ಆನಂದಪುರ: ತಾಲ್ಲೂಕಿನಲ್ಲಿ ಕಳೆದ ವಾರದಿಂದ ಸುರಿದ ಮಳೆಗೆ ಇದುವರೆಗೂ 50 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾಕುಮಾರಿ ಹೇಳಿದ್ದಾರೆ.
ಆನಂದಪುರ ಸಮೀಪದ ಹೊಸೂರು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಅತಿವೃಷ್ಟಿ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ ಸಾಗರ ತಾಲ್ಲೂಕಿನಲ್ಲಿ ಇದುವರೆಗೂ ಸುರಿದ ಮಳೆಗೆ ಐವತ್ತು ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಭತ್ತ ನಾಟಿ ಮಾಡಿ 500 ಹೆಕ್ಟೇರ್ ಬೆಳೆ ನಾಶವಾಗಿದೆ ಶುಂಠಿ ಹಾಗೂ ಜೋಳ ಕೊಳೆಯುವ ಹಂತಕ್ಕೆ ಬಂದಿದೆ ಇದರಿಂದ ಕೋಟ್ಯಂತರ ರೂ ನಷ್ಟವಾಗಿ ಇದೀಗ ರೈತರುಸಂಕಷ್ಟಕ್ಕೀಡಾಗಿದ್ದಾರೆ ಹಾಗೂ ಹಲವಾರು ಜನರು ಮನೆಗಳನ್ನು ಕಳೆದುಕೊಂಡು ಚಿಂತೆಯಲ್ಲಿದ್ದಾರೆ ಹಾಗಾಗಿ ಸರ್ಕಾರ ತಕ್ಷಣ ಕಾರ್ಯಪ್ರವೃತ್ತರಾಗಿ ನೊಂದವರಿಗೆ ನೆರವು ನೀಡಬೇಕು ಹಾಗೂ ಅಧಿಕಾರಿಗಳು ಸಹ ಪ್ರವಾಹದಂತ ಸಂದರ್ಭದಲ್ಲಿ ಮಿಂಚಿನಂತೆ ಕಾರ್ಯವನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ .ಉಪಾಧ್ಯಕ್ಷ ಅಶೋಕ್ ಬರದವಳ್ಳಿ ,ಹೊಸೂರು ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ್ ಹರಟೆ ,ಮುರಳೀಧರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ: ಪವನ್ ಕುಮಾರ್ ಕಠಾರೆ..
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..