ಟೋಲ್‌ಗೇಟ್ ವಿವಾದ : ಅ.9 ಕ್ಕೆ ಶಿಕಾರಿಪುರ ಬಂದ್ ಗೆ ಕರೆ
ಟೋಲ್‌ಗೇಟ್ ವಿವಾದ : ಅ.9 ರಂದು ರಂದು ಶಿಕಾರಿಪುರ ಬಂದ್ ಗೆ ಕರೆ ಶಿಕಾರಿಪುರ, ಸೆಪ್ಟೆಂಬರ್ ೨೮ : ಕುಟ್ರಳ್ಳಿ ಟೋಲ್‌ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಅಕ್ಟೋಬರ್ ೯ರಂದು ಶಿಕಾರಿಪುರ ಪಟ್ಟಣ ಬಂದ್ ನಡೆಸಲು ಟೋಲ್‌ಗೇಟ್ ಹೋರಾಟ ಸಮಿತಿ ಕರೆ ನೀಡಿದೆ ಎಂದು ಸಮಿತಿ ಮುಖಂಡ, ನ್ಯಾಯವಾದಿ ಶಿವರಾಜ್ ತಿಳಿಸಿದ್ದಾರೆ. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಂದು ವರ್ಷದಿಂದ ಟೋಲ್‌ಗೇಟ್ ತೆರವಿಗೆ ಹೋರಾಟ ನಡೆಸುತ್ತಿದ್ದೇವೆ. ಸಚಿವರು, ಸಂಸದರು, ಶಾಸಕರು ಎಲ್ಲರೂ ಬೆಂಬಲ ವ್ಯಕ್ತಪಡಿಸಿದರೂ, ಕಾಣದ ಶಕ್ತಿಯ ಕಾರಣದಿಂದ…