w
Headlines

Ripponpete | ಶಿಕ್ಷಕರುಗಳನ್ನು ಸಮಾಜ ಗೌರವಿಸುತ್ತದೆ: ಎಸ್ ಎಲ್ ಭೋಜೇಗೌಡ

ಹೊಸನಗರ ತಾಲೂಕು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಕಾರ್ಯಗಾರ ಶಿಕ್ಷಕರುಗಳನ್ನು ಸಮಾಜ ಗೌರವಿಸುತ್ತದೆ: ಎಸ್ ಎಲ್ ಭೋಜೇಗೌಡ ರಿಪ್ಪನ್ ಪೇಟೆ : ಸಮಾಜದ ಸೇವೆಯಲ್ಲಿ ಅತ್ಯುನ್ನುತವಾದ ಸೇವೆಯನ್ನು ನೀಡುತ್ತಿರುವವರು ಶಿಕ್ಷಕರುಗಳು. ಶಿಕ್ಷಕರುಗಳನ್ನು ಸಮಾಜ ಗೌರವಿಸುತ್ತದೆ ಎಂದು  ನೈರುತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್ ಎಲ್. ಭೋಜೇಗೌಡ  ಹೇಳಿದರು. ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹೊಸನಗರ ತಾಲೂಕು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರುಗಳು ಸಮಾಜದ ಮುಖ್ಯ…

Read Full News

ಬಗರ್ ಹುಕುಂ ಜಮೀನಿನ ಅರ್ಧ ಎಕರೆಯಲ್ಲಿ ಕಾಡನ್ನು ಬೆಳೆಸುವ ನಿಯಮ ಜಾರಿಯಾಗಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ | GKB

ಬಗರ್ ಹುಕುಂ ಜಮೀನಿನ ಅರ್ಧ ಎಕರೆಯಲ್ಲಿ ಕಾಡನ್ನು ಬೆಳೆಸುವ ನಿಯಮ ಜಾರಿಯಾಗಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ | GKB ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವಂತ ರೈತರಿಗೆ ಸರ್ಕಾರದಿಂದ ಸಾಗುವಳಿ ಪತ್ರವನ್ನು ನೀಡೋ ಕೆಲಸ ಮಾಡುತ್ತಿದೆ. ಇದರ ಜೊತೆ ಜೊತೆಗೆ ಇದೇ ಭೂಮಿಯ ಅರ್ಧ ಎಕರೆಯಲ್ಲಿ ಕಾಡು ಬೆಳೆಸೋದಕ್ಕೆ ಮೀಸಲಿಡುವಂತ ನಿಯಮವನ್ನು ಜಾರಿಗೊಳಿಸಬೇಕು ಅಂತ ಶಾಸಕ ಬೇಳೂರು ಗೋಪಾಲಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಾಳೆಹಳ್ಳಿಯಲ್ಲಿ ಸಾಗರ ಅರಣ್ಯಾಧಿಕಾರಿಗಳ ಸಹಕಾರದಿಂದ ವನ ಮಹೋತ್ಸವದಲ್ಲಿ ಗಿಡ…

Read Full News

ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಎಂ ಎಂ ಪರಮೇಶ್ ಅವಿರೋಧವಾಗಿ ಆಯ್ಕೆ | DCC

ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಎಂ ಎಂ ಪರಮೇಶ್ ಅವಿರೋಧವಾಗಿ ಆಯ್ಕೆ | DCC ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ರಿಪ್ಪನ್‌ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ ಎಂ ಪರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ನಿನ್ನೆ ಒಟ್ಟು 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು 13 ಕ್ಷೇತ್ರದಿಂದ 35 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಇಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ನಾಡಿದ್ದು ಜೂ.22 ರಂದು ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕವಾಗಿದೆ.  ಹೊಸನಗರ ಕ್ಷೇತ್ರದಿಂದ…

Read Full News

ನವಜಾತ ಶಿಶುವನ್ನು ತೋಟದಲ್ಲಿ ಎಸೆದುಹೋದ ಪಾಪಿ ತಾಯಿ..!! | crime news

ನವಜಾತ ಶಿಶುವನ್ನು ತೋಟದಲ್ಲಿ ಎಸೆದುಹೋದ ಪಾಪಿ ತಾಯಿ..!! | crime news ರಾಜ್ಯದ ಹಲವೆಡೆ ಭ್ರೂಣ ಹತ್ಯೆ ಪ್ರಕರಣಗಳು ಸದ್ದು ಮಾಡುತ್ತಿರುವ ಬೆನ್ನಲ್ಲೇ ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಮುಖ್ಯ ರಸ್ತೆಯ ತೋಟದಲ್ಲಿ ಗುರುವಾರ ಬೆಳಗ್ಗೆ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿದೆ. ಆಗಷ್ಟೇ ಜನಿಸಿದ ಶಿಶುವನ್ನು ತಾಯಿ ಅಲ್ಲೇ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಶಿಶುವನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಹೊಳಲೂರಿನಿಂದ…

Read Full News

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ 23 ವರ್ಷದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ 23 ವರ್ಷದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ  ಶಿವಮೊಗ್ಗ : 15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಶಿಕಾರಿಪುರ ತಾಲ್ಲೂಕಿನ ನಿವಾಸಿ 23 ವರ್ಷದ ಯುವಕನಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ 20 ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ ₹50 ಸಾವಿರದ ದಂಡ ವಿಧಿಸಿದೆ. 2023ರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿತ್ತು. ಈ ಬಗ್ಗೆ ನೊಂದ ಬಾಲಕಿ ಶಿರಾಳಕೊಪ್ಪ ಪೊಲೀಸ್…

