಯಮಂತ್ರಿಗಳಿಗೆ ರೈತ ಸಂಘದಿಂದ ಮನವಿ:

ಶಿವಮೊಗ್ಗ: ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪರವರು ಇಂದು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯಿಯವರನ್ನು ‌ಭೇಟಿ ಮಾಡಿ ಗಾಂಧಿ ಕಥನ ಪುಸ್ತಕವನ್ನು ನೀಡಿ ಅಭಿನಂದಿಸಿದರು. ಈ ಸಂಧರ್ಭದಲ್ಲಿ ರೈತರ ಆಶಾಕಿರಣವಾದ ಯಶಸ್ವಿನಿ ಯೋಜನೆಯಿಂದ ಸಾಕಷ್ಟು ಬಡ ರೈತರಿಗೆ ಅನುಕೂಲವಾಗಿತ್ತು. ಆದ್ದರಿಂದ ಯಶಸ್ವಿನಿ ಯೋಜನೆಯನ್ನು ಮುಂದುವರಿಸವಂತೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಭದ್ರಾ ನದಿಯಿಂದ 12.5TMC ತುಂಗಾ ನದಿಯಿಂದ 17.4TMC ನೀರೆತ್ತಿ ಕೊಡಲು DPR ಆಗಿ ಕಾಮಗಾರಿ ಪ್ರಗತಿಯಲ್ಲಿದೆ, ಆದರೆ ಭದ್ರಾ ಅಣೆಕಟ್ಟು…

Read Full News

ತೀರ್ಥಹಳ್ಳಿ: ನವವಿವಾಹಿತೆಯನ್ನು ಬಲಿ ತೆಗೆದುಕೊಂಡ ನಾಯಿ ಚೈನ್…! ವಾಕಿಂಗ್ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವು

ತೀರ್ಥಹಳ್ಳಿ: ಸಾಕುನಾಯಿಯನ್ನು ಕರೆದುಕೊಂಡು ವಾಯುವಿಹಾರಕ್ಕೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ನವ ವಿವಾಹಿತೆಯೊಬ್ಬಳು ಕೆರೆಗೆ  ಬಿದ್ದು ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ತಾಲೂಕು ಕೈಮರದಲ್ಲಿ ನಡೆದಿದೆ. ನಿಶ್ಮಿತಾ(26) ಮೃತ ವಿವಾಹಿತೆ.ತೀರ್ಥಹಳ್ಳಿಯ ಕೈಮರದ ನಾಗಪ್ಪ ಗೌಡ ಅವರ ಪುತ್ರ ಮಂಜುನಾಥ್ ಅವರ ಪತ್ನಿ ನಿಶ್ಮಿತಾ ಮೂಲತಃ ಹೊಸನಗರ ತಾಲೂಕು ಹುಲಿಕಲ್ ಗ್ರಾಮದವರು. ಕಳೆದ 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಶನಿವಾರ ಬೆಳಿಗ್ಗೆ ಸಾಕುನಾಯಿಯನ್ನು ಕರೆದುಕೊಂಡು ವಾಯು ವಿಹಾರಕ್ಕೆ ಹೋಗಿದ್ದಾಳೆ. ಈ ವೇಳೆ ಕರೆದಂಡೆ ಮೇಲೆ ಹೋಗುವಾಗ ನಾಯಿ ಚೈನ್ ಎಳೆದು ಓಡಿದೆ….

Read Full News

ಶಿವಮೊಗ್ಗ: ಅಕ್ರಮ ಗಾಂಜಾ ಮಾರಾಟ ಜಾಲ ಪತ್ತೆ,ಮೂವರು ಆರೋಪಿಗಳು ವಶಕ್ಕೆ :

ಶಿವಮೊಗ್ಗ: ಕಾರಿನಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳಿಂದ ಭಾರಿ ಮೊತ್ತದ ಗಾಂಜಾ ವಶಕ್ಕೆ ಪಡೆಯಲಾಗಿದೆ.ಕಾರ್ಯಾಚರಣೆಯಲ್ಲಿ ಮೂವರು ಅರೆಸ್ಟ್ ಆಗಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಶಿವಮೊಗ್ಗದ ಕಲ್ಲೂರು ಗ್ರಾಮದ ಚಾನಲ್ ಬಳಿ ಈ ಘಟನೆ ಸಂಭವಿಸಿದೆ.  ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತುಂಗಾ ನಗರ ಪೊಲೀಸರು  ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ. ಕಲ್ಲೂರು ಗ್ರಾಮದ ಚಾನಲ್ ಬಳಿ ಗಾಂಜಾ ಮಾರಾಟಗಾರರು ಪ್ರತಿದಿನ ಬರುತ್ತಿದ್ದರು. ಕಾರಿನಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ…

