ಅರಮನೆ ಹಳ್ಳ ಸೇತುವೆ: ಹಲವು ದಶಕಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ:ಹಳಿಯೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಹಲವು ದಶಕಗಳ  ಬೇಡಿಕೆಯಾದ ಅರಮನೆ ಹಳ್ಳ ಸೇತುವೆಗೆ ಹಣ ಬಿಡುಗಡೆಯಾಗಿದ್ದು ಕೆಲವೆ ದಿನಗಳಲ್ಲಿ ಕಾಮಗಾರಿ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದೆ.


  ಇಲ್ಲಿನ ಅರಮನೆ ಹಳ್ಳಕ್ಕೆ ಸೇತುವೆ ನಿರ್ಮಾಣ ವಿಚಾರದಲ್ಲಿ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಎಂಬ ಅಡಿಬರಹದಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಮಾಡಿತ್ತು.ಈ ವರದಿಗೆ ಕೂಡಲೇ ಸ್ಪಂದಿಸಿದ ಶಾಸಕ ಹರತಾಳು ಹಾಲಪ್ಪನವರ ಆಪ್ತ ಸಹಾಯಕರಾದ ಕೀರ್ತಿ ಗೌಡರವರು ಅರಮನೆ ಹಳ್ಳ ಸೇತುವೆಗೆ ಬಿಡುಗಡೆಯಾಗಿರುವ  ಅನುದಾನದ ಬಗ್ಗೆ ಮಾಹಿತಿ ನೀಡಿದರು.

 ಈ ಮೊದಲು 2017-18 ನೇ ಸಾಲಿನಲ್ಲಿ  ಶಾಸಕರಾದ ಹರತಾಳು ಹಾಲಪ್ಪನವರು ಅರಮನೆ ಹಳ್ಳಕ್ಕೆ ಪ್ರತ್ಯೇಕ ಎರಡು ಕಾಲು ಸಂಕ ನಿರ್ಮಾಣಕ್ಕೆ ಕ್ರಮವಾಗಿ ಸುಮಾರು 10 ಮತ್ತು 15 ಲಕ್ಷ  ರೂ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿ ಪ್ರಾರಂಭಗೊಂಡಿತು ಆದರೆ ದೊಡ್ಡ ಸೇತುವೆ ಬೇಕು ಎಂದು ಕಾಲು ಸಂಕ ನಿರ್ಮಾಣಕ್ಕೆ ಊರಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಕಾರಣ ಕಾಮಗಾರಿ ನೆನೆಗುದಿಗೆಗೆ ಬಿದ್ದಿತ್ತು.

     –  20/11/2021 ಶಾಸಕರಿಗೆ ಮನವಿ ಕೊಟ್ಟ ಸಂಧರ್ಭ-



ನಂತರ 20/11/2020 ಶಾಸಕರು ಹಾಗೂ ಸಂಸದರು ಗವಟೂರು-ನೆರಲಮನೆ-ಪೂಜಾರದಿಂಬ ರಸ್ತೆ ಗುದ್ದಲಿ ಪೂಜೆಗೆ ಬಂದಾಗ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ್  ಹಾಗೂ  ಕೀರ್ತಿ ಗೌಡರವರ ನೇತೃತ್ವದಲ್ಲಿ ಮಾನ್ಯ ಶಾಸಕರಿಗೆ ಅರಮನೆ ಹಳ್ಳ ಸೇತುವೆ ನಿರ್ಮಾಣದ ಬಗ್ಗೆ ಮನವಿಯನ್ನು ಕೊಡಲಾಯಿತು.