Read Full News

ಜವಾಬ್ದಾರಿಯಿಂದ ಕೆಲಸ ಮಾಡಿ ಇಲ್ಲದಿದ್ದರೇ ಜಾಗ ಖಾಲಿ‌ ಮಾಡಿ – ಅಧಿಕಾರಿಗಳ ವಿರುದ್ದ ಶಾಸಕ ಬೇಳೂರು ಗರಂ..!! | GKB

ಜವಾಬ್ದಾರಿಯಿಂದ ಕೆಲಸ ಮಾಡಿ ಇಲ್ಲದಿದ್ದರೇ ಜಾಗ ಖಾಲಿ‌ ಮಾಡಿ – ಅಧಿಕಾರಿಗಳ ವಿರುದ್ದ ಶಾಸಕ ಬೇಳೂರು ಗರಂ..!! | GKB ಹೊಸನಗರ : ಹೇಳಿದ ಕೆಲಸ ಮಾಡಿ ಇಲ್ಲ, ಜಾಗ ಖಾಲಿ ಮಾಡಿ. ಮಳೆಗಾಲದಲ್ಲಿ ಇಲ್ಲಿ ಸಾಲು ಸಾಲು ವಿಕೋಪಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲೂ ಸರಿಯಾಗಿ ಕೆಲಸ ಮಾಡದಿದ್ದರೆ ಹೇಗೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದರು. ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು….

Read Full News

Hosanagara | ನಿರ್ಮಾಣ ಹಂತದ ಕಳೂರು ಸೊಸೈಟಿ ಸೆಂಟ್ರಿಂಗ್ ಕುಸಿತ – ತಪ್ಪಿದ ಭಾರಿ ಅನಾಹುತ

Hosanagara | ನಿರ್ಮಾಣ ಹಂತದ ಕಳೂರು ಸೊಸೈಟಿ ಸೆಂಟ್ರಿಂಗ್ ಕುಸಿತ – ತಪ್ಪಿದ ಭಾರಿ ಅನಾಹುತ ಹೊಸನಗರ : ಇಲ್ಲಿನ ಖಾಸಗಿ ಬಸ್ ನಿಲ್ದಾಣ ಸಮೀಪ ನಿರ್ಮಾಣವಾಗುತ್ತಿರುವ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಶೀಟ್ ಸೆಂಟ್ರಿಂಗ್ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದು, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ತೀವ್ರವಾಗಿ ಗಾಯಗೊಂಡು ಪ್ರಾಣಾಪಯದಿಂದ ಪಾರಾಗಿರುವ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿಗಳು ಹಾಗೂ ಆರಕ್ಷಕರು ಧಾವಿಸಿದ್ದಾರೆ,  ಈ ಅವಘಡದಲ್ಲಿ…

Read Full News

ನಿವೃತ್ತ ಯೋಧನ ಮೇಲೆ ದೌರ್ಜನ್ಯ ಆರೋಪ: ಗ್ರಾಪಂ ಉಪಾಧ್ಯಕ್ಷನ ವಿರುದ್ಧ ಬಿಜೆಪಿ ಜೆಡಿಎಸ್ ಪ್ರತಿಭಟನೆ | Protest

ನಿವೃತ್ತ ಯೋಧನ ಮೇಲೆ ದೌರ್ಜನ್ಯ ಆರೋಪ: ಗ್ರಾಪಂ ಉಪಾಧ್ಯಕ್ಷನ ವಿರುದ್ಧ ಬಿಜೆಪಿ ಜೆಡಿಎಸ್ ಪ್ರತಿಭಟನೆ ಹೊಸನಗರ: ನಿವೃತ್ತ ಯೋಧ ಕೆ‌.ಕೆ.ರಾಮಣ್ಣ ಮೇಲೆ ದೌರ್ಜನ್ಯ ಮತ್ತು ಅನಾಗರಿಕ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂ ಉಪಾಧ್ಯಕ್ಷ ರಮೇಶ ಹಲಸಿನಹಳ್ಳಿ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಅನಿರ್ಧಿಷ್ಠಾವಧಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದೆ. ತಾಲೂಕಿನ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಮಂಗಳವಾರ ಧರಣಿ ನಡೆಸಿದ ಪ್ರತಿಭಟನಾಕಾರರು ಉಪಾಧ್ಯಕ್ಷ ರಮೇಶ ಹಲಸಿನಹಳ್ಳಿ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಯಿತು. ನಿವೃತ್ತ ಯೋಧ ಕೆ.ಕೆ.ರಾಮಣ್ಣರಿಗೆ ಅನಗತ್ಯ…

Read Full News

ಜಾತಿ ಪ್ರಮಾಣ ಪತ್ರ ನೀಡಲು ವಿಳಂಬ – ತಹಶೀಲ್ದಾರ್ ಕಛೇರಿ ಮುಂದೆಯೇ ಧರಣಿ ಕುಳಿತ ಶಾಸಕ ಆರಗ ಜ್ಞಾನೇಂದ್ರ | Thirthahalli