Read Full News

ಶಿವಮೊಗ್ಗದಿಂದ ಐದು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ನಿರ್ಧರಿಸಲಾಗಿದೆ : ಬಿ ವೈ ರಾಘವೇಂದ್ರ

ಶಿವಮೊಗ್ಗ : ನಗರದ ವಿಮಾನ ನಿಲ್ದಾಣದಿಂದ ಐದು ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಸಲು ನಿರ್ಧರಿಸಲಾಗಿದೆ.  ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಅಂತಿಮ ಪ್ರಸ್ತಾವನೆ ಸಲ್ಲಿಸುವ ಕುರಿತು ಸಿದ್ಧತೆ ನಡೆಯುತ್ತಿದೆ. ಶಿವಮೊಗ್ಗದ ಸಾಗರ ರಸ್ತೆ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗದಿಂದ ಐದು ಮಾರ್ಗದಲ್ಲಿ ವಿಮಾನ ಹಾರಟಕ್ಕೆ ನಿರ್ಧರಿಸಲಾಗಿದೆ ಎಂದರು. ಶಿವಮೊಗ್ಗದಿಂದ ಬೆಂಗಳೂರು, ಚೆನ್ನೈ, ಮುಂಬೈ ಸೇರಿ ಐದು ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಧರಿಸಲಾಗಿದೆ….

Read Full News

ಕೋಣಂದೂರಿನ ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಗಣೇಶ್ ಮೂರ್ತಿ ನಿಧನ :

ಕೋಣಂದೂರು : ಇಲ್ಲಿನ ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಗಣೇಶ್ ಮೂರ್ತಿ ರವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಇಂದು ಕಾರ್ಯನಿಮಿತ್ತ ಕಾರ್ ನಲ್ಲಿ ಶಿವಮೊಗ್ಗಕ್ಕೆ ತೆರಳಿ ವಾಪಾಸ್ ಗರ್ತಿಕೆರೆಯ ನಿವಾಸಕ್ಕೆ ಹಿಂದಿರುಗುವಾಗ ಆಯನೂರ್ ಬಳಿ ಹಠಾತ್ ಎದೆ ನೋವು ಕಾಣಿಸಿಕೊಂಡಿದೆ.ತಕ್ಷಣ ಕಾರಿನ ಚಾಲಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಅಷ್ಟರಲ್ಲೆ ಅವರ ಪ್ರಾಣಪಕ್ಷಿ ಹಾರಿಹೋಗಿದೆ.ಮೃತದೇಹವನ್ನು ಆಂಬುಲೆನ್ಸ್ ಮೂಲಕ ಗರ್ತಿಕೆರೆಯ ಸ್ವ ಗೃಹಕ್ಕೆ ತರಲಾಗುತ್ತಿದೆ. ಕೋಣಂದೂರು ಶಿಕ್ಷಣ ಕ್ಷೇತ್ರಗಳಲ್ಲಿ ಕ್ರಾಂತಿ ಮೂಡಿಸಿದ್ದ ಗಣೇಶ್ ಮೂರ್ತಿಯವರ ಅಗಲಿಕೆ ಅವರ ಅಸಂಖ್ಯಾತ…

