Headlines

ಐದು ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ :ಇಬ್ಬರು ಆರೋಪಿಗಳ ಬಂಧನ

ಶಿರಸಿ : ಐದು ಕೋಟಿ ಮೌಲ್ಯದ ನಿರ್ಬಂಧಿತ ತಿಮಿಂಗಿಲದ ವಾಂತಿ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ ಘಟನೆ ಶಿರಸಿಯಲ್ಲಿ ನಡೆದಿದೆ.

ಡಿ.ವೈ.ಎಸ್.ಪಿ ರವಿ ಡಿ ನಾಯ್ಕ ರವರ ನೇತ್ರತ್ವದಲ್ಲಿ ಸಿಪಿಐ ರಾಮಚಂದ್ರ ನಾಯಕ್ ,ಪಿ.ಎಸ್.ಐ ಭೀಮಾಶಂಕರ್ ,ಪಿ.ಎಸ್.ಐ ಈರಯ್ಯ ನೇತ್ರತ್ವದಲ್ಲಿ ದಾಳಿ ನಡೆದಿದ್ದು ಐದು ಕೋಟಿ ಮೌಲ್ಯದ ಐದು ಕೆಜಿ ತಿಮಿಂಗಿಲದ ವಾಂತಿ (ಅಂಬೆ ಗ್ರೀಸ್) ಅನ್ನು ವಶಕ್ಕೆ ಪಡೆಯಲಾಗಿದೆ.

ಬೆಳಗಾವಿ ಮೂಲದ ಸಂತೋಷ್ ಕಾಮತ್ ,ಶಿರಸಿಯ ರಾಜೇಶ್ ಪೂಜಾರಿ ಬಂಧಿತ ಆರೋಪಿಗಳಾಗಿದ್ದು,ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

::::ತಿಮಿಂಗಿಲ ವಾಂತಿ ಏನಿದು ?:::::
ಸಮುದ್ರದಲ್ಲಿ ತಿಮಿಂಗಿಲವು ತಿಂದ ಆಹಾರವು ಜೀರ್ಣಿಸಿಕೊಳ್ಳಲಾಗದೇ ಮರಳಿ ಅವುಗಳನ್ನು ಹೊರಕಕ್ಕುತ್ತವೆ. ಈ ಹೊರಕಕ್ಕಿದ ಆಹಾರವು ದ್ರವರೂಪದಲ್ಲಿ ಗಟ್ಟಿಯಾಗಿರುತ್ತದೆ. ಇದಕ್ಕೆ ಅಂಬರ್ ಗ್ರೀಸ್ ಎಂದು ವೈಜ್ಞಾನಿಕವಾಗಿ ಕರೆಯಲಾಗುತ್ತದೆ.
ಈ ದ್ರವರೂಪದ ಗಟ್ಟಿಯಾದ ವಸ್ತುವು ಮೊದಲು ಸಮುದ್ರದಾಳದಲ್ಲಿ ಇದ್ದು ನಂತರ ಕೆಲವು ರಾಸಾಯನಿಕ ಕ್ರಿಯೆಯ ಮೂಲಕ ಸಮುದ್ರದಲ್ಲಿ ತೇಲುತ್ತವೆ.

ಹೀಗೆ ತೇಲಿದ ತಿಮಿಂಗಿಲದ ವಾಂತಿಯು ಅತೀ ಅಮುಲ್ಯವಾಗಿದ್ದು ಕೆಟ್ಟ ವಾಸನೆ ಇದ್ದರೂ ಸಹ ಇದು ಕೋಟಿಗಟ್ಟಲೇ ಬೆಲೆಬಾಳುತ್ತದೆ.
ಅರಣ್ಯ ಕಾಯ್ದೆಯಡಿ ಈ ತಿಮಿಂಗಿಲದ ವಾಂತಿ ಯನ್ನು ಮಾರಾಟಮಾಡುವುದು ಭಾರತದಲ್ಲಿ ಸಂಪೂರ್ಣ ನಿರ್ಬಂಧಿಸಲಾಗಿದೆ.

:::ತಿಮಿಂಗಿಲ ವಾಂತಿಗೆ ಕೋಟಿ ಕೋಟಿ:::

ಈ ತಿಮಿಂಗಿಲದ ವಾಂತಿ ಅಪರೂಪದ್ದಾಗಿದೆ. ಇವುಗಳನ್ನು ಹೊರದೇಶಗಳಲ್ಲಿ ಸುಗಂದ ದ್ರವ್ಯ ತಯಾರಿಸಲು ಬಳಸಲಾಗುತ್ತದೆ. ಇದರಿಂದ ತಯಾರಾದ ಸುಗಂಧ ದ್ರವ್ಯಕ್ಕೆ ಗಲ್ಛ್ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಸಹ ಇದೆ.

ಹಲವು ದೇಶದಲ್ಲಿ ತಿಮಿಂಗಿಲದ ವಾಂತಿ ಮಾರಾಟಕ್ಕೆ ಅವಕಾಶಗಳಿವೆ. ಅತೀ ವಿರಳವಾಗಿ ಸಿಗುವುದರಿಂದ ಇವುಗಳಿಗೆ ಬೇಡಿಕೆ ಇದ್ದು ಭಾರತದಲ್ಲಿ ನಿರ್ಬಂಧ ಇರುವುದರಿಂದ ಮುಂಬೈ ಮೂಲಕ ಇತರೆ ದೇಶಗಳಿಗೆ ಇವುಗಳನ್ನು ಕಳ್ಳಹಾದಿಯಲ್ಲಿ ಸಾಗಿಸಿ ಹಣ ಸಂಪಾದಿಸುತ್ತಾರೆ.

ಜಿಲ್ಲೆಯಲ್ಲಿ ಈ ಹಿಂದೆ ಮುರುಡೇಶ್ವರದಲ್ಲಿ ಒಂದು ಕೆ.ಜಿಗೂ ಹೆಚ್ಚು ಮೌಲ್ಯದ ಅಂಬರ್ ಗ್ರೀಸ್ ಇತ್ತೀಚೆಗೆ ದೊರಕಿತ್ತು. ಇದನ್ನು ಅರಣ್ಯ ಇಲಾಖೆಗೆ ನೀಡಲಾಗಿತ್ತು.ಆದರೇ ಇದೀಗ ಐದು ಕೆಜಿ ಯಷ್ಟು ತೂಕದ ತಿಮಿಂಗಿಲದ ವಾಂತಿ ದೊರೆತಿದ್ದು ಇದೇ ಮೊದಲ ಘಟನೆಯಾಗಿದೆ.

Leave a Reply

Your email address will not be published. Required fields are marked *