ಸಾಗರ:ಮಧು ಬಂಗಾರಪ್ಪ ಮತ್ತು ಮಂಜುನಾಥ ಗೌಡರ ಕಾಂಗ್ರೆಸ್ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಬಲ ಬಂದಿದೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ ಮತ್ತು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಿರಿಯರಾದ ಕಾಗೋಡು ತಿಮ್ಮಪ್ಪನವರ ಮಾರ್ಗದರ್ಶನದಲ್ಲಿ ಮುನ್ನಡೆಯಲಾಗುವುದು ಎಂದು ಮಾಜಿ ಶಾಸಕರು ಕೆಪಿಸಿಸಿ ವಕ್ತಾರರು ಆದ ಗೋಪಾಲಕೃಷ್ಣ ಬೇಳೂರು ಹೇಳಿದರು
ಅವರು ಇಂದು ಸಾಗರದ ಅಗ್ರಹಾರದ ರಾಘವೇಶ್ವರ ಭವನದಲ್ಲಿ ಏರ್ಪಡಿಸಲಾಗಿದ್ದ ಮಧು ಬಂಗಾರಪ್ಪ ಮತ್ತು ಆರ್ ಎಂ ಮಂಜುನಾಥ ಗೌಡರ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಗತ ಸ್ವೀಕರಿಸಿ ಮಾತನಾಡಿದ ಸೊರಬದ ಮಾಜಿ ಶಾಸಕರಾದ ಮಧು ಬಂಗಾರಪ್ಪ ಎಲ್ಲರೂ ಸೇರಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸೋಣ ಇದಕ್ಕೆ ಹಿರಿಯರಾದ ಕಾಗೋಡು ತಿಮ್ಮಪ್ಪನವರ ಆಶೀರ್ವಾದ ಇದೆ ಮತ್ತು ಪಕ್ಷದ ಕಾರ್ಯಕರ್ತರ ನೆರವಿನಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ತರುವುದೇ ಮುಖ್ಯ ಗುರಿಯಾಗಿದೆಎಂದು ಹೇಳಿದರು
ಸಭೆಯಲ್ಲಿ ಮಾಜಿ ವಿಧಾನಸಭಾ ಅಧ್ಯಕ್ಷರಾದ ಶ್ರೀ ಕಾಗೋಡು ತಿಮ್ಮಪ್ಪನವರು .ಆರ್. ಎಂ ಮಂಜುನಾಥಗೌಡ ಸಾಗರ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಿ. ಆರ್ ಜಯಂತ್. ರಾಜನಂದಿನಿ ಕಾಗೋಡು.ಮಲ್ಲಿಕಾರ್ಜುನ ಹಕ್ರೆ. ನಗರಸಭೆ ವಿರೋಧ ಪಕ್ಷದ ನಾಯಕ ಗಣಪತಿ ಮಂಡಗಳಲೆ.ಶ್ರೀಮತಿ ಅನಿತಾ ಕುಮಾರಿ ಕಾಂಗ್ರೆಸ್ ಪಕ್ಷದ ನಗರ ಅಧ್ಯಕ್ಷರಾದ ಸುರೇಶ್ ಬಾಬು ನಗರಸಭಾ ಸದಸ್ಯೆ ಲಲಿತಮ್ಮ ಮತ್ತು ಅನೇಕ ಮುಖಂಡರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು
ವರದಿ : ಧರ್ಮರಾಜ್. ಜಿ ಸಾಗರ