Read Full News

ಸಾಗರ : ನೂತನ ಸಚಿವರಾದ ಸಾಗರದ ಅಳಿಯಂದರಿಗೆ ತಾಲೂಕ್ ಬಿಜೆಪಿ ಯಿಂದ ಸನ್ಮಾನ

ಸಾಗರ : ನಗರದ ಗಾಂಧಿ ಮೈದಾನದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ವತಿಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದ ನೂತನ ಸಚಿವರು ಹಾಗೂ ಸಾಗರದ ಅಳಿಯಂದಿರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಸಕ ಹರತಾಳು ಹಾಲಪ್ಪ ನವರ ನೇತ್ರತ್ವದಲ್ಲಿ ನಡೆದ ಸಚಿವರಿಗೆ ಅಭಿನಂದನಾ ಕಾರ್ಯಕ್ರವು ಒಂದು ಭಾವಪೂರ್ಣ ಸಮಾರಂಭವಾಗಿತ್ತು. ಚೌತಿ ಹಬ್ಬಕ್ಕೆ ತವರಿಗೆ ಬಂದಿದ್ದ ಹೆಣ್ಣು ಮಕ್ಕಳು ಜತೆಗೆ ತಮ್ಮ ಪತಿಯಂದಿರನ್ನೂ ಕರೆದುಕೊಂಡು ಬಂದು ಉಡಿತುಂಬಿಸಿಕೊಂಡರು. ಊರಿನ ಅಳಿಯಂದಿರು ಸುಮ್ಮನೆ ಮಾವನ ಮನೆಗೆ ಬಂದು ಊರಿನ…

Read Full News

ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು ಜನ ಪ್ರತಿನಿಧಿಗಳಾದ ನಮ್ಮ ಕರ್ತವ್ಯ: ಬಿ ವೈ ರಾಘವೇಂದ್ರ

ಶಿವಮೊಗ್ಗ : ಜಿಲ್ಲೆಯ ವಿವಿಧ ಹಳೆಯ ಕೈಗಾರಿಕೆಗಳು ಕೆಲವು ಕಾರಣಕ್ಕೆ ಮುಚ್ಚುವ ಸ್ಥಿತಿ ಬಂದಿದೆ ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಜಿಲ್ಲೆಯಿಂದ ಕೈಗಾರಿಕಾ ಉದ್ಯಮಿಗಳ ಸಹಕಾರದಿಂದ ಉತ್ಪನ್ನಗಳು ತಲುಪುತ್ತಿದೆ, ಇಲ್ಲಿನ ಉದ್ಯಮಿಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು ಜನ ಪ್ರತಿನಿಧಿಗಳಾದ ನಮ್ಮ ಕರ್ತವ್ಯವಾಗಿದೆ ಆದ್ದರಿಂದ ನಮ್ಮ ಸೇವೆ ಮತ್ತು ಕೆಲಸಗಳು ಉತ್ತಮ ಗುಣಮಟ್ಟದಾಗಿರಲಿ ಎಂದು ಸಂಸದರಾದ ಬಿ.ವೈ ರಾಘವೇಂದ್ರ ಅವರು ತಿಳಿಸಿದರು. ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ…

Read Full News

ಹುಂಚಾ : ಕುಪ್ಪಟಹಳ್ಳಿ ಗ್ರಾಮದ ಸಮುದಾಯ ಭವನ ಉದ್ಘಾಟನೆ

ಹುಂಚಾ : ಇಲ್ಲಿನ ಸಮೀಪದ ಕುಪ್ಪಟಹಳ್ಳಿ ಗ್ರಾಮದ ಸಮುದಾಯ ಭವನವನ್ನು ಮಾಜಿ ತಾಪಂ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ಯವರು ಗ್ರಾಮಸ್ಥರ ಒತ್ತಾಯದ ಮೇರೆಗೆ ಉದ್ಘಾಟಿಸಿದರು. ಈ ಹಿಂದೆ ಗ್ರಾಮಸ್ಥರ ಮನವಿ ಮೇರೆಗೆ ಕುಪ್ಪಟಹಳ್ಳಿ ಗ್ರಾಮದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲು ಹಾಗೂ ಸಭೆ ನಡೆಸಲು ಅನುಕೂಲವಾಗುವಂತೆ ತಾಪಂ ಅಧ್ಯಕ್ಷರಾಗಿದ್ದ ವೀರೇಶ್ ಆಲವಳ್ಳಿ ರವರು ತಾಪಂ  ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದರು.ಆದರೆ ಕರೋನಾ ಕಾರಣದಿಂದ ಉದ್ಘಾಟನೆ ಮಾಡಲು ಆಗಿರಲಿಲ್ಲಾ ಗ್ರಾಮಸ್ಥರ ಒತ್ತಾಯದ ಮೇರೆಗೆ ಇಂದು ವೀರೇಶ್ ಆಲುವಳ್ಳಿ ರವರು ಸಮುದಾಯ…

Read Full News

ಆಗುಂಬೆ ಘಾಟಿ ತಿರುವಿನಲ್ಲಿ ಬೃಹತ್ ಗಾತ್ರದ ಮರ ಬಿದ್ದು ಪ್ರಯಾಣಿಕರಿಗೆ ತೊಂದರೆ !

