Headlines

ಆನಂದಪುರ : ಲಾರಿಯ ಸೈಡ್ ಡೋರ್ ಕಟ್ಟಾಗಿ ರೈಲ್ವೆ ಹಳಿಯ ಮೇಲೆ ಬಿದ್ದ ಮರದ ಪೋಲ್ಸ್ ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್.!

ಶಿವಮೊಗ್ಗ : ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಎಡೆಹಳ್ಳಿಯ ರೈಲ್ವೆ ಕ್ರಾಸಿಂಗ್ 105 ಲೆವೆಲ್ ನಲ್ಲಿ ಬಟ್ಟೆಮಲ್ಲಪ್ಪ ದಿಂದ ದಾಂಡೇಲಿಗೆ ಹೋಗುತ್ತಿದ್ದ ಮರದ ಪೋಲ್ಸ್ ತುಂಬಿದ ಲಾರಿಯ ಸೈಡ್ ಡೋರ್ ಕಟ್ಟಾಗಿ ನೂರಾರು ಮರದ ಪೋಲ್ಸ್ ಗಳು ರೈಲ್ವೆ ಹಳಿ ಮೇಲೆ ಬಿದ್ದು 1ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.  ಸ್ಥಳಕ್ಕೆ ಆಗಮಿಸಿದ ರೈಲ್ವೆ ಸಿಬ್ಬಂದಿಗಳು ಹಾಗೂ ಆನಂದ ಪುರದ ಪೊಲೀಸ್ ಸಿಬ್ಬಂದಿಗಳು ಮತ್ತು ಸ್ಥಳೀಯ ನೂರಕ್ಕೂ ಹೆಚ್ಚು ಗ್ರಾಮಸ್ಥರ ನೆರವಿನಿಂದ ರೈಲ್ವೆ ಹಳಿಯ ಮೇಲೆ…

Read More

ಆನಂದಪುರದಲ್ಲಿ ರಾಯಲ್ ಕ್ಲಬ್ ನಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಅದ್ದೂರಿ ಸನ್ಮಾನ :

ಆನಂದಪುರ : ಅತ್ಯುನ್ನತ ಸಾಧನೆ ಗೈದು ಜನ ಸಾಮಾನ್ಯರಲ್ಲಿ ನೆನಪುಳಿಯುವಂತೆ  ಸಾಧನೆಗೈದ ಸನ್ಮಾನಿತರಿಗೆ ಗೌರವಿಸಲಾಯಿತು. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ರಾಯಲ್ ಕ್ಲಬ್ ವತಿಯಿಂದ ನಾಡಿನಾದ್ಯಂತ ಹೆಸರನ್ನು ಗಳಿಸಿ ನಾಡಿಗೆ ಕೀರ್ತಿ ತಂದ ಹಲವು ಸಾಧಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ರಾಯಲ್ ಕ್ಲಬ್ ಕಳೆದ 2ವರ್ಷಗಳಿಂದ ಆನಂದಪುರದಲ್ಲಿ ಹಲವು ರೀತಿಯ ಸಾಮಾಜಿಕ ಚಟುವಟಿಕೆಗಳಲ್ಲಿ ಹಾಗೂ ನೊಂದವರಿಗೆ ನೆರವು ನೀಡುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದು ಸಮಾಜಮುಖಿ ಕೆಲಸ ನಿರ್ವಹಿಸುವತ್ತ ಗಮನ ಹರಿಸಿದೆ.  ರಾಯಲ್ ಎನ್ನುವ ಶಬ್ದದಲ್ಲೇ ಸರ್ವ ಧರ್ಮವನ್ನು…

Read More

ಕೊಳಕು ಮಂಡಲ ಹಾವು ಕಚ್ಚಿ ಜೀವನದ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಸರಗುಂದದ ಬಡ ವಿದ್ಯಾರ್ಥಿಯ ಬದುಕು:

ಆನಂದಪುರ: ಓದಿ ಜೀವನದಲ್ಲಿ ಉನ್ನತ ಹುದ್ದೆಗೇರುವ ಕನಸು ಕಂಡಿದ್ದಂತಹ ವಿದ್ಯಾರ್ಥಿಯ ಬದುಕಲ್ಲಿ ಇದೀಗ ಕತ್ತಲು ಆವರಿಸಿದಂತಾಗಿದೆ. ಇತರ ವಿದ್ಯಾರ್ಥಿಗಳಂತೆ ಆಟ ಪಾಠ ಕಲಿಯೋಣವೆಂದರೆ ನಡೆಯಲು ಬಾರದ ಪರಿಸ್ಥಿತಿಗೆ ಈ ವಿದ್ಯಾರ್ಥಿ ಈಗ ತಲುಪಿದ್ದಾನೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಸರಗುಂದ ಗ್ರಾಮದ ವಿದ್ಯಾರ್ಥಿ ಸ್ಕಂದನ ಎಂಬ ಹತ್ತನೇ ತರಗತಿ ಓದುತ್ತಿದ್ದ ಆ ವಿದ್ಯಾರ್ಥಿ ಮನೆಯ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಕೊಳಕುಮಂಡಲ ಹಾವು ಕಚ್ಚಿ ಇದೀಗ ಕಾಲು ಕೊಳೆಯುವಂತಹ ಸ್ಥಿತಿ ಬಂದಿದೆ. ಮನೆಯಲ್ಲಿ ನೋಡಿದರೆ ಆರ್ಥಿಕ ಸ್ಥಿತಿ…

Read More

ಆನಂದಪುರ:ಮನೆಗೆ ನುಗ್ಗಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ದರೋಡೆ

ಆನಂದಪುರ: ಇಲ್ಲಿನ ಸಮೀಪದ ಕೆಂಜಿಗಾಪುರದ ಪುರೋಹಿತರಾದ  ಶ್ರೀಧರ್ ಭಟ್ ವರ ಮನೆಗೆ ಹಾಡುಹಗಲೇ ಮೂವರು ದರೋಡೆಕೋರರು ನುಗ್ಗಿ ಶ್ರೀಧರ್ ಭಟ್ ರವರ ಅಕ್ಕನಾದ ವೃದ್ದೆ ಜಯಮ್ಮರವರ ಮೇಲೆ ಹಲ್ಲೆ ಮಾಡಿ ಸುಮಾರು ಎಪ್ಪತ್ತು ಸಾವಿರಕ್ಕೂ ಅಧಿಕ  ಹಣವನ್ನು ದರೋಡೆಕೋರರು ದೋಚಿದ್ದಾರೆ. ಸ್ವಿಫ್ಟ್ ಕಾರ್ ನಲ್ಲಿ ಬಂದಂತಹ ದರೋಡೆ ಕೋರರ ತಂಡವು ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಹಣದ ಚೀಲವನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣಾ ಪೊಲೀಸರು…

Read More

ಬಿಎಸ್ ವೈ ಕುರ್ಚಿಗೆ ಪುತ್ರ ವಿಜಯೇಂದ್ರರ ಭ್ರಷ್ಟಾಚಾರವೇ ಮುಳುವಾಯಿತೇ ?!! ಬಿಜೆಪಿಯವರೆ ಉತ್ತರ ನೀಡಬೇಕು:ಬೇಳೂರು ಗೋಪಾಲಕೃಷ್ಣ

ಆನಂದಪುರ: ಸಾಗರ ತಾಲ್ಲೂಕಿನಲ್ಲಿ ಕಳೆದ 1 ವಾರದಿಂದ ಎಡಬಿಡದೆ ಮಳೆ ಸುರಿಯುತ್ತಿದೆ ಇದರಿಂದ ಐವತ್ತು ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಸಾಗರ ತಾಲ್ಲೂಕಿನ ಆನಂದಪುರ ದಲ್ಲಿ ಪ್ರವಾಹ ವೀಕ್ಷಣೆಗೆ ಆಗಮಿಸಿದ್ದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಆನಂದಪುರಂ ಹೋಬಳಿಯಲ್ಲಿ ಜನರು ಕೋಟ್ಯಂತರ ರೂ ನಷ್ಟಕ್ಕೀಡಾಗಿದ್ದಾರೆ ಎಂದರು.  ಮನೆಗಳು ಬಿದ್ದಿವೆ ಕೊಟ್ಟಿಗೆಗಳು ಮುರಿದಿವೆ,ರೈತರ ಬೆಳೆ ಕೂಡ ಹಾಳಾಗಿದೆ ಕೂಡಲೇ ಅಧಿಕಾರಿಗಳು ಹಾಗೂ ಸರಕಾರ ಸಂತ್ರಸ್ತರ ನೆರವಿಗೆ ಬರಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ…