ಜಾತಿ ಪ್ರಮಾಣ ಪತ್ರ ನೀಡಲು ವಿಳಂಬ – ತಹಶೀಲ್ದಾರ್ ಕಛೇರಿ ಮುಂದೆಯೇ ಧರಣಿ ಕುಳಿತ ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿ : ಕಳೆದ ಆರು ತಿಂಗಳಿಂದ ಸರಿಯಾಗಿ ಜಾತಿ ಪ್ರಮಾಣ ಪತ್ರವನ್ನು ಕೊಡದೇ ಅಲೆದಾಡಿಸುತ್ತಿದ್ದ ಅಧಿಕಾರಿಗಳಿಗಾಗಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅರಗ ಜ್ಞಾನೇಂದ್ರ ತೀರ್ಥಹಳ್ಳಿ ತಹಶೀಲ್ದಾರ್ ಕಚೇರಿ ಬಾಗಿಲಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯ ಸಾರ್ವಜನಿಕರು ಜಾತಿ ಪ್ರಮಾಣ…

Read Full News

Sagara | ಮನೆ ಮುಂದೆ ಕಸ ಗುಡಿಸುತಿದ್ದ ಮಹಿಳೆಯ ಕೊರಳಿಗೆ ಕೈ ಹಾಕಿ ಲಕ್ಷಾಂತರ ರೂ ಸರ ಎಗರಿಸಿ ಪರಾರಿಯಾದ ಕಳ್ಳ

Sagara | ಮನೆ ಮುಂದೆ ಕಸ ಗುಡಿಸುತಿದ್ದ ಮಹಿಳೆಯ ಕೊರಳಿಗೆ ಕೈ ಹಾಕಿ ಲಕ್ಷಾಂತರ ರೂ ಸರ ಎಗರಿಸಿ ಪರಾರಿಯಾದ ಕಳ್ಳ  ಸಾಗರ : ಮನೆ ಮುಂದೆ ಕಸ ಗುಡಿಸುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದು ಮಹಿಳೆಯರೋರ್ವರ ಬಂಗಾರದ ತಾಳಿ ಸರವನ್ನು ಕಿತ್ತು ಪರಾರಿಯಾದ ಘಟನೆ ಗುರುವಾರ ನಗರ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಅಗ್ರಹಾರ ಮೊದಲನೇ ತಿರುವಿನಲ್ಲಿರುವ ಗಣೇಶ ವೈದ್ಯರವರ ಹೆಂಡತಿ ಲೀಲಾ ರವರು ಬೆಳಿಗ್ಗೆ ಮನೆ ಮುಂದೆ ಕಸ ಗುಡಿಸುವಾಗ ಹಿಂಬದಿಯಿಂದ ಬಂದ ಆಗಂತುಕ ಈ ಕೃತ್ಯ…

Read Full News

ತೆಪ್ಪ ಮುಳುಗಿ ನೀರುಪಾಲಾಗಿದ್ದ ಮೂವರು ಯುವಕರ ಮೃತದೇಹ ಪತ್ತೆ | Crime News

ತೆಪ್ಪ ಮುಳುಗಿ ನೀರುಪಾಲಾಗಿದ್ದ ಮೂವರು ಯುವಕರ ಮೃತದೇಹ ಪತ್ತೆ  ಎನ್.ಆರ್.ಪುರ ತಾಲೂಕಿನ ಬೈರಾಪುರದ ಭದ್ರಾ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ನೀರುಪಾಲಾಗಿದ್ದ ಶಿವಮೊಗ್ಗ ಮೂಲದ ಮೂವರ ಮೃತದೇಹ ಗುರುವಾರ ಪತ್ತೆಯಾಗಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ವಿದ್ಯಾನಗರ ನಿವಾಸಿಗಳಾದ ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ಎಂದು ಗುರುತಿಸಲಾಗಿದೆ. ಬುಧವಾರ ಶಿವಮೊಗ್ಗದ ವಿದ್ಯಾನಗರದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು ಜಿಲ್ಲೆಯ ಬೈರಾಪುರದಲ್ಲಿರುವ ಭದ್ರಾ ಹಿನ್ನೀರಿನ ಬಳಿ ಬಂದಿದ್ದಾರೆ, ಈ ವೇಳೆ ನಾಲ್ವರಲ್ಲಿ ಮೂವರು ತೆಪ್ಪದಲ್ಲಿ ತೆರಳಿದ್ದಾರೆ ಓರ್ವ ಮಾತ್ರ ದಡದಲ್ಲಿ ನಿಂತಿದ್ದ ಎನ್ನಲಾಗಿದೆ…

Read Full News

ಫೇಸ್ಬುಕ್ ನಲ್ಲಿ ಪ್ರಾರಂಭವಾದ ಲವ್ ಸ್ಟೋರಿ ಕೊಲೆಯಲ್ಲಿ ಅಂತ್ಯ – ಆನ್ ಲೈನ್ ಪ್ರೇಮಿಗಳು ನೋಡಲೇಬೇಕಾದ ಸ್ಟೋರಿ

ಫೇಸ್ಬುಕ್ ನಲ್ಲಿ ಪ್ರಾರಂಭವಾದ ಲವ್ ಸ್ಟೋರಿ ಕೊಲೆಯಲ್ಲಿ ಅಂತ್ಯ – ಆನ್ ಲೈನ್ ಪ್ರೇಮಿಗಳು ನೋಡಲೇಬೇಕಾದ ಸ್ಟೋರಿ ಫೇಸ್ ಬುಕ್ ನಲ್ಲಿ ಆರಂಭವಾದ ಮಹಿಳೆ ಹಾಗೂ ಯುವಕನ ನಡುವಿನ ಲವ್ ಸ್ಟೋರಿ ಕೃಷ್ಣಾನದಿ ದಡದಲ್ಲಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ಮೂಲದ ಮಮತಾ (48) ಕೊಲೆಯಾದ ಮಹಿಳೆ. ರೇವಣಸಿದ್ದಯ್ಯ (26) ಮಹಿಳೆಯನ್ನು ಕೊಂದ ಯುವಕ. ಪತಿಯನ್ನು ಕಳೆದುಕೊಂಡಿದ್ದ ಮಹಿಳೆ ಮಮತಾಳಿಗೆ ಫೇಸ್ ಬುಕ್ ನಲ್ಲಿ ವಿಜಯಪುರ ಮೂಲದ ಯುವಕ ರೇವಣಸಿದ್ದಯ್ಯನ ಪರಿಚಯವಾಗಿದೆ.ಪರಿಚಯ, ಸ್ನೇಹವಾಗಿ ಪ್ರೀತಿಗೆ ತಿರುಗಿದೆ….