ತೀರ್ಥಹಳ್ಳಿ ::  ತಾಲೂಕಿನ ಆಗುಂಬೆ ಘಾಟಿ ಕೆಳಭಾಗದಿಂದ  ಮೂರನೇ ತಿರುವಿನಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಬಿದ್ದು ಬೆಳಗ್ಗಿನಿಂದ ಸರಿ ಸುಮಾರು ಇನ್ನೂರಕ್ಕೂ ಹೆಚ್ಚು ವಾಹನಗಳು ಘಾಟಿಯಲ್ಲಿಯೇ ಜಾಮ್  ಆಗಿದ್ದು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಅರಣ್ಯ ಇಲಾಖೆ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದವರು ಈ ಬಗ್ಗೆ ಗಮನಹರಿಸಬೇಕು ಎಂಬುದಾಗಿ ವಾಹನ ಸವಾರರು ಮನವಿ ಮಾಡಿಕೊಂಡಿದ್ದು ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಈ ರೀತಿ ರಸ್ತೆ ಬದಿಯಲ್ಲಿರುವ ಬೀಳುವ  ಮರಗಳನ್ನು ಮುಂಜಾಗ್ರತಾ ಕ್ರಮವಾಗಿ ತೆರವುಗೊಳಿಸಿದರೆ ಸೂಕ್ತ…

Read Full News

ಮೀಸಲಾತಿ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಹುಟ್ಟು ಹಾಕುವ ಪ್ರಯತ್ನ ಸಹಿಸುವುದಿಲ್ಲ : ವೀರೇಶ್ ಆಲುವಳ್ಳಿ

ರಿಪ್ಪನ್‌ಪೇಟೆ: ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಪಂಚಮಸಾಲಿ ಲಿಂಗಾಯಿತ ಜಾತಿಗೆ 2(ಎ) ಮೀಸಲಾತಿ ನೀಡುವಂತೆ ಒತ್ತಾಯಿಸಿ ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ ಜಾಗೃತ ಸಭೆ ನಡೆಸಿ ತಾಲೂಕಿನ ವ್ಯಾಪ್ತಿಯ ವೀರಶೈವ ಸಮಾಜದಲ್ಲಿ ಒಡಕು ಹುಟ್ಟುಹಾಕುವ ಪ್ರಯತ್ನ ನಡೆಸುತ್ತಿದ್ದಾರೆಂದು ಹೊಸನಗರ ತಾಲ್ಲೂಕು ವೀರಶೈವ ಜಾಗೃತಿ ವೇದಿಕೆಯ ಮುಖಂಡ,ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಆರೋಪಿಸಿದ್ದಾರೆ.  ಪಟ್ಟಣದ ಗ್ರಾಪಂ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಮಾಜದ ಎಲ್ಲಾ ಬಾಂಧವರು ಹೊಂದಿಕೊಂಡು ಹೋಗಬೇಕಾಗಿದೆ.ವೀರಶೈವರು ಹಾಗೂ…

Read Full News

ಮಲೆನಾಡು ಭಾಗದ ನೆಟ್ ವರ್ಕ್ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ: ಶಾಸಕ ಹರತಾಳು ಹಾಲಪ್ಪ

ಸಾಗರ :: ಮಲೆನಾಡು ಭಾಗದಲ್ಲಿ ಉಂಟಾಗಿರುವ ನೆಟ್ ವರ್ಕ್ ಸಮಸ್ಯೆಯಿಂದ ಅನೇಕ ಜನರಿಗೆ ಆನ್ ಲೈನ್ ಮೂಲಕ ಮಾಡುವ ಕೆಲಸಗಳಿಗೆ ತೊಂದರೆ ಆಗುತ್ತಿದ್ದು ಮತ್ತು ರಾಜ್ಯದಲ್ಲಿ ತಹಸೀಲ್ದಾರ್ ಕನ್ವರ್ಟೆಡ್ ನಿವೇಶನಗಳ ಸಮಸ್ಯೆಗಳ ಕುರಿತು ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಇವರ ಗಮನಕ್ಕೆ ತಂದಿದ್ದು ಶೀಘ್ರದಲ್ಲೇ ಇದನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ ಇದರಿಂದ  ಅನೇಕ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಹರತಾಳು ಹಾಲಪ್ಪ  ತಿಳಿಸಿದರು ಅವರು ಇಂದು ಸಾಗರ ನಗರಸಭೆ ಹಮ್ಮಿಕೊಂಡಿದ್ದ 2021 ನೇ ಸಾಲಿನ 15ನೇಹಣಕಾಸು ಅನುದಾನದಲ್ಲಿ…