Read More

ಅತಿವೃಷ್ಟಿ ಮಳೆಗೆ ಸಾಗರ ತಾಲ್ಲೂಕಿನಲ್ಲಿ 50 ಕೋಟಿಗೂ ಅಧಿಕ ನಷ್ಟ: ಮಾಜಿ ಜಿಪಂ ಸದಸ್ಯೆ ಅನಿತಾ ಕುಮಾರಿ

ಆನಂದಪುರ: ತಾಲ್ಲೂಕಿನಲ್ಲಿ ಕಳೆದ ವಾರದಿಂದ ಸುರಿದ ಮಳೆಗೆ ಇದುವರೆಗೂ 50 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾಕುಮಾರಿ ಹೇಳಿದ್ದಾರೆ. ಆನಂದಪುರ ಸಮೀಪದ ಹೊಸೂರು ಗ್ರಾಮಪಂಚಾಯತಿ  ವ್ಯಾಪ್ತಿಯಲ್ಲಿ ಅತಿವೃಷ್ಟಿ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ ಸಾಗರ ತಾಲ್ಲೂಕಿನಲ್ಲಿ ಇದುವರೆಗೂ ಸುರಿದ ಮಳೆಗೆ ಐವತ್ತು ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ    ಭತ್ತ ನಾಟಿ ಮಾಡಿ 500 ಹೆಕ್ಟೇರ್ ಬೆಳೆ ನಾಶವಾಗಿದೆ    ಶುಂಠಿ ಹಾಗೂ ಜೋಳ ಕೊಳೆಯುವ ಹಂತಕ್ಕೆ ಬಂದಿದೆ ಇದರಿಂದ…

Read More

ಜೀವನದ ಕೊನೆ ಕ್ಷಣದವರೆಗೂ ಸಮಾಜ ಸೇವೆಗೆ ಸಿದ್ಧ : ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

ಆನಂದಪುರಂ: ಇಲ್ಲಿನ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ  ಸಾಗರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ. ಜೀವನದ ಕೊನೆ ಕ್ಷಣದವರೆಗೂ ಸಮಾಜಸೇವೆ ಮಾಡಲು ಸಿದ್ಧ.ಕೊವಿಡ್ ಸಂದರ್ಭದಲ್ಲಿ ಸರ್ಕಾರ ಅತೀ  ಹೆಚ್ಚಿನ ಗಮನ ಕೊಡಬೇಕಿತ್ತು, ಸರ್ಕಾರ ಅತಿ ಹೆಚ್ಚಿನ ಒತ್ತು ಕೊಟ್ಟಿಲ್ಲ , ಆದ್ದರಿಂದ ಹಲವರು ನೊಂದಿದ್ದಾರೆ,ಕಷ್ಟದಲ್ಲಿದ್ದಾರೆ. ಸಮಾಜದಲ್ಲಿ ಇನ್ನೂ ಕಡುಬಡವರಿದ್ದಾರೆ. ಅಂತಹವರನ್ನು ಗುರುತಿಸುವ ಕಾರ್ಯ ನಡೆಯಬೇಕು ಎಂದರು. ಕರೋನದ ಫ್ರಂಟ್ ಲೈನ್ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು,…

Read More

ಕೊರೊನಾ ನಡುವೆ ಯಶಸ್ವಿಯಾಗಿ ನಡೆದ ಮೊದಲ ಹಂತದ SSLC ಪರೀಕ್ಷೆ :

