Headlines

ಹೊಟೇಲ್ ಗೆ ರಿವ್ಯೂ ಟಾಸ್ಕ್ ನೆಪ –  ವ್ಯಕ್ತಿ 11.35 ಲಕ್ಷ ವಂಚನೆ , ಪ್ರಕರಣ ದಾಖಲು

ಹೊಟೇಲ್ ಗೆ ರಿವ್ಯೂ ಟಾಸ್ಕ್ ನೆಪ –  ವ್ಯಕ್ತಿ 11.35 ಲಕ್ಷ ವಂಚನೆ , ಪ್ರಕರಣ ದಾಖಲು

ಶಿವಮೊಗ್ಗ : ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೊಸ ಹೊಸ ತಂತ್ರಗಳನ್ನು ಬಳಸಿ ವಂಚಕರು ಜನರನ್ನು ಬಲೆಗೆ ಬೀಳಿಸುತ್ತಿದ್ದಾರೆ. ಶಿವಮೊಗ್ಗದ ಒಬ್ಬ ವ್ಯಕ್ತಿ ಬರೋಬ್ಬರಿ ₹11,35,900 ಹಣವನ್ನು ಸೈಬರ್ ಕಳ್ಳರಿಗೆ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ದೂರುದಾರರ ವಾಟ್ಸಾಪ್‌ಗೆ ಪರಿಚಿತ ಮೊಬೈಲ್ ಸಂಖ್ಯೆಯಿಂದ ಒಂದು ಲಿಂಕ್ ಕಳುಹಿಸಲಾಗಿತ್ತು. ಆ ಲಿಂಕ್‌ನ್ನು ಕ್ಲಿಕ್ ಮಾಡಿದ ಬಳಿಕ ಅವರು ಟೆಲಿಗ್ರಾಂ ಗುಂಪಿಗೆ ಸೇರಿದರು. ನಂತರ ವಂಚಕರು ಆನ್‌ಲೈನ್‌ನಲ್ಲಿ ಹೋಟೆಲ್‌ಗಳ ವಿಮರ್ಶೆ ನೀಡುವ ಟಾಸ್ಕ್‌ಗಳನ್ನು ಕಳುಹಿಸಿ, ಹೆಚ್ಚಿನ ಲಾಭಾಂಶ ನೀಡುವುದಾಗಿ ಭರವಸೆ ನೀಡಿದರು.

ಹಂತ ಹಂತವಾಗಿ ಐಎಂಪಿಎಸ್, ಆರ್‌ಟಿಜಿಎಸ್ ಮತ್ತು ಯುಪಿಐ ಮೂಲಕ ಹಣವನ್ನು ವರ್ಗಾಯಿಸಲು ಪ್ರೇರೇಪಿಸಿದ ವಂಚಕರು, ನಂತರ “ಲಾರ್ಜರ್ ಅಮೌಂಟ್ ವಿಥ್ಡ್ರಾ ಮಾಡಲು ಇನ್ನೂ ₹6,00,000 ಸೇರಿಸಬೇಕು” ಎಂದು ಒತ್ತಾಯಿಸಿದರು. ಈ ನಂಬಿಕೆಗೆ ಬಲಿಯಾದ ದೂರುದಾರರಿಂದ ಒಟ್ಟು ₹11,35,900 ವಂಚಿಸಲಾಗಿದೆ.

ಲಾಭಾಂಶ ನೀಡದೆ ಹಣ ಕಸಿದುಕೊಂಡ ವಂಚಕರ ವಿರುದ್ಧ ದೂರು ದಾಖಲಿಸಿರುವ ಈ ಪ್ರಕರಣವನ್ನು ಶಿವಮೊಗ್ಗ ಸೈಬರ್ ಸಿಇಎನ್ ಸೈಬರ್ ಕ್ರೈಂ ಠಾಣೆ ತನಿಖೆಗೆ ತೆಗೆದುಕೊಂಡಿದೆ.