Read Full News

ರಿಪ್ಪನ್ ಪೇಟೆ :: ದೂನ ಗ್ರಾಮದ ನಾರಾಯಣರಾವ್ ಇನ್ನಿಲ್ಲ!

ರಿಪ್ಪನ್ ಪೇಟೆ: ಇಲ್ಲಿನ ಸಮೀಪದ ಅರಸಾಳು ಗ್ರಾಮ ಪಂಚಾಯಿತಿಯ ದೂನ ಗ್ರಾಮದ ಹಿರಿಯರಾದ ನಾರಾಯಣರಾವ್ (76) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತಿದ್ದ ಇವರು ಮಧ್ಯರಾತ್ರಿ ಸುಮಾರು 12.30 ಕ್ಕೆ  ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಮೂವರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದು, ಇವರ ಅಂತ್ಯಕ್ರಿಯೆ ಶುಕ್ರವಾರ ಸ್ವಗ್ರಾಮ ದೂನದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

Read Full News

ವಸತಿ ಗೃಹಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು 7.61ಕೋಟಿ ರೂ ಕ್ರಿಯಾ ಯೋಜನೆಗೆ ಅನುಮೋದನೆ : ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಗೋಪಿಶೆಟ್ಟಿಕೊಪ್ಪ ಮತ್ತು ಗೋವಿಂದಾಪುರದಲ್ಲಿ ನಿರ್ಮಿಸಲಾಗುತ್ತಿರುವ ಜಿ ಪ್ಲಸ್ 2 ವಸತಿಗೃಹಗಳಿಗೆ ಮೂಲಸೌಲಭ್ಯ ಕಲ್ಪಿಸಲು 7.61 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಶಿವಮೊಗ್ಗ ಮಹಾನಗರ ಪಾಲಿಕೆಯ ನಗರೋತ್ಥಾನ (ಹಂತ 3) ಅನುದಾನದಲ್ಲಿ 100ಕೋಟಿ ರೂ. ಮಂಜೂರಾಗಿದ್ದು, 92.39 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬಾಕಿ ಉಳಿದಿರುವ ಮೊತ್ತವನ್ನು ಮಾರ್ಗಸೂಚಿ ಪ್ರಕಾರ ವೆಚ್ಚ ಮಾಡಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ…

Read Full News

ಸೊರಬ: ತೀ ನಾ ಶ್ರೀನಿವಾಸ್ ಹೇಳಿಕೆಗೆ ಬಿಜೆಪಿ ಖಂಡನೆ

ಸೊರಬ: ಕಾಂಗ್ರೆಸ್ ಮುಖಂಡ ತೀನಾ ಶ್ರೀನಿವಾಸ್ ರವರು ನೀಡಿರುವ ಸೊರಬದಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ಹೇಳಿಕೆಯನ್ನು ಖಂಡಿಸಿ ಸೊರಬ ಬಿಜೆಪಿ ಮುಖಂಡರು ಇಂದು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.  ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಗರ್ ಹುಕುಂ ಸಮಿತಿಯ ಸದಸ್ಯರಾದ ದೇವೇಂದ್ರಪ್ಪ ಚನ್ನಾಪುರ ಅವರು ಸಾಗರದ ಕಾಂಗ್ರೆಸ್ ಮುಖಂಡರಾದ ತೀ ನಾ ಶ್ರೀನಿವಾಸ್ ರವರು ಸೊರಬ ತಾಲ್ಲೂಕಿನ ಬಗರ್ ಹುಕುಂ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಿ ಬಿಡುತ್ತೇನೆ ಎಂಬ ವಿಚಾರವಾಗಿ  ಸೊರಬ ತಾಲ್ಲೂಕಿನ ಎಣ್ಣೆಕೊಪ್ಪ ಗುಡ್ಡೇಕೊಪ್ಪ ಹಾಯಾ ಬೆಟ್ಟದಕೂರ್ಲಿ ಸಿದ್ದಿಹಳ್ಳಿ …