Read Full News

ಭದ್ರಾ ಹಿನ್ನೀರಿನಲ್ಲಿ ಮೂವರು ಯುವಕರು ನೀರುಪಾಲು | Youth drowned in water

ಭದ್ರಾ ಹಿನ್ನೀರಿನಲ್ಲಿ ಮೂವರು ಯುವಕರು ನೀರುಪಾಲು | Youth drowned in water ಭದ್ರಾ ಹಿನ್ನೀರಿನಲ್ಲಿ ಮುಳುಗಿ ಮೂವರು ನೀರು ಪಾಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ(N.R Pura) ತಾಲೂಕಿನ ಬೈರಾಪುರ ಗ್ರಾಮದ ಬಳಿ ನಡೆದಿದೆ.  ತೆಪ್ಪದಲ್ಲಿ ಮೂವರು ಯುವಕರು ಭದ್ರಾ ಹಿನ್ನೀರಿನಲ್ಲಿ ತೆರಳಿದ್ದರು. ಈ ವೇಳೆ ದುರ್ಘಟನೆ ನಡೆದಿದ್ದು, ನಾಪತ್ತೆಯಾದವರು ಶಿವಮೊಗ್ಗ ಮೂಲದ ಅಫ್ದಾಖಾನ್, ಆದೀಲ್ ಹಾಗೂ ಸಾಜೀದ್ ಎಂದು ತಿಳಿದುಬಂದಿದೆ.  ಇದೀಗ ಎನ್.ಆರ್ ಪುರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ…

Read Full News

ಶಿವಮೊಗ್ಗ DCC ಬ್ಯಾಂಕ್ ನಿರ್ದೇಶಕರ ಚುನಾವಣೆ – ಶಾಸಕ ಬೇಳೂರು ಗೋಪಾಲಕೃಷ್ಣ ನಾಮಪತ್ರ ಸಲ್ಲಿಕೆ

ಶಿವಮೊಗ್ಗ DCC ಬ್ಯಾಂಕ್ ನಿರ್ದೇಶಕರ ಚುನಾವಣೆ – ಶಾಸಕ ಬೇಳೂರು ಗೋಪಾಲಕೃಷ್ಣ ನಾಮಪತ್ರ ಸಲ್ಲಿಕೆ  ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಅವರು ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಅಖಾಡಕ್ಕೆ ಇಳಿದಿದ್ದಾರೆ. ಜೂನ್‌ 28ರಂದು ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಮತದಾನಕ್ಕೆ ದಿನಾಂಕ ನಿಗದಿ ಪಡಿಸಲಾಗಿದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ವಿವಿಧ ಕ್ಷೇತ್ರಗಳಿಂದ ಒಟ್ಟು 13 ನಿರ್ದೇಶಕರ ಆಯ್ಕೆ ನಡೆಯಲಿದೆ. ಪ್ರತಿ ತಾಲ್ಲೂಕಿಗೆ…

Read Full News

Crime News | ವಿಷ ಸೇವಿಸಿ ಯುವಕ ಆತ್ಮಹತ್ಯೆ!

ಬೆಟ್ಟಮಕ್ಕಿಯಲ್ಲಿ ವಿಷ ಸೇವಿಸಿ ಯುವಕ ಆತ್ಮಹತ್ಯೆ! ತೀರ್ಥಹಳ್ಳಿ : ಮನೆಯಲ್ಲಿ ನೇಣು ಬಿಗಿದುಕೊಳ್ಳಲು ಪ್ರಯತ್ನ ಪಟ್ಟು ನಂತರ ವಿಷ ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಟ್ಟಮಕ್ಕಿಯಲ್ಲಿ ನಡೆದಿದೆ. ಬೆಟ್ಟಮಕ್ಕಿಯ ನಿವಾಸದಲ್ಲಿ ವಿಖ್ಯಾತ್ ( 38 ) ವರ್ಷ ಆತ್ಮಹತ್ಯೆ ಮಾಡಿಕೊಂಡ ಯುವಕ. ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈತ ಇತ್ತೀಚಿಗೆ ಮನೆಗೆ ಬಂದಿದ್ದ. ಈತನ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.  ಮೃತದೇಹವನ್ನು ಜಯಚಾಮರಾಜೇಂದ್ರ ಆಸ್ಪತ್ರೆಗೆ ರವಾನಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ…

Read Full News

Ripponpete | ಅರ್ಧಕ್ಕೆ ನಿಂತ ರಸ್ತೆ ಅಗಲೀಕರಣ ಕಾಮಗಾರಿ – ನಾಗರೀಕರಿಗೆ ಕಿರಿಕಿರಿ | ಖಾಸಗಿ ವ್ಯಕ್ತಿಯ ಪ್ರಭಾವಕ್ಕೆ ಶರಣಾಯಿತಾ ಗ್ರಾಮಾಡಳಿತ..!!??

