ಸಾಗರ ನಗರಸಭೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ : ಶಾಸಕ ಹರತಾಳು ಹಾಲಪ್ಪ ರಿಂದ ಕಾರ್ಯಕ್ರಮಕ್ಕೆ ಚಾಲನೆ

ಸಾಗರ : ಇಲ್ಲಿನ ನಗರಸಭೆಯ ಗಾಂಧಿ ಮದಿರದಲ್ಲಿ ಇಂದು ಪೌರ ಕಾರ್ಮಿಕರ ದಿನಾಚರಣೆಗೆ ಶಾಸಕ ಹರತಾಳು ಹಾಲಪ್ಪನವರು ದೀಪಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ  ವಿತರಿಸಲಾಯಿತು.ಹಾಗೂ ಪೌರ ಕಾರ್ಮಿಕರ ಸಂಘದ ಸಾಗರ ನಗರಸಭೆಯ ಶಾಖೆಯ ಅಧ್ಯಕ್ಷರಾದ AEE ಹೆಚ್.ಕೆ. ನಾಗಪ್ಪ ರವರನ್ನು ಪೌರ ಕಾರ್ಮಿಕರು ಮತ್ತು ಶಾಸಕ ಹಾಲಪ್ಪನವರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು.  ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷೆ ಮಧುರಾ ಶಿವಾನಂದ್, ಪೌರಾಯುಕ್ತ…

Read More

ಸಾಗರ : ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಇಬ್ಬರು ಯುವಕರ ಆತ್ಮಹತ್ಯೆ :

ಸಾಗರ: ಇಲ್ಲಿನ ಜೋಗ ಬಸ್ ನಿಲ್ದಾಣದ ಸಮೀಪದ ಖಾಸಗಿ ಲಾಡ್ಜ್‌ವೊಂದರಲ್ಲಿ ಇಬ್ಬರು ಯುವಕರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಹಟ್ಟಿ ಗ್ರಾಮದ ಸಂತೋಷ್ (23) ಮತ್ತು ಹನುಮಂತ (28) ಜೀವತೆತ್ತ ಯುವಕರು. ಸಂತೋಷ್ ಮತ್ತು ಹನುಮಂತ ಅವರು ಸೆ. 24ರ ತಡರಾತ್ರಿ ಲಾಡ್ಜ್‌ಗೆ ಬಂದು ಡಬ್ಬಲ್ ಬೆಡ್‌ರೂಂ ಬಾಡಿಗೆಗೆ ಪಡೆದಿದ್ದರು. ಶನಿವಾರ ಮಧ್ಯಾಹ್ನ ಇಬ್ಬರೂ ಹೊರಗೆ ಬಂದು ಊಟ ತೆಗೆದುಕೊಂಡು ರೂಮ್ ಸೇರಿಕೊಂಡಿದ್ದರು ಎನ್ನಲಾಗಿದೆ. ಶನಿವಾರ…

Read More

20 ವರ್ಷಗಳಿಂದ ದುರಸ್ತಿ ಕಾಣದೆ ಇರುವ ಗ್ರಾಮದ ಬಸ್ ನಿಲ್ದಾಣವನ್ನು ಯುವಕನೊಬ್ಬನಿಂದ ಸ್ವಚ್ಚ : ಯುವಕನ ಕಾರ್ಯಕ್ಕೆ ದಾರಿಹೋಕರಿಂದ ಶ್ಲಾಘನೆ :