Read Full News

ಪ್ರಧಾನಿಗೆ ಪೋಸ್ಟ್ ಕಾರ್ಡ್ ನಲ್ಲಿ ಪತ್ರ ಬರೆದು ಯುವಕಾಂಗ್ರೆಸ್ ವತಿಯಿಂದ ಅಂಚೆಕಚೇರಿ ಎದುರು ಬೃಹತ್ ಪ್ರತಿಭಟನೆ:

ಶಿವಮೊಗ್ಗ: ಜಿಲ್ಲೆಯಲ್ಲಿ ಸಾವಿರಾರು ಜನರಿಗೆ ಅನ್ನಕ್ಕೆ ದಾರಿದೀಪವಾಗಿದ್ದ ವಿ.ಐ.ಎಸ್.ಎಲ್‌ ಹಾಗೂ ಎಂ.ಪಿ.ಎಂ ಕಾರ್ಖಾನೆಗಳನ್ನ ಸರ್ಕಾರಿ ಖಾಸಗಿಯವರಿಗೆ ನೀಡಲು ಮುಂದಾಗಿದೆ ಈಗಾಗಲೆ ಇದನ್ನ ನಂಬಿಕೊಂಡಿದ್ದ ಸಾವಿರಾರು ಬಡಕಾರ್ಮಿಕರ ಕುಟುಂಭ ಬೀದಿಗೆ ಬಿದ್ದಿದೆ. ಈ ಕಾರಣ ಇದನ್ನ ಸರ್ಕಾರ ಪುನಸ್ಚೇತನ ಗೊಳಿಸುವುದರ ಬದಲೂ ಖಾಸರಿಗಯವರಿಗೆ ನೀಡುವು ಹುನ್ನಾರ ನಡೆಸಿದೆ. ಈ ಕೆಲಸವನ್ನ ಕೂಡಲೇ ಕೈ ಬಿಡಬೇಕು ಹಾಗೂ ವಿ.ಐ.ಎಸ್.ಎಲ್‌ ಹಾಗೂ ಎಂ.ಪಿ.ಎಂ ಕಾರ್ಖಾನೆಯನ್ನ ಉಳಿಸಬೇಕಿದೆ ಎಂದು ಒತ್ತಾಯಿಸಿ ಇಂದು ಯುವ ಕಾಂಗ್ರೆಸ್‌ ಮುಖಂಡ ಗಣೇಶ್‌ ನೇತೃತ್ವದಲ್ಲಿ ಪತ್ರಚಳುವಳಿಯನ್ನ ನಡೆಸಲಾಯಿತ್ತು. ಇಂದು…

Read Full News

ಚಂದ್ರಗುತ್ತಿ: ಅಂಗನವಾಡಿ ಕೇಂದ್ರದಲ್ಲಿ ಮಾತೃ ವಂದನಾ ಮತ್ತು ಪೌಷ್ಟಿಕ ಆಹಾರ ಸಪ್ತಾಹ

ಚಂದ್ರಗುತ್ತಿ:  ಅಂಗನವಾಡಿ ಕೇಂದ್ರದಲ್ಲಿ ಮಾತೃ ವಂದನಾ ಮತ್ತು ಪೌಷ್ಟಿಕ ಆಹಾರ ಸಪ್ತಾಹವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ ಪಿ ರತ್ನಾಕರ್ ಉದ್ಘಾಟನೆ ಮಾಡಿದರು. ಪೌಷ್ಟಿಕ ಆಹಾರದ ಬಳಕೆ ಹಾಗೂ ಉಪಯೋಗದ ಬಗ್ಗೆ ಮಾತನಾಡಿದ ಚಂದ್ರಗುತ್ತಿ ಸರ್ಕಾರಿ ಆಸ್ಪತ್ರೆಯ ನರ್ಸ್  ಮಲ್ಲಮ್ಮ ನುಗ್ಗೆ ಸೊಪ್ಪು ಪೇರಳೆ ಹಣ್ಣು ಕರಿಬೇವಿನ ಸೊಪ್ಪು ಲಿಂಬೆ ಹಾಗೂ ಏಕದಳ ದಾನ್ಯ ದ್ವಿದಳ ದಾನ್ಯ ಹಾಗೂ ಅಯೋಡಿನ್ ಯುಕ್ತ ಉಪ್ಪನ್ನೇ ಬಳಸಿ ಎಂದು  ಇವುಗಳ ಮಹತ್ವ ತಿಳಿಸಿದರು ನಂತರ ಮಾತನಾಡಿದ ಶಿಶು ಅಭಿವೃದ್ಧಿ ಅಧಿಕಾರಿ…