ಆರ್ಧಕ್ಕೆ ನಿಂತ ರಸ್ತೆ ಅಗಲೀಕರಣ ಕಾಮಗಾರಿ ನಾಗರೀಕರಿಗೆ ಕಿರಿಕಿರಿ ರಿಪ್ಪನ್‌ಪೇಟೆ;-ಸಾಗರ-ತೀರ್ಥಹಳ್ಳಿ ಮಾರ್ಗದ ತಲಾ ಒಂದು ಕಿ.ಮೀ. ರಸ್ತೆ ಆಗಲೀಕರಣ ಕಾಮಗಾರಿ ಅರಂಭವಾಗಿ ವರ್ಷಗಳಾಗುತ್ತಾ ಬಂದರೂ ಕೂಡಾ ಕಾಮಗಾರಿ ಆರ್ಧಕ್ಕೆ ನಿಂತು ಸಾರ್ವಜನಿಕರಿಗೆ ಕಿರಿಕಿರಿಯಂತಾಗಿದೆ. ಕಳೆದ 2022 ನವಂಬರ್ ಡಿಸಂಬರ್ ತಿಂಗಳಲ್ಲಿ ರಸ್ತೆ ಸಾಗರ ಎಪಿಎಂಸಿ ಯಾರ್ಡ್ ಬಳಿಯಿಂದ ಸುಮಾರು 1 ಕಿ.ಮೀ. ದೂರದ ರಸ್ತೆ ಆಗಲೀಕರಣ ಮತ್ತು ಬಾಕ್ಸ್ ಚರಂಡಿ ವಿದ್ಯುತ್ತ ಕಂಬ ಸ್ಥಳಾಂತರ ಹೀಗೆ ಆಭಿವೃದ್ದಿ ಕಾಮಗಾರಿ ಆರಂಭಗೊಂಡು ಒಂದೂವರೆ ವರ್ಷಗಳಾಗುತ್ತಾ ಬಂದರೂ ಕಾಮಗಾರಿ ಆರ್ಧಂಬರ್ಧವಾಗಿಯೇ…

Read Full News

ರೈಲಿಗೆ ತಲೆ ಕೊಟ್ಟು ವ್ಯಕ್ತಿಯ ಆತ್ಮಹತ್ಯೆ | Crime News

ರೈಲಿಗೆ ತಲೆ ಕೊಟ್ಟು ವ್ಯಕ್ತಿಯ ಆತ್ಮಹತ್ಯೆ | Crime News ಶಿವಮೊಗ್ಗದ ವಿದ್ಯಾನಗರ ಸಮೀಪ ರೈಲ್ವೆ ಹಳಿ ಮೇಲೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ವಿದ್ಯಾನಗರದ ರೈಲ್ವೆ ನಿಲ್ದಾಣದ ಬಳಿ ರೈಲಿಗೆ ತಲೆ ಕೊಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಳೇ ಗುರುಪುರದ ಬಾಲಾಜಿ(40) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದ್ದು,ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಾಜಿ ಸೋಮವಾರ ಮಧ್ಯಾಹ್ನ ಮನೆ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full News

ಸ್ಮಶಾನದಲ್ಲಿ ಕುಡಿದ ಮತ್ತಿನಲ್ಲಿ ಸ್ನೇಹಿತರಿಬ್ಬರ ನಡುವೆ ಕಿರಿಕ್ – ಓರ್ವನ ಕೊಲೆಯಲ್ಲಿ ಅಂತ್ಯ | Crime News

ಸ್ಮಶಾನದಲ್ಲಿ ಕುಡುಕ ಸ್ನೇಹಿತರಿಬ್ಬರ ನಡುವೆ ಕಿರಿಕ್ – ಓರ್ವನ ಕೊಲೆಯಲ್ಲಿ ಅಂತ್ಯ | Crime News ಸ್ಮಶಾನದಲ್ಲಿ ಮದ್ಯ ಸೇವಿಸುತ್ತಿದ್ದಾಗ ಇಬ್ಬರು ಸ್ನೇಹಿತರ ನಡುವೆ ಗಲಾಟೆಯಾಗಿ ಕೊಲೆಯಿಂದ ಅಂತ್ಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಗೇಟ್‌ ಸಮೀಪದ ಸ್ಮಶಾನದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಜೆ.ಪಿ.ನಗರದ ನಿವಾಸಿ ರಾಜುನಾಯ್ಕ ಎನ್ನಲಾಗಿದೆ. ರಾಜುನಾಯ್ಕ ತನ್ನ ಸ್ನೇಹಿತ ವಿಕ್ರಮ್‌ ಜೊತೆಗೆ ಕಳೆದ ರಾತ್ರಿ ಸ್ಮಶಾನದಲ್ಲಿ ಮದ್ಯ ಸೇವಿಸುತ್ತಿದ್ದ. ಈ ಸಂದರ್ಭ ಯಾವುದೋ ವಿಚಾರವಾಗಿ ಇಬ್ಬರ ನಡುವೆ ಚಿಕ್ಕ ಗಲಾಟೆಯಾಗಿದೆ. ನಂತರ ಮಾತಿಗೆ…

