w
Headlines
Home » ಒಂಟಿ ಮನೆಯಲ್ಲಿದ್ದ ಅಜ್ಜಿಯ ಭೀಕರ ಕೊಲೆ | Crime news

ಒಂಟಿ ಮನೆಯಲ್ಲಿದ್ದ ಅಜ್ಜಿಯ ಭೀಕರ ಕೊಲೆ | Crime news

1722783160570568 0.png
ಒಂಟಿ ಮನೆಯಲ್ಲಿದ್ದ ಅಜ್ಜಿಯ ಭೀಕರ ಕೊಲೆ | Crime news

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಜರಿಕೊಪ್ಪ ಗ್ರಾಮದಲ್ಲಿ ನಿನ್ನೆ(ಶನಿವಾರ) ಬೆಳಗ್ಗೆ ಸುಮಾರು 10. 30 ಘಂಟೆಗೆ ದರೋಡೆಕೋರರು ಒಂಟಿ ಮನೆಗೆ ನುಗ್ಗಿದ್ದಾರೆ. ಮೃತ ಸಾವಿತ್ರಮ್ಮ (60) ಅಜ್ಜಿಯು ಬ್ಯಾಂಕ್​ಗೆ ಹೋಗಿ ಒಂದಿಷ್ಟು ಹಣ ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟಿರುವುದನ್ನು ಕಳ್ಳರು ಗಮನಿಸಿದ್ದರು. ಹೀಗೆ ಅಜ್ಜಿ ಒಬ್ಬಳೇ ಇರುವುದನ್ನು ಅರಿತಿದ್ದ ಖದೀಮರು ಮನೆಗೆ ಎಂಟ್ರಿಕೊಟ್ಟು ಅಜ್ಜಿ ಬಳಿ ಇದ್ದ ನಗದು ಕಿತ್ತುಕೊಂಡಿದ್ದಾರೆ. ಈ ವೇಳೆ ಅಜ್ಜಿ ದರೋಡೆಗೆ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಕುಪಿತಗೊಂಡ ದರೋಡೆಕೋರರು ಅಜ್ಜಿ ಮೇಲೆ ದೊಣ್ಣೆಯಿಂದ ದಾಳಿ ನಡೆಸಿ, ಹತ್ಯೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಅಕ್ಕ-ಪಕ್ಕದ ಗ್ರಾಮಸ್ಥರು ಸಂಜೆ ನೋಡಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಕುಂಸಿ ಪೊಲೀಸ್ ಠಾಣೆಗೆ ಕೊಲೆಯ ಕುರಿತು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕುಂಸಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಅಜ್ಜಿಗೆ ಮೂವರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ ಇದ್ದಾನೆ. ಮೃತ ಅಜ್ಜಿ, ಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದು, ಕಳೆದ ಆರು ತಿಂಗಳ ಹಿಂದೆ ಅಜ್ಜಿ ಮನೆಯಲ್ಲಿದ್ದ 50 ಸಾವಿರ ರೂಪಾಯಿ ಕಳ್ಳತನವಾಗಿತ್ತು. ಇದರ ನಂತರ ಹಣಕ್ಕಾಗಿ ಅಜ್ಜಿಯನ್ನೇ ಮರ್ಡರ್ ಮಾಡಿ ಅವರು ಎಸ್ಕೇಪ್ ಆಗಿದ್ದಾರೆ. ಗ್ರಾಮಸ್ಥರು ಈ ಕೊಲೆ ಪ್ರಕರಣದಿಂದ ಬೆಚ್ಚಿಬಿದ್ದಿದ್ದಾರೆ.

ಅಜ್ಜಿ ಕೊಲೆ ಪ್ರಕರಣದಿಂದ ಇಡೀ ಗ್ರಾಮಸ್ಥರೆಲ್ಲರೂ ಬೆಚ್ಚಿಬಿದ್ದಿದ್ದಾರೆ. ಬೆಳ್ಳಂ ಬೆಳಗ್ಗೆ ಒಂಟಿ ಮನೆಗೆ ನುಗ್ಗಿ ದರೋಡೆಕೊರರು ಕೇವಲ 15 ಸಾವಿರ ಹಣಕ್ಕಾಗಿ ಅಜ್ಜಿಯ ಮರ್ಡರ್ ಮಾಡಿದ್ದಾರೆ. ಅಜ್ಜಿಯನ್ನು ಗಮನಿಸಿದ ದರೋಡೆಕೋರರು ಪ್ಲ್ಯಾನ್ ಮಾಡಿ ಮರ್ಡರ್ ಮಾಡಿದ್ದಾರೆ. ಅಜ್ಜಿ ಬಳಿ ಇದ್ದ 15 ಸಾವಿರ ನಗದು ದೋಚಿದ್ದಾರೆ. ಅಜ್ಜಿ ಮನೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಎರಡು ಸಾವಿರ ಹಣ ಮತ್ತು ಎರಡು ಚೀಲ ತೆಂಗಿನಕಾಯಿ ಕಳ್ಳತನವಾಗಿತ್ತು. ಒಂಟಿ ಅಜ್ಜಿ ಮನೆಯನ್ನೇ ಕಳ್ಳರು ದರೋಡೆಕೋರರು ಟಾರ್ಗೇಟ್ ಮಾಡಿದ್ದರು.

ಈ ಕಳ್ಳತನ ಕುರಿತು ಅಜ್ಜಿಯು ದೂರು ನೀಡಿರಲಿಲ್ಲ. ಈ ಘಟನೆ ನಡೆದು ಎರಡು ದಿನಗಳ ಬಳಿಕ ಅಜ್ಜಿ ಮರ್ಡರ್ ಆಗಿದೆ. ಹಾಲಿನ ಸಬ್ಸಿಡಿ ಹಣ ಅಜ್ಜಿ ಖಾತೆಗೆ ಜಮಾ ಆಗಿತ್ತು. ಈ ಸಬ್ಸಿಡಿ 15 ಸಾವಿರ ರೂಪಾಯಿ ಹಣವನ್ನು ಹತ್ತಿರದ ಸಿರಿಗೆರೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿಂದ ತೆಗೆದುಕೊಂಡು ಹೋಗಿದ್ದಳು. ಈ ಹಣ ತೆಗೆದುಕೊಂಡು ಹೋಗಿರುವುದು ನೋಡಿದ ದರೋಡೆಕೋರರು ಅಜ್ಜಿಯ ಮನೆಗೆ ನುಗ್ಗಿ ಕೊಲೆ ಮಾಡಿದ್ದರು. ಯಾರೋ ಪರಿಚಯಸ್ಥರೇ ಅಜ್ಜಿಯ ಕೊಲೆ ಮಾಡಿರುವ ಅನುಮಾನ ಪೊಲೀಸರಿಗೆ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅಜ್ಜಿಯ ಕೊಲೆ ಪ್ರಕರಣದ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆದಷ್ಟು ಬೇಗ ಹಂತಕರನ್ನು ಪೊಲೀಸರು ಪತ್ತೆ ಮಾಡುವ ಮೂಲಕ ಗ್ರಾಮಸ್ಥರ ಆಂತಕವನ್ನು ದೂರ ಮಾಡಬೇಕಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.