Read Full News

ಗಣೇಶ ಚತುರ್ಥಿ ಆಚರಣೆ ಮಾರ್ಗಸೂಚಿಗೆ ಶಿವಮೊಗ್ಗದ ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ:

ಶಿವಮೊಗ್ಗ: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಆತಂಕ ಹಿನ್ನೆಲೆಯಲ್ಲಿ ಸರ್ಕಾರವು ಗಣಪತಿ ಹಬ್ಬ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ತಜ್ಞರ ಸಲಹೆ ಸೂಚನೆ ಮೇರೆಗೆ ಕೆಲ ನಿರ್ಬಂಧ ವಿಧಿಸಲಾಗಿದೆ. ಆದರೆ, ಶಿವಮೊಗ್ಗದಲ್ಲಿ ಸರ್ಕಾರದ ಮಾರ್ಗಸೂಚಿಗೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮನೆ, ದೇವಸ್ಥಾನ, ಸರ್ಕಾರಿ ಹಾಗೂ ಖಾಸಗಿ ಸಾರ್ವಜನಿಕ ಬಯಲು ಪ್ರದೇಶದಲ್ಲಿ ಗಣೇಶ ಪ್ರತಿಷ್ಠಾಪಿಸಿ, ಕನಿಷ್ಠ ಸಂಖ್ಯೆಯ ಜನರೊಂದಿಗೆ ಹಬ್ಬ ಅಚರಿಸಲು ಸರ್ಕಾರ ಸೂಚಿಸಿದೆ. ಇದರ ಜೊತೆಗೆ ನಗರ ಭಾಗದಲ್ಲಿ ವಾರ್ಡ್​ಗೆ ಒಂದು ಗಣೇಶನ ಪ್ರತಿಷ್ಠಾಪನೆಗೆ ಸರ್ಕಾರ…

Read Full News

ಸಾಕು ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ! ಶಿಕ್ಷಕಿಯಿಂದ ಬೆಳಕಿಗೆ ಬಂತು ಪ್ರಕರಣ

ತೀರ್ಥಹಳ್ಳಿ: ಸಾಕು ತಂದೆಯೇ ಅಪ್ರಾಪ್ತ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಘಟನೆ ತಾಲೂಕಿನ ಗಬಡಿ ಗ್ರಾಮದಲ್ಲಿ ನಡೆದಿದೆ. ಲೈಂಗಿಕ ದೌರ್ಜನ್ಯ ನಡೆಸಿದ ಸಾಕು ತಂದೆ ಮಂಜುನಾಥ್ (36) ಹಾಗು ಮಂಜುನಾಥನ ಸಂಬಂಧಿ ಎದುರುಮನೆ ಯುವಕ ರಾಮು(43) ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಯ ವಿವರ: ಮೊದಲ ಪತ್ನಿ ತೊರೆದಿದ್ದ ಮಂಜುನಾಥ್ ಕೂಲಿ ಕೆಲಸ ಮಾಡುತ್ತಿದ್ದು, ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾದ ವಿಧವೆಯನ್ನು ಮದುವೆಯಾಗಿದ್ದ.ಎರಡನೇ ಪತ್ನಿಗೆ ಹೆಣ್ಣು ಮಗುವಿತ್ತು. ಆ ಅಪ್ರಾಪ್ತ…