Read Full News

Sagara | ಅಕ್ರಮ ಗಾಂಜಾ ಮಾರಾಟ – ಮೂವರ ಬಂಧನ

Sagara | ಅಕ್ರಮ ಗಾಂಜಾ ಮಾರಾಟ – ಮೂವರ ಬಂಧನ ಸಾಗರ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತಿದ್ದ ಆರೋಪದಡಿಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 790 ಗ್ರಾಂ ಒಣ ಗಾಂಜಾವನ್ನ ವಶಪಡಿಸಿಕೊಳ್ಳಲಾಗಿದೆ. ಸಾಗರ ಟೌನ್ ಎಳ್ಳಾರೆ ಕ್ರಾಸ್ ನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಎಸ್ಪಿ  ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ, ಮತ್ತು …

Read Full News

ನಿವೃತ್ತ ಯೋಧನ ಮೇಲೆ ಗ್ರಾಪಂ ಉಪಾಧ್ಯಕ್ಷನ ದೌರ್ಜನ್ಯ – ಜೂ.18 ಕ್ಕೆ ಭಾರಿ ಪ್ರತಿಭಟನೆ

ನಿವೃತ್ತ ಯೋಧನ ಮೇಲೆ ಗ್ರಾಪಂ ಉಪಾಧ್ಯಕ್ಷನ ದೌರ್ಜನ್ಯ – ಜೂ.18 ಕ್ಕೆ ಭಾರಿ ಪ್ರತಿಭಟನೆ ಹೊಸನಗರ : ನಿವೃತ್ತ ಯೊಧರೊಬ್ಬರ ಮೇಲೆ ಕರಿಮನೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರೊಬ್ಬರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಜೂನ್ .18 ರ ಮಂಗಳವಾರ ಬೆಳಿಗ್ಗೆ11 ಗಂಟೆಗೆ ನಿಲ್ಸ್ ಕಲ್ ಗ್ರಾಪಂ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕರಿಮನೆ ಗ್ರಾಮದ ನಿವೃತ್ತ ಯೋಧ ಹಾಗೂ ಜೆಡಿಎಸ್ ಮುಖಂಡರಾದ ರಾಮಪ್ಪ ಎಂಬುವವರ ಮೇಲೆ ಕರಿಮನೆ ಉಪಾದ್ಯಕ್ಷರಾದ ರಮೇಶ್ ಎಂಬುವವರು  ದೌರ್ಜನ್ಯ,ಹಾಗು ಆನಾಗರೀಕ ವರ್ತನೆ ನಡೆದಿದ್ದಾರೆಂದು ಆರೋಪಿಸಿ ನಿವೃತ್ತ…

Read Full News

Shivamogga | ಬಿಜೆಪಿ ಹಿರಿಯ ಮುಖಂಡ ಎಂ ಬಿ ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

Shivamogga | ಬಿಜೆಪಿ ಹಿರಿಯ ಮುಖಂಡ ಎಂ ಬಿ ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ – ಬೆಲೆ ಏರಿಕೆ ವಿರುದ್ದ ಪ್ರತಿಭಟನೆ ವೇಳೆ ಕುಸಿದು ಬಿದ್ದ ಭಾನುಪ್ರಕಾಶ್ ಕಾಂಗ್ರೆಸ್ ವಿರುದ್ದ ಬೆಲೆ ಏರಿಕೆ  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ್‌ರವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಶಿವಮೊಗ್ಗದಲ್ಲಿ ಬೆಲೆ ಏರಿಕೆ ವಿರೂದ ಪ್ರತಿಭಟನೆ ನಡೆಸುತಿದ್ದ ವೇಳೆ ಹೃದಯಾಘಾತವಾಗಿದ್ದು ತಕ್ಷಣವೇ ಅವರನ್ನ ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಭಾನುಪ್ರಕಾಶ್‌ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಶಿವಮೊಗ್ಗದಲ್ಲಿಂದು ರಾಜ್ಯ…

Read Full News

Ripponpete | ಮುಸ್ಲಿಂ ಬಾಂಧವರಿಂದ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಆಚರಣೆ

Ripponpete | ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಬಕ್ರಿದ್ ಆಚರಣೆ ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯಂತ  ಸಂಭ್ರಮದಿಂದ ಬಕ್ರಿದ್ ಹಬ್ಬವನ್ನು ಆಚರಿಸಿದರು. ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ, ಮದೀನಾ ಮಸೀದಿ ಗಳಲ್ಲಿ ಮುಸಲ್ಮಾನ ಭಾಂಧವರು ಬಕ್ರೀದ್ ಪ್ರಾರ್ಥನೆ ಸಲ್ಲಿಸಿದರು. ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್  ಸಖಾಫೀ ಮಾತನಾಡಿ,  ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ  ಸಹೋದರತ್ವದಿಂದ ಬಾಳ್ವೆ ನಡೆಸಬೇಕು .ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಖಂಡಿಸುತ್ತದೆ ಎಂದರು. ರಿಪ್ಪನ್ ಪೇಟೆಯಲ್ಲಿ…

Read Full News

Ripponpete | ನಾಗರಹಳ್ಳಿಯಲ್ಲಿ ಕಾಡುಕೋಣಗಳ ಮಾರಣಹೋಮ – ಮಲೆನಾಡಿನಲ್ಲಿ ಶಬ್ದ ಮಾಡುತ್ತಿರುವ ಕಳ್ಳ ಬಂದೂಕುಗಳು

