Headlines

ಗೃಹಸಚಿವರ ಸ್ವ ಕ್ಷೇತ್ರದ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು !!!

ತೀರ್ಥಹಳ್ಳಿ : ಗೃಹಸಚಿವ ಆರಗ ಜ್ಞಾನೇಂದ್ರ ಅವರ ತವರೂರಾದ ತೀರ್ಥಹಳ್ಳಿಯ ಪಟ್ಟಣ ಪಂಚಾಯತಿ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ಇಂದು ನೆಡೆದಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಗಳು ಜಯಭೇರಿಯನ್ನು ಬಾರಿಸಿದ್ದಾರೆ. 
ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಶಬನಂ ಹಾಗೂ ಜಯಪ್ರಕಾಶ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು. 
ಬಿಜೆಪಿಯಿಂದ ಜ್ಯೋತಿ ಮೋಹನ್ ಹಾಗೂ ರವೀಶ್ ( ಬಾಬೀ )  ನಾಮಪತ್ರ ಸಲ್ಲಿಸಿದ್ದರು. 
ಆಪರೇಷನ್ ಕಮಲದ ಬಗ್ಗೆ ತೀರ್ಥಹಳ್ಳಿಯಲ್ಲಿ ಬಾರಿ ಚರ್ಚೆ ನೆಡೆದಿದ್ದರು ಇಂದು ಸಂದೇಶ್ ಜವಳಿ ಮಾತನಾಡಿ ನಾವು 
ಆಪರೇಷನ್  ಮಾಡುವುದಿಲ್ಲ.  ಕಾಂಗ್ರೆಸ್ ನವರು ರೆಸಾರ್ಟ್ ರಾಜಕೀಯ ಮಾಡುವುದರ ಮೂಲಕ ಕೀಳು ರಾಜಕೀಯ ಮಾಡಿದ್ದಾರೆ ನಾವು ಇಲ್ಲಿಯವರೆಗೆ 25:ವರ್ಷ ಆಡಳಿತ ನೆಡೆಸಿದ್ದೇವೆ ಈ ಬಾರಿ ಅವರಿಗೆ ಜನರೇ ಅವಕಾಶ ನೀಡಿದ್ದಾರೆ ಕಾದು ನೋಡೋಣ ಎಂದು ಹೇಳಿದರು. 
ಇನ್ನು ಮತ ಎಣಿಕೆಯಲ್ಲಿ 9 ಸ್ಥಾನ ಪಡೆದು  ಅಧ್ಯಕ್ಷರಾಗಿ ಶಬನಂ ಹಾಗೂ ಉಪಾಧ್ಯಕ್ಷರಾಗಿ ಜಯಪ್ರಕಾಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. 
ಈ ಸಂದರ್ಭದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್ ಎಂ ಮಂಜುನಾಥ ಗೌಡರು,  ಸುಂದರೇಶ್ ಹಾಗೂ ಕಾಂಗ್ರೆಸ್ ನ ಪಟ್ಟಣ ಪಂಚಾಯತಿ ಸದಸ್ಯರು ಇದ್ದರು.

Leave a Reply

Your email address will not be published. Required fields are marked *