ಆನಂದಪುರ: ಕೊರೋನಾ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದು ಮೊದಲನೇ ದಿನ ಯಶಸ್ವಿಯಾಗಿ ನೆರವೇರಿತು. ಸರ್ಕಾರ ಪರೀಕ್ಷೆ ನಡೆಸಬೇಕೋ ನಡೆಸಬಾರದೋ ಎಂಬ ಗೊಂದಲದಿಂದ ಅಂತೂ ದಿನಾಂಕವನ್ನು ಫಿಕ್ಸ್ ಮಾಡಿ ಪರೀಕ್ಷೆಯನ್ನು ನಡೆಸಿತು. ಸಾಗರ ತಾಲ್ಲೂಕ್ ಹಾಗೂ ಹೊಸನಗರ ತಾಲೂಕಿನಾದ್ಯಂತ ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯು ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳಿಗೆ ಬೆಳಿಗ್ಗೆನೇ ವೈದ್ಯಕೀಯ ಪರೀಕ್ಷೆ ನಡೆಸಿ ಥರ್ಮಲ್ ಸ್ಕ್ಯಾನಿಂಗ್ ನೊಂದಿಗೆ ಮಾಸ್ಕ್ ವಿತರಿಸಿ ಪ್ರತಿ ಕೊಠಡಿಗೆ ಹನ್ನೆರಡು ವಿದ್ಯಾರ್ಥಿಗಳಂತೆ ಪರೀಕ್ಷೆ ಬರೆಸಲಾಯಿತು. ವಿಶೇಷವಾಗಿ ವಿದ್ಯಾರ್ಥಿಗಳಿಗೆ ನೀರಿನ…

Read More

ಮಾನವೀಯತೆ ಮರೆತಿದ್ದಾರೆ ಸಾಗರದ ಶಾಸಕರು: ಬೇಳೂರು ಗೋಪಾಲಕೃಷ್ಣ

ಆನಂದಪುರ:ಕಿಟ್ ಹಾಗೂ ಕೊರೊನಾ ಲಸಿಕೆ ನೀಡುವಲ್ಲಿ  ಸಾರ್ವಜನಿಕರಿಗೆ ವಂಚಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ರವರು ಶಾಸಕ ಹರತಾಳು ಹಾಲಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಾಗರ ತಾಲೂಕಿನ ಆನಂದಪುರದಲ್ಲಿ ಕಿಟ್ ನೀಡುವ ಸಭೆಯಲ್ಲಿ ಭಾಗವಹಿಸಿದಂತಹ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಸಾಗರದ ಶಾಸಕರು ಇದೀಗ ಮಾನವೀಯತೆಯನ್ನು ಮರೆತಿದ್ದಾರೆ ಕೇವಲ ತಮ್ಮ ಕಾರ್ಯಕರ್ತರಿಗೆ ಕಿಟ್ಟನ್ನು ನೀಡುವಲ್ಲಿ ಹಾಗೂ ಕೊರೋನಾ ಲಸಿಕೆ ಕೊಡಿಸುವತ್ತ ಗಮನ ಹರಿಸುತ್ತಿದ್ದಾರೆ ಇನ್ನುಳಿದ ಜನರು…

Read More

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಪಾಳುಬಿದ್ದಿವೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಪೋಲೀಸ್ ವಸತಿಗೃಹಗಳು:

ಆನಂದಪುರ: ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಪೊಲೀಸ್ ಉಪಠಾಣೆಯ ಸಿಬ್ಬಂದಿಗಳಿಗಾಗಿ ಸುಮಾರು ನಲವತ್ತು ವರ್ಷಗಳ ಹಿಂದೆ ಸರ್ಕಾರ ನಿರ್ಮಿಸಿದಂತಹ ಪೊಲೀಸ್ ವಸತಿ ಗೃಹಗಳು ಇಂದು ಸಂಪೂರ್ಣವಾಗಿ ಶಿಥಿಲಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಕಾಣುವಂತಹ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗದಲ್ಲಿ ನಿರ್ಮಿಸಿರುವಂತಹ 5 ಪೊಲೀಸ್ ವಸತಿ ಗೃಹಗಳು ಇದೀಗ ಸಂಪೂರ್ಣವಾಗಿ ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆಯ ಮುಖ್ಯ ತಾಣವಾಗಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದೆ. ಮದ್ಯವ್ಯಸನಿ ಗಳಿಗಂತೂ ಇದು ಅಡ್ಡವಾಗಿದ್ದು ಯಾವುದೇ ಭಯವಿಲ್ಲದೆ ವಸತಿಗೃಹದ…

Read More