Ripponpete | ನಾಗರಹಳ್ಳಿಯಲ್ಲಿ ಕಾಡುಕೋಣಗಳ ಮಾರಣಹೋಮ – ಮಲೆನಾಡಿನಲ್ಲಿ ಶಬ್ದ ಮಾಡುತ್ತಿರುವ ಕಳ್ಳ ಬಂದೂಕುಗಳು  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ವ್ಯಾಪ್ತಿಯ ನಾಗರಹಳ್ಳಿ ಗ್ರಾಮದಲ್ಲಿ ಕಾಡು ಕೋಣಗಳ ಮಾರಣಹೋಮ ನಡೆದಿರುವ ಬಗ್ಗೆ ವರದಿಯಾಗಿದೆ. ಹುಂ‍ಅ ವ್ಯಾಪ್ತಿಯ ನಾಗರಹಳ್ಳಿ ವ್ಯಾಪ್ತಿಯಲ್ಲಿ ಕೆಲವು ಕಿಡಿಗೇಡಿಗಳು ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳನ್ನು ಅಕ್ರಮ ಬಂದೂಕು ಬಳಸಿ ಹತ್ಯೆಗೈದಿದ್ದಾರೆ,ಈ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಕಾಡುಕೋಣಗಳು ಕೆಲವೊಮ್ಮೆ ಪ್ರತ್ಯಕ್ಷಗೊಳ್ಳುತಿದ್ದವು ಆದರೆ ಈಗ ಗುಂಪಿನಲ್ಲಿ ನಾಲ್ಕೈದು ಮಾತ್ರ ಇದೆ ಕಾಡುಕೋಣಗಳ ಮಾರಣಹೋಮವೇ ನಡೆದಿದೆ ಎಂಬ ಆರೋಪ…

Read Full News

ಮಹಿಳೆ ನಾಪತ್ತೆ – ಮಾಹಿತಿಗಾಗಿ ಮನವಿ | Missing

ಮಹಿಳೆ ನಾಪತ್ತೆ – ಮಾಹಿತಿಗಾಗಿ ಮನವಿ | Missing ಶಿವಮೊಗ್ಗ : ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸವಳಂಗ ರಸ್ತೆಯ ಕರ್ನಾಟಕ ಬ್ಯಾಂಕ್ ಎದುರು ರಕ್ಷ ನಿಲಯದಲ್ಲಿರುವ ಸ್ನೇಹಾಶ್ರಯ ಅರ್ಬನ್ ಆಂಡ್ ರೂರಲ್ ಡೆವಲಪ್‍ಮೆಂಟ್ ಸೊಸೈಟಿಗೆ 3 ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಅನುಸೂಯ 38 ವರ್ಷ ಅನಾಥ ಮಹಿಳೆ ದಾಖಲಾಗಿದ್ದು, ಈಕೆ ಜೂ. 11 ರಂದು ಕಾಣೆಯಾಗಿರುತ್ತಾರೆ. ಈಕೆ ಸುಮಾರು 4.5 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಮುಖದಲ್ಲಿ ಬಲಗಡೆ ಹುಬ್ಬಿನ ಹತ್ತಿರ ಕಪ್ಪು…

Read Full News

Ripponpete | ಅಕ್ರಮ ಗೋ ಸಾಗಾಟ – ಮೂವರು ಆರೋಪಿಗಳ ಬಂಧನ ,ಜಾನುವಾರುಗಳ ರಕ್ಷಣೆ

ರಿಪ್ಪನ್‌ಪೇಟೆ : ಅಕ್ರಮ ಗೋ ಸಾಗಾಟ – ಮೂವರು ಆರೋಪಿಗಳ ಬಂಧನ ,ಜಾನುವಾರುಗಳ ರಕ್ಷಣೆ ರಿಪ್ಪನ್‌ಪೇಟೆ : ಅಕ್ರಮವಾಗಿ ಜಾನುವಾರು ಗಳನ್ನು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೆರೆಗೆ ಪೊಲೀಸರು ಟಾಟಾ ದೋಸ್ತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಪ್ರಮುಖ ಆರೋಪಿಗಳಾದ ಸೈಯದ್ ಖೈಜರ್ (45) , ರಾಹಿದ್ (18) ಮತ್ತು ಫಾಜಿಲ್ (48)ರನ್ನು ಬಂಧಿಸಿ 3 ಜಾನುವಾರುಗಳನ್ನು ರಕ್ಷಿಸಲಾಗಿದೆ. ಸಿದ್ದಪ್ಪನಗುಡಿ ಬಳಿಯಲ್ಲಿ ಟಾಟಾ ದೋಸ್ತ್  (KA -37-A 2314) ವಾಹನದಲ್ಲಿ…

Read Full News

ಗಾಂಜಾ ಕೇಸ್ : ನಾಲ್ವರು ಯುವಕರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ | ತಲಾ ಒಂದು ಲಕ್ಷದ ಐದು ಸಾವಿರ ದಂಡ

ಗಾಂಜಾ ಕೇಸ್ : ನಾಲ್ವರು ಯುವಕರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ | ತಲಾ ಒಂದು ಲಕ್ಷದ ಐದು ಸಾವಿರ ದಂಡ  ಶಿವಮೊಗ್ಗ ಕೋರ್ಟ್ ನಿಂದ ಮಹತ್ವದ ತೀರ್ಪು ಶಿವಮೊಗ್ಗ : ಗಾಂಜಾ ಪ್ರಕರಣವೊಂದರಲ್ಲಿ  ನಾಲ್ವರು ಯುವಕರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ  ವಿಧಿಸಿ, ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೂ. 15 ರಂದು ತೀರ್ಪು ನೀಡಿದೆ. ಇಂದಿರಾನಗರ ನಿವಾಸಿಗಳಾದ ದೌಲತ್ ಯಾನೆ ಗುಂಡು (27), ಮುಜೀಬ್ ಯಾನೆ ಬಸ್ಟ್ (27),…