ಸಾಗರ : 20 ವರ್ಷಗಳಿಂದ ಬಸ್ ಸ್ಟ್ಯಾಂಡ್ ಕಾಣದೆ ಇರುವ ಗ್ರಾಮದ ಬಸ್ ನಿಲ್ದಾಣವನ್ನು ಏಕ ವ್ಯಕ್ತಿಯಿಂದ ಸ್ವಚ್ಚ.ಯುವಕನ ಕಾರ್ಯಕ್ಕೆ ದಾರಿಹೋಕರಿಂದ ಶ್ಲಾಘನೆ. ನಮ್ಮ ದೇಶ ಸ್ವಾತಂತ್ರ ಬಂದು ಅದೆಷ್ಟೋ ವರ್ಷ ಕಳೆದಿವೆ ಆದರೆ ಇನ್ನೂ ಕೂಡ ಕೆಲವು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಬಸ್ ಸ್ಟ್ಯಾಂಡ್ ಇಲ್ಲದೆ ಸಾರ್ವಜನಿಕರು ಶಾಲೆಗೆ ಹೋಗು ಬರುವ ವಿದ್ಯಾರ್ಥಿಗಳು ಕಿರಿಕಿರಿ ಅನುಭವಿಸುತ್ತಿರುವುದನ್ನು ಕಂಡು ಇಲ್ಲೊಬ್ಬ ಯುವಕ ಬಸ್ ನಿಲ್ದಾಣವನ್ನು ಸ್ವಚ್ಚ…

Read More

ಸಾಗರ : ಮಹಿಳೆಗೆ ಅಮಿಷವೊಡ್ಡಿ ಮತಾಂತರಕ್ಕೆ ಯತ್ನ :ಇಬ್ಬರ ಬಂಧನ

ಶಿವಮೊಗ್ಗ : ಸಾಗರ ತಾಲೂಕಿನಲ್ಲಿ ಮತಾಂತರಕ್ಕೆ ಯತ್ನಿಸಿದ್ದ ಇಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ತಾಲೂಕಿನ ತಾಳಗುಪ್ಪದಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದ ಜೋಗ್‌ಫಾಲ್ಸ್‌ನ ಅನಿಲ್ ಕುಮಾರ್ ಹಾಗೂ ಪತ್ನಿ ಪ್ರಶಾಂತಿ ಅವರನ್ನು ಬಂಧಿಸಲಾಗಿದೆ. ಜ್ಯೋತಿ ಎಂಬುವವರ ಪತಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರ ಮನೆಗೆ ಬಂದಿದ್ದ ಪ್ರಶಾಂತಿ ಮತ್ತು ಅನಿಲ್ ಕುಮಾರ್ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ.  ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ…

Read More

ಸಾಗರ : ಅಕ್ರಮವಾಗಿ ಶೇಖರಿಸಿಟ್ಟಿದ್ದ ಗಾಂಜಾ ಪತ್ತೆ

ಸಾಗರ : ತಾಲ್ಲೂಕ್ಕಿನ ವ್ಯಾಪ್ತಿಯ ಕಬ್ಬನದಕೊಪ್ಪ ಗ್ರಾಮದಲ್ಲಿ ವಾಸದ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಕಬ್ಬನದಕೊಪ್ಪ ಗ್ರಾಮದ ಪುಟ್ಟಪ್ಪ ಇವರಿಗೆ ಸೇರಿದ ವಾಸದ ಮನೆಯ ಮೊದಲನೆ ಕೊಠಡಿಯಲ್ಲಿ ಅಕ್ರಮವಾಗಿ ಸುಮಾರು 330 ಗ್ರಾಂ ಹಸಿ ಗಾಂಜಾವನ್ನು ಪತ್ತೆಹಚ್ಚಿ ಸದರಿ ಕೃತ್ಯವು ಎನ್.ಡಿ .ಪಿ. ಎಸ್ ಕಾಯ್ದೆ 1985 ರ ಕಲಂ 8(ಸಿ) ರೀತ್ಯಾ ಉಲ್ಲಂಘನೆ ಹಾಗೂ ಇದೇ ಕಾಯ್ದೆಯ ಕಲಂ 20(b) 20 (ii) (A),25 ರೀತ್ಯಾ ಶಿಕ್ಷಾರ್ಹ ಅಪರಾಧವಾಗಿರುವ ಕಾರಣ ಮೊಕದ್ದಮೆಯನ್ನು ದಾಖಲಿಸಲಾಯಿತು. …

Read More

ಸಾಗರ : ಪಡವಗೋಡು ಬಂಗಾರಪ್ಪ ಇನ್ನಿಲ್ಲ!!