Read Full News

ಬೀದಿ ನಾಯಿಗಳ ಮಾರಣಹೋಮ:: 150ಕ್ಕೂ ಹೆಚ್ಚು ನಾಯಿಗಳ ಜೀವಂತ ಸಮಾಧಿ

ಶಿವಮೊಗ್ಗ: ಸುಮಾರು 150ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಜೀವಂತವಾಗಿ ಹೂತಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಗ್ರಾಮ ಪಂಚಾಯಿತಿಯ ಕಂಬದಾಳು-ಹೊಸೂರು ವ್ಯಾಪ್ತಿಯ ರಂಗನಾಥಪುರದಲ್ಲಿ ನಡೆದಿದೆ.  ತಮ್ಮಡಿಹಳ್ಳಿ ಎಂಪಿಎಂ‌ ಅರಣ್ಯದ ಎಸ್‌ಎಲ್ ನಂಬರ್ 863, 864, 865, 858ರ ಪ್ರದೇಶದಲ್ಲಿ ನಾಯಿಗಳು ಪತ್ತೆಯಾಗಿದ್ದು, ಐದು ದಿನಗಳ ಹಿಂದೆ ನಾಯಿಗಳನ್ನು ಹೂತಿಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಬೀದಿ ನಾಯಿಗಳನ್ನು ಹಿಡಿದು ಜೀವಂತವಾಗಿ ಹೂತಿಡುವ ವೇಳೆ ನಾಯಿಗಳ ಚೀರಾಟ ಕೇಳಿದೆ. ಈ ಸಂದರ್ಭದಲ್ಲಿ ಶಿವಮೊಗ್ಗ ಎನಿಮಲ್ ರೆಸ್ಕ್ಯೂ ಕ್ಲಬ್​ಗೆ ಗ್ರಾಮದ ಯುವಕರು…

Read Full News

ಬಿಜೆಪಿ ಕಾರ್ಯಕರ್ತರ ಪಕ್ಷ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ : ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ : ಬಿಜೆಪಿ ಪಕ್ಷ ಸದೃಢವಾಗಿದ್ದು ಅಭಿವೃದ್ದಿ ಕಾರ್ಯದಲ್ಲಿ ಈ ಹಿಂದಿನ ಸರ್ಕಾರಗಳು ಮಾಡಲಾಗದಷ್ಟು ಅಭಿವೃದ್ದಿಯನ್ನು ಕೇವಲ ಬಿಜೆಪಿ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಮಾಡಿದೆ. ಎಲ್ಲ ಸಮುದಾಯದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ಬಿಜೆಪಿಯ ಬೂತ್ ಮಟ್ಟದ ಅಧ್ಯಕ್ಷರ ನಾಮಫಲಕ ಅನಾವರಣದ ನಿಮಿತ್ತ ಇಂದು ರಿಪ್ಪನ್ ಪೇಟೆ ಹೋಬಳಿಯ ಬೂತ್ ನ ಅಧ್ಯಕ್ಷರುಗಳಿಗೆ ಅಭಿನಂದಿಸಿ ನಾಮಫಲಕ ಅನಾವರಣ ಮಾಡಿದ ಅವರು ಬಿಜೆಪಿಯು “ಕಾರ್ಯಕರ್ತರ ಪಕ್ಷ” ಎನ್ನುವುದು ನಮ್ಮೆಲ್ಲರಿಗೂ ಗೌರವದ…

Read Full News

ಭದ್ರಾವತಿ: ಕೆಎಸ್ಆರ್ ಟಿಸಿ ನೌಕರ ಆತ್ಮಹತ್ಯೆಗೆ ಶರಣು

ಭದ್ರಾವತಿ : ಕೆಎಸ್ಆರ್ ಟಿಸಿ ನೌಕರರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹೊಸ ಸಿದ್ದಾಪುರದಲ್ಲಿ ನಡೆದಿದೆ. ಕೆಎಸ್‌ಆರ್ ಟಿಸಿ ಚಾಲಕ ಗಂಗಾಧರ್ (46) ಎಂಬವರೇ ನೇಣಿಗೆ ಶರಣಾದ ವ್ಯಕ್ತಿ. ಹೊಸ ಸಿದ್ದಾಪುರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನೇಣಿಗೆ ಕೊರಳೊಡ್ಡುವ ಮುನ್ನ ಗಂಗಾಧರ್ ತಾನೇ ಹೂವಿನ ಹಾರ ಹಾಕಿಕೊಂಡಿದ್ದಾರೆ. ಹಾರದ ಜೊತೆಗೆ ಹೊಸ ಶರ್ಟ್ ಧರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.