Read Full News

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಸೇರಿ 13 ಆರೋಪಿಗಳು 5 ದಿನಗಳ ಕಾಲ ಮತ್ತೆ ಪೊಲೀಸ್ ಕಸ್ಟಡಿಗೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಸೇರಿ 13 ಆರೋಪಿಗಳು 5 ದಿನಗಳ ಕಾಲ ಮತ್ತೆ ಪೊಲೀಸ್ ಕಸ್ಟಡಿಗೆ  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ , ಪವಿತ್ರಾಗೌಡ ಸೇರಿ 13 ಆರೋಪಗಳನ್ನ 5 ದಿನಗಳ ಕಾಲ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್  ಆದೇಶ ಹೊರಡಿಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ ಆರೋಪಿಗಳ ಪೊಲೀಸ್ ಕಸ್ಟಡಿ ನಾಳೆಗೆ ಅಂತ್ಯವಾಗಲಿದ್ದು ಈ ಹಿನ್ನೆಲೆಯಲ್ಲಿ ಇಂದು…

Read Full News

ಗಾಂಜಾ ಮಾರಾಟ ಮಾಡುತಿದ್ದ ಇಬ್ಬರ ಬಂಧನ | Crime News

ಗಾಂಜಾ ಮಾರಾಟ ಮಾಡುತಿದ್ದ ಇಬ್ಬರ ಬಂಧನ | Crime News ಗಾಂಜಾ ಗಿರಾಕಿಗಳ ಹೆಡೆಮುರಿ ಕಟ್ಟುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ನಗರದ ಹರ್ಷ ಫರ್ನ್ ಹತ್ತಿರದ ಪುರುದಾಳು ರಸ್ತೆಯಲ್ಲಿ  ಇಬ್ಬರು ವ್ಯಕ್ತಿಗಳು ಬೈಕ್ ನಿಲ್ಲಿಸಿಕೊಂಡು ಗಾಂಜಾ ಮಾರುತ್ತಿದ್ದಾರೆ ಎಂಬ ಮಾಹಿತಿಯೊಂದು ಪೊಲೀಸರಿಗೆ ಲಭ್ಯವಾಗಿದೆ.   ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಬಿ ಮತ್ತು  ಶಿವಪ್ರಸಾದ್, ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆಯ ನೇತೃತ್ವದ ಸಿಬ್ಬಂದಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 1) ಮಾಲತೇಶ ಜೆ,…

Read Full News

ರಿಪ್ಪನ್‌ಪೇಟೆಗೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ |Muthalik

ರಿಪ್ಪನ್‌ಪೇಟೆಗೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ  ರಿಪ್ಪನ್‌ಪೇಟೆ : ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಂದು ಪಟ್ಟಣಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.  ಖಾಸಗಿ ಕಾರ್ಯಕ್ರಮ ನಿಮಿತ್ತ ಕೊಪ್ಪಕ್ಕೆ ತೆರಳುತಿದ್ದ ಪ್ರಮೋದ್ ಮುತಾಲಿಕ್ ಪಟ್ಟಣದ ಅಶೋಕ್ ಗೌಡ ಹಾಲುಗುಡ್ದೇ ರವರ ಮನೆಗೆ ಭೇಟಿ ನೀಡಿ ನೆರೆದಿದ್ದ ಹಿಂದೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಪ್ರಮೋದ್ ಮುತಾಲಿಕ್ ವಾಹನ ಚಾಲಕ ಹಾಗೂ ಅಪ್ತನಾಗಿರುವ ಶಬರೀಶ್ ರವರು ಪಟ್ಟಣದ ಅಶೋಕ್ ಗೌಡ ಹಾಲುಗುಡ್ದೇ ರವರ ಪುತ್ರನಾಗಿದ್ದು ಈ…

Read Full News

Ripponpete | ಕೆರೆಯ ಜಾಗದಲ್ಲಿ ತಲೆ ಎತ್ತುತ್ತಿರುವ ಅಕ್ರಮ ಕಟ್ಟಡ – ಅಧಿಕಾರಿಗಳ ಬೇಜವಬ್ದಾರಿಯ ನಡೆ | ಗ್ರಾಮಸ್ಥರ ಆಕ್ರೋಶ

Ripponpete | ಕೆರೆಯ ಜಾಗದಲ್ಲಿ ತಲೆ ಎತ್ತುತ್ತಿರುವ ಅಕ್ರಮ ಕಟ್ಟಡ – ಅಧಿಕಾರಿಗಳ ಬೇಜವಬ್ದಾರಿಯ ನಡೆ | ಗ್ರಾಮಸ್ಥರ ಆಕ್ರೋಶ ರಿಪ್ಪನ್‌ಪೇಟೆ: ಸಮೀಪದ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಗುಬ್ಬಿಗ ಗ್ರಾಮದ ಸರ್ವೇ ನಂ.12ರ ಗುಳಗುಳಿ ಶಂಕರದಲ್ಲಿ ಕೆರೆ ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಿಸುರುವುದನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.  ಬೆಳ್ಳೂರು-ಆಯನೂರು-ಶಿವಮೊಗ್ಗ ಮುಖ್ಯ ರಸ್ತೆಯಲ್ಲಿನ ಪ್ರಸಿದ್ಧ ಗುಳಗುಳಿ ಶಂಕರೇಶ್ವರ ದೇವಸ್ಥಾನ ಮತ್ತು ಜಟಾತೀರ್ಥದ ಎದುರು ಇರುವ ಕೆರೆಯನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಕೆರೆ ನೀರನ್ನು ಆಶ್ರಯಿಸುವ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.