ಸಾಗರ : ಇಲ್ಲಿನ ಪಡವಗೋಡು ಗ್ರಾಮ ಪಂಚಾಯತಿಯಲ್ಲಿ ಎರಡು ಬಾರಿ ಅಧ್ಯಕ್ಷರಾಗಿದ್ದ ಹಾಗೂ ಹಾಲಿ ಪಡವಗೋಡು ಗ್ರಾಮ ಪಂಚಾಯಿತಿಯ ಸದಸ್ಯರಾದ  ಪಡವಗೋಡು ಬಂಗಾರಪ್ಪ(ಬಂಗಾರಣ್ಣ) ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಎರಡು ದಿನಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಆದರೆ ರಕ್ತದೊತ್ತಡ ಹೆಚ್ಚಿರುವ ಕಾರಣ ಅಲ್ಲಿಯೇ ಒಳರೋಗಿಯಾಗಿ ದಾಖಲಾಗಲು ತಿಳಿಸಿದ್ದಾರೆ ತಕ್ಷಣದಲ್ಲಿ ‍ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲುಮಾಡಲು ಅವರ ಸ್ನೇಹಿತರು ಪ್ರಯತ್ನ…

Read More

ಸಾಗರ : ನೂತನ ಸಚಿವರಾದ ಸಾಗರದ ಅಳಿಯಂದರಿಗೆ ತಾಲೂಕ್ ಬಿಜೆಪಿ ಯಿಂದ ಸನ್ಮಾನ

ಸಾಗರ : ನಗರದ ಗಾಂಧಿ ಮೈದಾನದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ವತಿಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದ ನೂತನ ಸಚಿವರು ಹಾಗೂ ಸಾಗರದ ಅಳಿಯಂದಿರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಸಕ ಹರತಾಳು ಹಾಲಪ್ಪ ನವರ ನೇತ್ರತ್ವದಲ್ಲಿ ನಡೆದ ಸಚಿವರಿಗೆ ಅಭಿನಂದನಾ ಕಾರ್ಯಕ್ರವು ಒಂದು ಭಾವಪೂರ್ಣ ಸಮಾರಂಭವಾಗಿತ್ತು. ಚೌತಿ ಹಬ್ಬಕ್ಕೆ ತವರಿಗೆ ಬಂದಿದ್ದ ಹೆಣ್ಣು ಮಕ್ಕಳು ಜತೆಗೆ ತಮ್ಮ ಪತಿಯಂದಿರನ್ನೂ ಕರೆದುಕೊಂಡು ಬಂದು ಉಡಿತುಂಬಿಸಿಕೊಂಡರು. ಊರಿನ ಅಳಿಯಂದಿರು ಸುಮ್ಮನೆ ಮಾವನ ಮನೆಗೆ ಬಂದು ಊರಿನ…

Read More

ಮಲೆನಾಡು ಭಾಗದ ನೆಟ್ ವರ್ಕ್ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ: ಶಾಸಕ ಹರತಾಳು ಹಾಲಪ್ಪ

ಸಾಗರ :: ಮಲೆನಾಡು ಭಾಗದಲ್ಲಿ ಉಂಟಾಗಿರುವ ನೆಟ್ ವರ್ಕ್ ಸಮಸ್ಯೆಯಿಂದ ಅನೇಕ ಜನರಿಗೆ ಆನ್ ಲೈನ್ ಮೂಲಕ ಮಾಡುವ ಕೆಲಸಗಳಿಗೆ ತೊಂದರೆ ಆಗುತ್ತಿದ್ದು ಮತ್ತು ರಾಜ್ಯದಲ್ಲಿ ತಹಸೀಲ್ದಾರ್ ಕನ್ವರ್ಟೆಡ್ ನಿವೇಶನಗಳ ಸಮಸ್ಯೆಗಳ ಕುರಿತು ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಇವರ ಗಮನಕ್ಕೆ ತಂದಿದ್ದು ಶೀಘ್ರದಲ್ಲೇ ಇದನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ ಇದರಿಂದ  ಅನೇಕ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಹರತಾಳು ಹಾಲಪ್ಪ  ತಿಳಿಸಿದರು ಅವರು ಇಂದು ಸಾಗರ ನಗರಸಭೆ ಹಮ್ಮಿಕೊಂಡಿದ್ದ 2021 ನೇ ಸಾಲಿನ 15ನೇಹಣಕಾಸು ಅನುದಾನದಲ್ಲಿ…

