Headlines

Shivamogga: ನಿಂತಿದ್ದ ಟಿಪ್ಪರ್ ಗೆ ಆಂಬುಲೆನ್ಸ್ ಡಿಕ್ಕಿ – ಚಾಲಕ ಗಂಭೀರ

ಶಿವಮೊಗ್ಗ: ಟಿಪ್ಪರ್ ಲಾರಿಗೆ ಆಂಬುಲೆನ್ಸ್‌ ಡಿಕ್ಕಿಯಾದ ಪರಿಣಾಮ ಆಂಬುಲೆನ್ಸ್‌ ಚಾಲಕರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗದ ಮಲವಗೊಪ್ಪ ಸಮೀಪದಲ್ಲಿ ನಡೆದಿದೆ.

ನಿಲ್ಲಿಸಿದ್ದ ಟಿಪ್ಪರ್ ಗೆ ಆಂಬುಲೆನ್ಸ್ ಗೆ ಡಿಕ್ಕಿಯಾದ ಪರಿಣಾಮ ಆಂಬುಲೆನ್ಸ್ ನಜ್ಜುಗುಜ್ಜಾಗಿದೆ.ಭದ್ರಾವತಿ ಕಡೆಯಿಂದ ಬರುತ್ತಿದ್ದ ಆಂಬುಲೆನ್ಸ್‌  ಮಲವಗೊಪ್ಪದ  ಬಳಿಯಲ್ಲಿ ನಿಂತಿದ್ದ ಟಿಪ್ಪರ್‌ ಲಾರಿಗೆ ಡಿಕ್ಕಿಯಾಗಿದೆ. ಆಂಬುಲೆನ್ಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು,ಆತನನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ.