Headlines

ತೀರ್ಥಹಳ್ಳಿ : ಪಟ್ಟಣ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಗೆ ನಾಳೆ ಮುಹೂರ್ತ :

ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಗೆ ನಾಳೆ ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್ ಪಕ್ಷ ಗಾದಿ ಹಿಡಿಯಲು ಬಹುತೇಕ ಸಜ್ಜಾಗಿದ್ದು ಮಹಿಳಾ ಅಭ್ಯರ್ಥಿಗಳು ಅಧ್ಯಕ್ಷರಾಗುತ್ತಾರೆ ಎಂದು ಹೇಳಲಾಗುತ್ತಿದೆ. 

ಬಿಜೆಪಿ ಪಕ್ಷ ಈ ಬಾರಿ ವಿರೋಧ ಪಕ್ಷದಲ್ಲಿ ಕೂರುವುದು ಖಚಿತವಾದಂತೆ ಕಾಣಿಸುತ್ತಿದೆ. ಕಾರಣ ಆರಗ ಜ್ಞಾನೇಂದ್ರ ಅವರು ನಾಳೆ ತೀರ್ಥಹಳ್ಳಿಯಲ್ಲಿ ಇರುವುದಿಲ್ಲ ಎಂದು ತಿಳಿಸಿದ್ದು ಅವರ ಮತ ಬೀಳುವುದು ಅನುಮಾನ ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರದಲ್ಲಿ ಕೂರುವುದು ಖಚಿತವಾಗಿದೆ. 

ನಾಳೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯ ಕೊನೆ ಕ್ಷಣದಲ್ಲಿ ತಲೆ ಕೆಳಗೆ ಆಗುವುದೋ ಎಂದು ತೀರ್ಥಹಳ್ಳಿಯಲ್ಲಿ ಕುತೂಹಲ ಮೂಡಿಸಿರುವುದಂತೂ ನಿಜ. 

Leave a Reply

Your email address will not be published. Required fields are marked *