Read More

ಸಾಗರ : ಕೊರೊನಾ ಜಾಗೃತಿ ಕುರಿತು ಜೋಗಿಪದ ಕಾರ್ಯಕ್ರಮ

ಸಾಗರ :ನೆಹರು ಯುವ ಕೇಂದ್ರ ಶಿವಮೊಗ್ಗ ಮತ್ತು ಸಾಗರ ತಾಲ್ಲೂಕಿನ ಶ್ರೀ ಆನಂದೇಶ್ವರ ಕಲಾ ಸಂಘ ಇವರ ವತಿಯಿಂದ ಕೊರೊನಾ ಜಾಗೃತಿ ಕುರಿತು ಜೋಗಿ ಪದ ಕಾರ್ಯಕ್ರಮವನ್ನು ಸಾಗರದ ದೇವರಾಜ ಅರಸು ಸಭಾ ಭವನದಲ್ಲಿ ಇಂದು ಏರ್ಪಡಿಸಲಾಗಿತ್ತು.  ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಎಂಎಸ್‍ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಡಾ.ವಾಸುದೇವ, ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಪ್ರಕಾಶ್ ಭೋಸ್ಲೆ, ಆರೋಗ್ಯ ಇಲಾಖೆ ಸಂಘದ ಜಿಲ್ಲಾಧ್ಯಕ್ಷ ಮ.ಸ,ನಂಜುಂಡಸ್ವಾಮಿ, ತಾಲ್ಲೂಕು ಆರೋಗ್ಯ ಇಲಾಖೆ ನೌಕರರ…

Read More

ಮಧು ಬಂಗಾರಪ್ಪ ಹಾಗುಾ ಮಂಜುನಾಥ್ ಗೌಡರ ಕಾಂಗ್ರೆಸ್ ಸೇರ್ಪಡೆ ಪಕ್ಷಕ್ಕೆ ಬಲ ತಂದಿದೆ : ಗೋಪಾಲಕೃಷ್ಣ ಬೇಳೂರು

ಸಾಗರ:ಮಧು ಬಂಗಾರಪ್ಪ ಮತ್ತು ಮಂಜುನಾಥ ಗೌಡರ ಕಾಂಗ್ರೆಸ್ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಬಲ ಬಂದಿದೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ ಮತ್ತು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಿರಿಯರಾದ ಕಾಗೋಡು ತಿಮ್ಮಪ್ಪನವರ ಮಾರ್ಗದರ್ಶನದಲ್ಲಿ ಮುನ್ನಡೆಯಲಾಗುವುದು ಎಂದು ಮಾಜಿ ಶಾಸಕರು ಕೆಪಿಸಿಸಿ ವಕ್ತಾರರು ಆದ ಗೋಪಾಲಕೃಷ್ಣ ಬೇಳೂರು  ಹೇಳಿದರು  ಅವರು ಇಂದು ಸಾಗರದ ಅಗ್ರಹಾರದ ರಾಘವೇಶ್ವರ ಭವನದಲ್ಲಿ ಏರ್ಪಡಿಸಲಾಗಿದ್ದ ಮಧು ಬಂಗಾರಪ್ಪ ಮತ್ತು ಆರ್ ಎಂ ಮಂಜುನಾಥ ಗೌಡರ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾಗತ ಸ್ವೀಕರಿಸಿ ಮಾತನಾಡಿದ  ಸೊರಬದ   ಮಾಜಿ…

Read More