Ripponpete | ನಾಡಕಛೇರಿ ಸ್ಥಳಾಂತರ – ಸಾರ್ವಜನಿಕರ ಪರದಾಟ | ಕೆಂಚನಾಲ ಗ್ರಾಪಂ ಅಧ್ಯಕ್ಷರ ಆಕ್ರೋಶ
ರಿಪ್ಪನ್‌ಪೇಟೆ : ಪಟ್ಟಣದ ನಾಡಕಛೇರಿ ಶಿಥಿಲವಾಗಿರುವ ಹಿನ್ನಲೆಯಲ್ಲಿ ಹಳೆ ಸಂತೇ ಮಾರ್ಕೆಟ್ ನಲ್ಲಿರುವ ಅಂಬೇಡ್ಕರ್ ಸಭಾ ಭವನಕ್ಕೆ ಸ್ಥಳಾಂತರಿಸಲಾಗಿದ್ದು ಈ ಸ್ಥಳ ಅವೈಜ್ಞಾನಿಕವಾಗಿದ್ದು ಸಾರ್ವಜನಿಕರಿಗೆ ಅನಾನುಕೂಲವಾಗಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ ಎಂದು ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ರಸ್ತೆಯ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ನಾಡಕಛೇರಿ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಅಗಸ್ಟ್ ತಿಂಗಳಿನಿಂದ ಹಳೇ ಸಂತೇ ಮಾರ್ಕೆಟ್ ಬಳಿಯಿರುವ ಅಂಬೇಡ್ಕರ್ ಸಭಾ ಭವನಕ್ಕೆ ಕಛೇರಿಯನ್ನು ವರ್ಗಾಯಿಸಲಾಗಿದ್ದು ಈ ಸ್ಥಳ ಅವೈಜ್ಞಾನಿಕವಾಗಿದ್ದು ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ.ಇದರಿಂದ ಸಾರ್ವಜನಿಕರು ಪರದಾಡುತಿದ್ದಾರೆ ಕೂಡಲೇ ಸಂಬಧಿಸಿದವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ..
ನಾಡಕಛೇರಿ ಕಟ್ಟಡ ತುಂಬಾ ಶಿಥಿಲಗೊಂಡಿರುವುದರಿಂದ ಅದನ್ನು ದುರಸ್ತಿ ಪಡಿಸುವವರೆಗೂ ರಿಪ್ಪನ್‌ಪೇಟೆಯ ಮುಖ್ಯ ರಸ್ತೆಯಲ್ಲಿ ಯಾವುದಾದರು ಕಟ್ಟಡದಲ್ಲಿ ಕಛೇರಿಯನ್ನು ಸ್ಥಳಾಂತರ ಮಾಡುವ ಮೂಲಕ ಜನಸಾಮನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಸಮಸ್ಯೆಗಳ ಕೂಪವಾಗಿರುವ ಹೊಸ ಕಛೇರಿ :
ಹಳೇ ಸಂತೇ ಮಾರ್ಕೆಟ್ ನಲ್ಲಿರುವ ಅಂಬೇಡ್ಕರ್ ಸಭಾ ಭವನದಲ್ಲಿ ಸ್ಥಳಾಂತರಗೊಂಡಿದ್ದು ಈ ಕಛೇರಿಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಹಾಗೂ ನೌಕರರು ಪರದಾಡುವಂತಾಗಿದೆ.
ಈ ಕಟ್ಟಡದ ಸುತ್ತಮುತ್ತಲಿನಲ್ಲಿ ಕೊಳಚೆ ನೀರು ನಿಂತು ಡೆಂಗ್ಯೂ ರೋಗಕ್ಕೆ ಆಹ್ವಾನ ನೀಡುವಂತಾಗಿದ್ದು ಸ್ವಚ್ಚತೆ ಎನ್ನುವುದು ಮರೀಚಿಕೆಯಾಗಿದೆ.
ಸದರಿ ಕಟ್ಟಡದ ಸಮೀಪದಲ್ಲೇ ವಿದ್ಯಾರ್ಥಿನಿಯರ ವಸತಿ ನಿಲಯವಿದ್ದು ವಿದ್ಯಾರ್ಥಿನಿಯರ ಭದ್ರತೆಗೂ ಲೋಪ ಉಂಟಾಗುವ ಸಾಧ್ಯತೆಯೇ ಹೆಚ್ಚಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತಿದ್ದಾರೆ.
ಒಟ್ಟಾರೆಯಾಗಿ ನಾಡ ಕಛೇರಿ ಸ್ಥಳಾಂತರ ಜನಸಾಮಾನ್ಯರಿಗೆ ಅನಾನುಕೂಲವಾಗುತಿದ್ದು ಪ್ರತಿನಿತ್ಯ ಸಂಬಂಧಿಸದವರಿಗೆ ಹಿಡಿಶಾಪ ಹಾಕುತಿದ್ದಾರೆ.