 –01/07/21ರಂದು ಅಧಿಕಾರಿಗಳು ಸ್ಥಳ ಪರಿಶೀಲಿಸಿದ ಸಂಧರ್ಭ-



 ಈ ಜ್ವಲಂತ ಸಮಸ್ಯೆಯ ಬಗ್ಗೆ ಕೂಡಲೇ ಸ್ಪಂದಿಸಿದ ಶಾಸಕರಾದ ಹಾಲಪ್ಪನವರು  ಸದರಿ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ನಿರ್ಮಿಸಲು 50 ಲಕ್ಷ ಅನುದಾನ ಮಂಜೂರು ಮಾಡಿಸಿದ್ದು, 01-07-2021 ರಂದು ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಎಸ್ಟಿಮೇಟ್ ಮಾಡಿದ್ದಾರೆ.ಮಳೆಗಾಲ ಮುಗಿದ ನಂತರ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಶಾಸಕರ ಆಪ್ತ ಕಾರ್ಯದರ್ಶಿ ಕೀರ್ತಿ ಗೌಡರವರು ಮಾಹಿತಿ ನೀಡಿದರು.

ಈ ವಿಚಾರದ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಗ್ರಾಮಸ್ಥರಾದ ನಾಗಭೂಷಣ್ ಹಾಗೂ ಕಶ್ಯಪ್ ರವರು ಕಳೆದ 60 ವರ್ಷಗಳಿಂದ ಸೇತುವೆ ಇಲ್ಲದೆ ಮಳೆಗಾಲದ ಸಂದರ್ಭದಲ್ಲಿ ಗವಟೂರು ಗ್ರಾಮದ ಹಳಿಯೂರು (ಮತ್ತಿಮನೆ, ಸಂಪಳ್ಳಿ ಸಂಪರ್ಕ)ಭಾಗದ ಜನರು ದಿನ ನಿತ್ಯದ ವಸ್ತುಗಳು, ಶಾಲೆಗೆ ಹೋಗುವ ಮಕ್ಕಳು, ಕೃಷಿ ಚಟುವಟಿಕೆಗಳಿಗೆ ಆಳು ಕೂಡ ಸಿಗುವುದಿಲ್ಲ, ಗೊಬ್ಬರ ತರಲು ಒದ್ದಾಡುತ್ತಿರುವ ಕೃಷಿಕರು ಸೇತುವೆ ಇಲ್ಲದೆ ಸಂಕಟಪಡುತ್ತಿದ್ದಾರೆ.ನಮ್ಮ ಊರಿಗೆ ಕೊನೇ ಪಕ್ಷ ಮಳೆಗಾಲದ ತುರ್ತು ಸಂಧರ್ಭದಲ್ಲಿ ಆಸ್ಪತ್ರೆಗೆ ಹೋಗಲು ಆಂಬ್ಯುಲೆನ್ಸ್ ಬಂದರೆ ಸಾಕು ಎಂಬ ಪರಿಸ್ಥಿತಿಯಲ್ಲಿದ್ದೆವು ಎಂದು ತಮ್ಮ ನೋವು ವ್ಯಕ್ತ ಪಡಿಸಿದರು.

     ಸೇತುವೆ ಇಲ್ಲದೇ ಹೊಳೆ ದಾಟುತ್ತಿರುವ ಗ್ರಾಮಸ್ಥರು



ನಮ್ಮ ಊರಿಗೆ ಹೋಗಲು ಯಾವುದೇ ಪರ್ಯಾಯ ಮಾರ್ಗ ಇರುವುದಿಲ್ಲ ಹಾಗಾಗಿ ನಾವು ಕಾಲುಸಂಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದೆವು.

 ಈಗ ಶಾಸಕರಾದ ಹರತಾಳು ಹಾಲಪ್ಪನವರ ಸಹಕಾರದಿಂದ ನಮ್ಮ ಊರಿಗೆ ಸೇತುವೆ ನಿರ್ಮಾಣವಾಗುತ್ತಿರುವುದರಿಂದ ಸಂತಸವಾಗಿದೆ  ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.

ಒಟ್ಟಾರೆಯಾಗಿ ಆರು ದಶಕಗಳ ಬೇಡಿಕೆಯಾದ ಅರಮನೆಹಳ್ಳ ಸೇತುವೆ ನಿರ್ಮಾಣವಾಗುತ್ತಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.ಶಾಸಕರ ಕಾರ್ಯವೈಖರಿಯನ್ನು ಪ್ರಶಂಸಿದ್ದಾರೆ.




ರಿಪ್ಪನ್ ಪೇಟೆ ವರದಿ:




ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

Leave a Reply

Your email address will not be published. Required fields are marked *